ಭಾರತೀಯ ಮೂಲ ರಕ್ಷಣಾ ಕಲೆಯಾದ ಕರಾಟೆ ವಿದ್ಯಾರ್ಥಿಜೀವನದ ಅವಿಭಾಜ್ಯ ಅಂಗ. ಕರಾಟೆಯಿಂದ ಸ್ವರಕ್ಷಣೆ ಸಾಧ್ಯ. ಎಲ್ಲರೂ ಈ ಕಲೆಯನ್ನು ಕಲಿಯಬೆಕು ಎಂದು ವಿವೇಕಾನಂದ ತಾಂತ್ರಿಕ ವಿದ್ಯಾಲಯದ ನಿರ್ದೇಶಕರಾದ ಶ್ರೀ ಸೇಡಿಯಾಪು ಜನಾರ್ದನ ಭಟ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾದ ದ.ಕ.ಜಿ.ಪ. ಸದಸ್ಯೆ ಶ್ರೀಮತಿ ಮೀನಾಕ್ಷಿ ಮಂಜುನಾಥ್ ಮಾತನಾಡುತ್ತಾ ಕರಾಟೆ ನಮ್ಮ ಜೀವನದಲ್ಲಿ ಕತ್ತಲೆಯಲ್ಲಿ ಟಾರ್ಚ್ ಇದ್ದಂತೆ ಮುಂಜಾಗ್ರತೆಗೆ ಸಹಕಾರಿ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ| ಕೆ.ಎಂ.ಕೃಷ್ಣ ಭಟ್ ಸಭಾಧ್ಯಕ್ಷ ನೆಲೆಯಲ್ಲಿ ಮಾತನಾಡುತ್ತಾ ನಮ್ಮದೇ ರಕ್ಷಣಾ ಕಲೆ ಕರಾಟೆ ಇಂದು ವಿದೇಶೀಯರಿಂದ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಕರಾಟೆಯನ್ನು ನಾವು ನಮ್ಮದೆ ಶೈಲಿಯಲ್ಲಿ ಕಲಿತಾಗ ಭಾರತೀಯ ಪದ್ಧತಿ ಉಳಿಸಲು ಸಾಧ್ಯ ಎಂದು ಹೆಳಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಶ್ರೀ ರವೀಂದ್ರ. ಪಿ, ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಕರಾಟೆ ತರಬೇತುದಾರ ಶ್ರೀ ಸುರೇಶ್ ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ವಿದ್ಯಾ ಅನಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ೯ನೇ ತರಗತಿಯ ಶ್ರಮಾ ಸಿ.ಜಿ. ಸ್ವಾಗತಿಸಿ, ೧೦ನೇ ತರಗತಿಯ ಅರ್ಚನಾ ಕೆ.ಎಲ್. ವಂದಿಸಿದರು. ೮ನೇ ತರಗತಿಯ ತೃಪ್ತಿ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕರಾಟೆ ಶಿಕ್ಷಕ ಶ್ರೀ ಸುರೇಶ್ ಕರಾಟೆಯ ಉಪಯೋಗಗಳ ಕುರಿತು ಮಾದರಿ ತರಗತಿ ನೀಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು.