QR Code Business Card
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Saturday, August 25th, 2018

ದಿನಾಂಕ 25-8-2018 ನೇ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ, ಭಕ್ತಕೋಡಿ ಇಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಸಮರ್ಥರಾಮ ರೈ.ಎಂ.ಎಸ್, ಹಿತೇಶ್, ಲಿಖಿತ್.ಪಿ, ಯಶ್ವಿನ್.ಡಿ, ಜಿ.ಕಾರ್ತಿಕ್ ಪ್ರಭು, ಪ್ರಣಮ್.ಎಂ.ವೈ, ಶರಣ್.ಎಸ್, ಜೀವಿತ್.ಡಿ, ಶಮಿತ್ ಗೌಡ.ಎ, ಹೈಭೊರ್ಫಿ ಲಮಾರೆ, ಯಾಕ್ರೋ ಪಾಪಾ, ಪಿನ್‌ಯೋಲಾಡ್ ಮಿಕ್ಕಿ ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

Invitation : Atal Thinkering Lab Inauguration

Invitation : Atal Thinkering Lab Inauguration

Monday, August 20th, 2018
72ನೇ ಸ್ವಾತಂತ್ರ್ಯ ದಿನಾಚರಣೆ

72ನೇ ಸ್ವಾತಂತ್ರ್ಯ ದಿನಾಚರಣೆ

Wednesday, August 15th, 2018

ವಿವೇಕಾನಂದ ಆಂಗ್ಲ ಮಾಧ್ಯಮಶಾಲೆ ತೆಂಕಿಲ ಪುತ್ತೂರು ಮತ್ತು ವಿವೇಕಾನಂದ ಬಿ.ಎಡ್ ಕಾಲೇಜು ಮತ್ತು ನರೇಂದ್ರ ಪಿ.ಯು.ಕಾಲೇಜು, ತೆಂಕಿಲ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆಯು ದಿನಾಂಕ 15-8-2018 ರಂದು ಶಾಲಾ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಭಾರತೀಯ ನೌಕದಳದ ನಿವೃತ್ತ ಯೋಧರಾದ ಶ್ರೀಪ್ರಕಾಶ್ ಕುಕ್ಕಿಲ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣ ಗೈದುದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳನ್ನು ನಾವು ಸದಾ ಸ್ಮರಿಸಬೇಕು ಮಾತ್ರವಲ್ಲ ಸಿಕ್ಕಿದ ಸ್ವಾತಂತ್ರ್ಯವನ್ನು ಉಳಿಸುವಲ್ಲಿ ಮಕ್ಕಳು ಪ್ರಧಾನ ಪಾತ್ರವಹಿಸಬೇಕು ಎಂದು […]

ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Saturday, August 11th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಸರಕಾರಿ ಪ್ರೌಢ ಶಾಲೆ, ಶಾಂತಿನಗರ ಇದರ ಆಶ್ರಯದಲ್ಲಿ ದಿನಾಂಕ 11.08-2018 ರಂದು ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9 ವಿದ್ಯಾರ್ಥಿಗಳು ಭಾಗವಹಿಸಿ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 17 ರ ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ಸಾತ್ವಿಕ್ ಶಿವಾನಂದ (9) ಮತ್ತು ಬಾಲಕಿಯರಲ್ಲಿ ದೀಪ್ತಿಲಕ್ಷ್ಮಿ(8ನೇ) ಮತ್ತು ಶುಭಶ್ರೀ(9ನೇ). 14 ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ವಿಕಾಸ್(8ನೇ) 14 ವಯೋಮಾನದ ಪ್ರಾಥಮಿಕ ವಿಭಾಗದಲ್ಲಿ […]

ಆಶ್ರಯ ಪಿ. ಗೆ ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

ಆಶ್ರಯ ಪಿ. ಗೆ ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

Thursday, August 9th, 2018

ಚೆನೈನ ಕಿಲ್ಪಕ್ ಜೆ. ಜೆ. ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ.  2 ಪ್ರಶಸ್ತಿ ಗಳಿಸಿದ್ದಾರೆ. 12 ರಿಂದ 14 ವಯೋಮಿತಿಯಲ್ಲಿ ಗ್ರೀನ್ ಟು ಬ್ರೌನ್ ಬೆಲ್ಟ್ ವಿಭಾಗದಲ್ಲಿ ವೈಯಕ್ತಿಕ ಕಟಾದಲ್ಲಿ ಪ್ರಥಮ ಹಾಗೂ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಈಕೆ ಚೇತನಾ ಸ್ಟುಡಿಯೋ ಮಾಲಕರಾದ ಅಶೋಕ್ ಕುಂಬ್ಳೆ ಹಾಗೂ ಶೋಭಾ ಬಿ. ದಂಪತಿ ಪುತ್ರ.

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟಕ್ಕೆ ಆಯ್ಕೆ

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟಕ್ಕೆ ಆಯ್ಕೆ

Thursday, August 9th, 2018

ವಿದ್ಯಾಭಾರತಿ ಕರ್ನಾಟಕ ಮತ್ತು ಅಮೃತ ಭಾರತಿ ವಿದ್ಯಾಸಂಸ್ಥೆಗಳು ಹೆಬ್ರಿ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 3 ರಂದು ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಹೃತಿಕ್.ಎಂ, ಅಭಿರಾಮ್, ಮುರಳಿ, ನಿತೇಶ್, ಪ್ರಣವ್.ಎಸ್, ಚರಣ್.ಬಿ.ಜೆ, ಅದಿತ್, ರಾಜನೀಶ್, ಪ್ರಥಮ್ ಬಂಗೇರ್, ಸುಶಾನ್, ಚರಣ್ ಭಾಗವಹಿಸಿರುತ್ತಾರೆ. ಹೃತಿಕ್.ಎಂ ಕ್ರೀಡಾಕೂಟದಲ್ಲಿ ಉತ್ತಮ ಎತ್ತುಗಾರಿಕೆ ಪ್ರಶಸ್ತಿಯನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Wednesday, August 8th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಕೆಮ್ಮಿಂಜೆ, ಇದರ ಆಶ್ರಯದಲ್ಲಿ ದಿನಾಂಕ 6-8-2018 ರಂದು ನಡೆದ ಪುತ್ತೂರು ನಗರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿ 9 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 17 ರ ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ಅಂಕಿತ್.ಕೆ.ಎಲ್. (10ನೇ), ಮತ್ತು ಸಾತ್ವಿಕ್ ಶಿವಾನಂದ ಮತ್ತು ಬಾಲಕಿಯರಲ್ಲಿ ದೀಪ್ತಿಲಕ್ಷ್ಮಿ (8ನೇ) ಮತ್ತು ಶುಭಶ್ರೀ (9ನೇ). 14 ವಯೋಮಾನದ ವಿಭಾಗದಲ್ಲಿ ಬಾಲಕರಲ್ಲಿ ವಿವೇಕ […]

ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

Tuesday, August 7th, 2018

ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಚೆಸ್ ಪಂದ್ಯಾಟವು ಶಿವಮೊಗ್ಗ ಜಿಲ್ಲೆಯ ಸೇವಾ ಭಾರತಿ ವಿದ್ಯಾ ಕೇಂದ್ರ ತೀರ್ಥಹಳ್ಳಿಯಲ್ಲಿ ದಿನಾಂಕ 2-8-2018 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗ ವಿದ್ಯಾರ್ಥಿಗಳಾದ ಪಂಕಜ್.ಭಟ್ (7ನೇ), ಶಿವಚೇತನ್ (7ನೇ), ಪ್ರಣೀಲ್ ರೈ(6ನೇ), ಮನ್ವಿತ್.ಕೆ(7ನೇ), ಧನುಷ್ ರಾಮ(6ನೇ) ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ತೆಲಂಗಾಣದಲ್ಲಿ ನಡೆಯುವ ಮಧ್ಯಕ್ಷೇತ್ರಿಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ

ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿ

Saturday, August 4th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸುವ ವಿಜ್ಞಾನ ವಿಚಾರ ಗೋಷ್ಠಿ Industrial Revolution are we prepared? ಎಂಬ ಗೋಷ್ಠಿಯಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ಯಶಸ್ವಿ ಶೆಟ್ಟಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾಳೆ ಎಂದು ಶಾಲಾ ಮುಖ್ಯೋಪಾಧ್ಯಾಯರ ಪ್ರಕಟಣೆ ತಿಳಿಸಿದೆ. ಇವಳು ಶ್ರೀ ಯಶೋಧರ ಶೆಟ್ಟಿ ಮತ್ತು ಶ್ರೀಮತಿ ರಶ್ಮಿ ಶೆಟ್ಟಿ ಇವರ ಪುತ್ರಿ.  

ರಾಜ್ಯಮಟ್ಟದ ಯುವ ವಿಜ್ಞಾನಿ

ರಾಜ್ಯಮಟ್ಟದ ಯುವ ವಿಜ್ಞಾನಿ

Saturday, August 4th, 2018

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಯೋಜಿಸುವ ’ಯುವ ವಿಜ್ಞಾನಿ’ ಆಯ್ಕೆಯ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ರಾಕೇಶ್‌ಕೃಷ್ಣ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಯುವ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾನೆ. ಆತನ ವೈಜ್ಞಾನಿಕ ಸಾಧನೆ ಮತ್ತು Innovative Method of Seedographer ಎಂಬ ಯೋಜನಾ ವರದಿಗೆ ಈತ ಈ ಪ್ರಶಸ್ತಿಗೆ ಅರ್ಹನಾಗಿದ್ದಾನೆ ಎಂದು ಶಾಲಾ ಮುಖ್ಯೋಪಾಧ್ಯಾಯರ ಪ್ರಕಟಣೆ ತಿಳಿಸಿದೆ. ಈತ ಶ್ರೀ ರವಿಶಂಕರ ನೆಕ್ಕಿಲಾಜೆ ಮತ್ತು ಶ್ರೀಮತಿ ದುರ್ಗಾರತ್ನ ಇವರ ಪುತ್ರ.