QR Code Business Card

ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಪ್ರೇರಣಾ ವಿಜ್ಞಾನ ಪ್ರಯೋಗಾಲಯ ಲೋಕಾರ್ಪಣೆ

ಪುತ್ತೂರು: ಅ.೩೦, ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ, ಪುತ್ತೂರು ಇದರ ಪ್ರೇರಣಾ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಶಾಲಾ ಆವರಣದಲ್ಲಿ ನಡೆಯಿತು.

ಶ್ರೀ ಬಲರಾಮ ಆಚಾರ್ಯ ಜಿ.ಎಲ್, ಅಧ್ಯಕ್ಷರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಜ್ಞಾನ , ವಿಜ್ಞಾನ, ತಂತ್ರಜ್ಞಾನ ಇವತ್ತಿನ ಅವಶ್ಯಕತೆಗಳಾಗಿವೆ. ಇವುಗಳನ್ನು ಸಂಪಾದಿಸಲು ಪ್ರಯೋಗಾಲಯಗಳು ಅವಶ್ಯಕ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಕೃಷಿ ವಿಜ್ಞಾನಿ ಶ್ರೀ ಶಂಕರ ಭಟ್ ಬದನಾಜೆ ಪ್ರತಿಯೊಬ್ಬ ಅಧ್ಯಾಪಕ ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದಾಗ ವಿದ್ಯಾರ್ಥಿಗಳ ಮನೋಕೌಶಲ್ಯಗಳು ಪರಿಪಕ್ವಗೊಳ್ಳುವುದು. ಮೌಲ್ಯಾಧಾರಿತ ಶಿಕ್ಷಣ ದೊರೆಯುವುದು ಪ್ರಯೋಗಗಳ ಮೂಲಕ ಎಂದರು.

ವೇದಿಕೆಯಲ್ಲಿ ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ.ಎ.ಪಿ.ಭಟ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ಶಶಿಧರ, ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಶ್ರೀ ಪಿ.ರವೀಂದ್ರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ.ಪ್ರಸನ್ನ ಹೆಬ್ಬಾರ್ ಹಾಗೂ ಶ್ರೀ ರಾಮಣ್ಣ ಗೌಡ, ಸಂಪನ್ಮೂಲ ವ್ಯಕ್ತಿ ಪ್ರೊ. ಕೃಷ್ಣ ಕಾರಂತ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಂ.ಕೃಷ್ಣ ಭಟ್ ಪ್ರಸ್ತಾವಿಸಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಸದಸ್ಯೆ ಡಾ.ಸುಲೇಖ ವರದರಾಜ್ ಸ್ವಾಗತಿಸಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿದರು.  ಶಾಲಾ ಸಹಶಿಕ್ಷಕರಾದ ಶ್ರೀ ರಾಜೇಶ್.ಎನ್.ನೆಲ್ಲಿತ್ತಡ್ಕ ಹಾಗೂ ಶ್ರೀಮತಿ ಸಾಯಿಗೀತಾ.ಎಸ್ ಕಾರ್ಯಕ್ರಮ ನಿರೂಪಿಸಿದರು.