ದಿನಾಂಕ 24.08.2013 ರಂದು ನಮ್ಮ ಶಾಲೆಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು. ರಕ್ಷಾಬಂಧನದ ಮಹತ್ವದ ಬಗ್ಗೆ ಕಾಂಚನಾ ಸುಬ್ರಹ್ಮಣ್ಯ ಭಟ್ ಮಾತಾಡಿದರು. ವ್ಯಕ್ತಿಗಳು ಸಂಸ್ಕಾರವಂತರಾಗಬೇಕು, ಹಿಂದು ಜೀವನ ಮೌಲ್ಯಗಳಿಗೆ ಅನುಗುಣವಾಗಿ ಬಾಳುವ ಸಜ್ಜನರಾಗಬೇಕು ದೇಶಹಿತಕ್ಕೆ ಆದ್ಯತೆಕೊಟ್ಟು ಜೀವನ ನಡೆಸುವ ದೇಶಭಕ್ತರಾಗಬೇಕು, ಮೇಲು ಕೀಲು, ಅಸ್ಪೃಶ್ಯತೆಗಳಂತಹ ವಿಕೃತಿಗಳನ್ನು ಹೋಗಲಾಡಿಸಬೇಕು ಸಮಾಜದ ಕೊರತೆಗಳನ್ನು ನೀಗಿಸಲು ದೀನ -ದು:ಖಿತರ ಸೇವೆಗೆ ಸಮರ್ಪಿತರಾದ ರಾಷ್ಟ್ರಸೇವಕರಾಗಬೇಕು, ಜಾತಿ-ಮತ-ಪಂಥ-ಪಕ್ಷಗಳ ಮೇರೆ ಮೀರಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಹರಿಕಾರರಾಗಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾಗಿರುವ ಶ್ರೀ ಅಚ್ಯುತ ನಾಯಕ್‌ರವರು ಉಪಸ್ಥಿತರಿದ್ದರು. ರಕ್ಷಾಬಂಧನದ ಸಂದೇಶವನ್ನು ವಿದ್ಯಾರ್ಥಿ ವಾಚಿಸಿದನು. ಸಿಹಿತಿಂಡಿ ವಿತರಿಸಲಾಯಿತು.