
ಯಕ್ಷಗಾನ ತರಬೇತಿ
Friday, June 29th, 2018ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ದ.ಕ. ಇಲ್ಲಿ ದಿನಾಂಕ 28-6-2018 ರ ಗುರುವಾರದಂದು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ಯಕ್ಷಗಾನ ತರಬೇತಿ ಆರಂಭವಾಯಿತು. ಪ್ರತಿ ಗುರುವಾರ ಈ ತರಬೇತಿ ಶಾಲೆಯಲ್ಲಿ ನಡೆಸಲಾಗುತ್ತದೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ದ.ಕ. ಇಲ್ಲಿ ದಿನಾಂಕ 28-6-2018 ರ ಗುರುವಾರದಂದು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ಯಕ್ಷಗಾನ ತರಬೇತಿ ಆರಂಭವಾಯಿತು. ಪ್ರತಿ ಗುರುವಾರ ಈ ತರಬೇತಿ ಶಾಲೆಯಲ್ಲಿ ನಡೆಸಲಾಗುತ್ತದೆ.
ಸ್ವದೇಶ ಹಾಗೂ ಸ್ವರಾಜ್ಯದ ಕಲ್ಪನೆಗೆ ಮೂಲಪುರುಷ ಶಿವಾಜಿ. ಶಿವಾಜಿಯ ಜೀವನ, ಸ್ವಾಭಿಮಾನಗಳು ನಮಗೆ ಆದರ್ಶವಾಗಬೇಕು ಎಂದು ಭಾರತೀಯ ಜನತಾ ಪಕ್ಷದ ವಿಭಾಗ ಪ್ರಮುಖ್ ಶ್ರೀ ಯತೀಶ್ ಆರ್ವಾರ್ ಹೇಳಿದರು. ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 25 ರಂದು ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿವಾಜಿ ಮಹಾರಾಜರ ಮಾತೃಶ್ರೀ ಜೀಜಾಬಾಯಿ ಪುರಾಣದ ಉದಾಹರಣೆಗಳ ಮೂಲಕ ಮಗನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಪ್ರತಿಯೊಬ್ಬ ತಾಯಿ ಕೂಡ ತನ್ನ ಮಕ್ಕಳಲ್ಲಿ ಶಿವಾಜಿಯನ್ನು ಕಾಣುತ್ತಾ ಬೆಳೆಸಿದರೆ ಹಿಂದೂ ಸಾಮ್ರಾಜ್ಯೋತ್ಸವ […]
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 14-6-2018 ನೇ ಗುರುವಾರದಂದು ವಿವೇಕಾನಂದ PRE-NURSERY ವಿಭಾಗವನ್ನು ಉದ್ಘಾಟಿಸಲಾಯಿತು. ವಿವೇಕಾನಂದ ವಸತಿ ನಿಲಯದ ಮುಖ್ಯ ಕ್ಷೇಮ ಪಾಲಕಿ ಶ್ರೀಮತಿ ಜಯಂತಿ ನಾಯಕ್ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ವೆಂಕಟೇಶ್ವರ ಅಮೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸುನೀತಾ ರವೀಂದ್ರ, ನರೇಂದ್ರ ಪಿ.ಯು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ರೂಪಲೇಖ, ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಶಾಲಾ ಹಿರಿಯ ವಿದ್ಯಾರ್ಥಿ, ಉದ್ಯಮಿ ಕೃಷ್ಣಾನಂದ ಪೈ ಉಪಸ್ಥಿತರಿದ್ದರು.ಶಾಲಾ […]
2018 ರ ಜೂನ್ 2 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ’ಗಣಹೋಮ’ ಮತ್ತು ’ಸರಸ್ವತಿ ಹವನ’ವು ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ಪೂಜಾಕಾರ್ಯ ನಿರ್ವಹಿಸಿ ಎಲ್ಲರಿಗೂ ಶುಭ ಹಾರೈಸಿದರು. ಶಾಲಾ ಆಡಳಿತ ಅಧ್ಯಕ್ಷ ಶ್ರೀ ವೆಂಕಟೇಶ್ವರ ಅಮೈ ಹವನದ ಕರ್ತೃತ್ವ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ಪೋಷಕರ ಬಂಧುಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಸುಮಾರು ಮೂರು ದಶಕಗಳಿಂದ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಜಗದೀಶ್ ಇವರನ್ನು ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದ ವತಿಯಿಂದ ದಿನಾಂಕ 31-05-2018 ರಂದು ಉಡಿ ತುಂಬಿಸಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಶುಭ ಹಾರೈಸಿ ಬೀಳ್ಕೊಡಲಾಯಿತು.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಗಸ್ತ್ಯ ಫೌಂಡೇಶನ್‌ನವರು ನಡೆಸಿದ ಜಿಜ್ಞಾಸ-2018 ರಾಷ್ಟ್ರೀಯ ಮಟ್ಟದ ವೈ ಜ್ಞಾನಿಕ ಮಾದರಿ ತಯಾರಿಕಾ ಸ್ಪರ್ಧೆಯಲ್ಲಿ-ರಾಕೇಶ್‌ಕೃಷ್ಣ.ಕೆ-8ನೇ ತರಗತಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿಶೇಷ ಬಹುಮಾನವನ್ನು ಪಡೆದಿರುತ್ತಾನೆ. ಇವನು ನೆಕ್ಕಿಲ ರವಿಶಂಕರ ಮತ್ತು ವಿವೇಕಾನಂದ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ದುರ್ಗಾರತ್ನ ಇವರ ಪುತ್ರ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರು 2017-18 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ ಬಂದಿರುತ್ತದೆ. ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 37 ವಿದ್ಯಾರ್ಥಿವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ದ್ವಿತಿ.ಡಿ.ಪಿ(9ನೇ ತರಗತಿ)-452 ಅಂಕ, ಅನುಶ್ರೀ (9ನೇ ತರಗತಿ)-436ಅಂಕ, ದಿಶಾ ರೈ.ಜಿ (9ನೇ ತರಗತಿ)-433 ಅಂಕ ಪಡೆದಿರುತ್ತಾರೆ ಹಾಗೂ 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 8 […]
ಭಾರತ ಸಂಸ್ಕೃತಿ ಪ್ರತಿಷ್ಠಾನದ ವತಿಯಿಚಿದ ನಡೆಸಲ್ಪಡುವ ಕಿಶೋರ ಭಾರತ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅವನೀಶ ಕೆ. (ಶ್ರೀ ಗೋಪಾಲಕೃಷ್ಣ ಭಟ್ ಮತ್ತು ಶೈಲಜಾ ಇವರ ಪುತ್ರ) ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಕಳೆದ ವರ್ಷವೂ ಎಳೆಯರ ರಾಮಾಯಣದಲ್ಲಿ ಶಾಲೆಯ ಶಿವಾನಿ ರೈ ಇವರು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿರುತ್ತಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಶಾಲಾ ಸಂಯೋಜಕರಾಗಿ ಶ್ರೀಮತಿ ಮಧುರಾ ಜೋಷಿ ಮತ್ತು ಶ್ರೀಮತಿ ಸೌಮ್ಯಲತ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು […]
ದಿನಾಂಕ 3-2-2018 ಮತ್ತು 4-2-2018 ರಂದು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೀಶ್ವರಿ ದೇವಸ್ಥಾನ ಹೊರನಾಡು ಚಿಕ್ಕಮಗಳೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್(ರಿ), ಜಿಲ್ಲಾ ಪತ್ರಕರ್ತರ ಸಂಘ ಚಿಕ್ಕಮಗಳೂರು ತಾಲೂಕು ಪತ್ರಕರ್ತರ ಸಂಘ ಮೂಡಿಗೆರೆ ಇವರು ಆಯೋಜಿಸಿದ 15 ವರ್ಷದೊಳಗಿನ ಬಾಲಕ/ಬಾಲಕಿಯರ ವಿಭಾಗದ, ಕರ್ನಾಟಕ ರಾಜ್ಯ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ವಿವೇಕಾನಂದ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು.ದ.ಕ ಇಲ್ಲಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 7ನೇ ತರಗತಿಯ ದೀಪ್ತಿಲಕ್ಷ್ಮಿ-ಪ್ರಥಮ, 5ನೇ ತರಗತಿಯ ಧನುಷ್ ರಾಮ್-ಪ್ರಥಮ ಮತ್ತು ಪ್ರಣೀಲ್ ರೈ-ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ […]
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಇವರು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 9ನೇ ತರಗತಿಯ ವಿಷ್ಣುಪ್ರಸಾದ್, ಪ್ರಥಮ ಬಂಗೇರ, ನಿಶ್ಚಿತ್ ಇವರ ತಂಡ ಮತ್ತು ರಾಕೇಶ್‌ಕೃಷ್ಣ(ವೈಯಕ್ತಿಕ) ಭಾಗವಹಿಸಿದ ನಿಧಿಶೋಧನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 9ನೇ ತರಗತಿಯ ಕೌಶಲ್ ಸುಬ್ರಹ್ಮಣ್ಯ(ವೈಯಕ್ತಿಕ) ಛಾಯಾಗ್ರಹಣ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ನಗದು ಬಹುಮಾನಗಳನ್ನು ಪಡೆದಿರುತ್ತಾರೆ. 9ನೇ ತರಗತಿಯ ಭೂಮಿಜ, ನವ್ಯಶ್ರೀ ಸನ್ನಿಧಿ […]