QR Code Business Card
ವಿದ್ಯಾರ್ಥಿಗಳು INSEF -Regional Science Fair ಗೆ ಆಯ್ಕೆ

ವಿದ್ಯಾರ್ಥಿಗಳು INSEF -Regional Science Fair ಗೆ ಆಯ್ಕೆ

Tuesday, October 30th, 2018

INSEF ವಿಜ್ಞಾನ ಮೇಳವು ನಡೆಸುವ Regional Science Fair ಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 6 ಪ್ರಾಜೆಕ್ಟ್‌ಗಳು ಆಯ್ಕೆಯಾಗಿವೆ. ಇದರಲ್ಲಿ 8 ನೇ ತರಗತಿಯ ಆದ್ಯ ಸುಲೋಚನ ಮುಳಿಯ ಇವರ The integrated Railway Intact System, 9ನೇ ತರಗತಿಯ ರಾಕೇಶ್‌ಕೃಷ್ಣ ಇವರ A Novel herbal mosquito repellent cream incense stick and vapourising liquid from the wild plant hyptis sauveolens, 9ನೇ ತರಗತಿಯ ವಿಜಿತ್ ಮತ್ತು ಹರ್ಷಿತ್ ಶೆಟ್ಟಿ […]

ರಾಷ್ಟ್ರಮಟ್ಟದ ಜ್ಞಾನ-ವಿಜ್ಞಾನ ಮೇಳಕ್ಕೆ ಆಯ್ಕೆ

ರಾಷ್ಟ್ರಮಟ್ಟದ ಜ್ಞಾನ-ವಿಜ್ಞಾನ ಮೇಳಕ್ಕೆ ಆಯ್ಕೆ

Monday, October 29th, 2018

ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು 2 ರಂದು ವಿಶಾಖಪಟ್ಟಣಂನಲ್ಲಿ ನಡೆದ ದಕ್ಷಿಣ-ಮಧ್ಯ ಕ್ಷೇತ್ರಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕಿಶೋರವರ್ಗದ ವಿಭಾಗದಲ್ಲಿ ಕನ್ಯಾ ಶೆಟ್ಟಿ(9ನೇ) ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ರಾಕೇಶ್‌ಕೃಷ್ಣ (9ನೇ ತರಗತಿ)-ವಿಜ್ಞಾನ ಸಂಶೋಧನಾತ್ಮಕ ಮಾದರಿಯಲ್ಲಿ ಪ್ರಥಮ ಸ್ಥಾನ, ಬಾಲವರ್ಗದಲ್ಲಿ ವರ್ಷ.ಕೆ (8ನೇ ತರಗತಿ)-ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ದ್ವಿತೀಯ ಸ್ಥಾನ, ಆಶ್ರಯ(8ನೇ ತರಗತಿ)-ವೇದಗಣಿತ ಪತ್ರವಾಚನದಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಒಡಿಸಾ […]

ದಶದಿನಾತ್ಮಕ ಸಂಸ್ಕೃತ ಸಂಭಾಷಣಾ ಶಿಬಿರ

ದಶದಿನಾತ್ಮಕ ಸಂಸ್ಕೃತ ಸಂಭಾಷಣಾ ಶಿಬಿರ

Thursday, October 25th, 2018

ಸಂಸ್ಕೃತ ಭಾಷೆ ಇತರ ಎಲ್ಲಾ ಭಾಷೆಗಳಿಗೂ ಮಾತೃಭಾಷೆ. ಅದು ಸಂಸ್ಕೃತಿಯನ್ನು ಮೈಗೂಡಿಸುವ ಭಾಷೆ ಎಂದು ಮೈತ್ರೇಯಿ ಗುರುಕುಲದ ಆಚಾರ್ಯ ಶ್ರೀ ಉಮೇಶ್ ಹೆಗಡೆ ಹೇಳಿದರು. ಅವರು ಅಕ್ಟೋಬರ್ 22 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾತೆಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ದಶದಿನಾತ್ಮಕ ಸಂಸ್ಕೃತ ಸಂಭಾಷಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಬಿರದ ದ್ವಿತೀಯ ದಿನ ಸ್ವಾಮಿ ವಿವೇಕಾನಂದ ಶಾಲೆ, ಸ್ವರ್ಗ ಇಲ್ಲಿನ ಸಂಸ್ಕೃತ ಅಧ್ಯಾಪಕ ಶ್ರೀ ಹರಿಶಂಕರ್ ಭಟ್ ಆಗಮಿಸಿ ಶುಭ ನುಡಿಯುತ್ತಾ, ಸಂಸ್ಕೃತ ಮೃತಭಾಷೆಯಲ್ಲ. ಅದು […]

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ಬಾಲಕರ ಮತ್ತು ಬಾಲಕಿಯರ ತಂಡಕ್ಕೆ ಸಮಗ್ರ ಪ್ರಶಸ್ತಿ

ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ಬಾಲಕರ ಮತ್ತು ಬಾಲಕಿಯರ ತಂಡಕ್ಕೆ ಸಮಗ್ರ ಪ್ರಶಸ್ತಿ

Wednesday, October 24th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಉಪನಿರ್ದೆಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಾಣಧಿಕಾರಿಗಳ ಕಚೆರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆ ಇಲ್ಹಿ ಅಕ್ಟೋಬರ್ 22, 23 ರಂದು ನಡೆದ ಜಿಲ್ಲಾ ಮಟ್ಟದ ಅಥ್ಲ್‌ಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಾಥಮಿಕ ವಿಭಾಗದ ಬಾಲಕರಲ್ಲಿ ರಿಯೋ ಬರ್ಫಿ ಲಮರೆ ಚಕ್ರ ಎಸೆತ ತೃ, ಉದ್ದಜಿಗಿತ ಪ್ರ, ಎತ್ತರ […]

ರಿದಮಿಕ್ ಯೋಗಾಸನ  : ರಾಜ್ಯ ಮಟ್ಟಕ್ಕೆ ಆಯ್ಕೆ

ರಿದಮಿಕ್ ಯೋಗಾಸನ : ರಾಜ್ಯ ಮಟ್ಟಕ್ಕೆ ಆಯ್ಕೆ

Monday, October 22nd, 2018

ಕರ್ನಾಟಕ ಸರ್ಕಾರ ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಗಣಿತನಗರ ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಬಾಲಕ-ಬಾಲಕಿಯರ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯ ರಿದಮಿಕ್ ಯೋಗಾಸನ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಮನ್ನಿತ್ (ಎನ್.ರಮೇಶ ಗೌಡ ಮತ್ತು ನಳಿನಿ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದು ಬೆಂಗಳೂರು ಗ್ರಾಮಾಂತರ […]

ಶಾರದಾ ಪೂಜೆ, ಅಕ್ಷರಾಭ್ಯಾಸ

ಶಾರದಾ ಪೂಜೆ, ಅಕ್ಷರಾಭ್ಯಾಸ

Thursday, October 11th, 2018

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-10-2018 ಬುಧವಾರ ವೇದಮೂರ್ತಿ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಮತ್ತು ಬಳಗದವರಿಂದ ಶಾರದಾಪೂಜೆ, ಅಕ್ಷರಾಭ್ಯಾಸ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾರದಾ ಪೂಜೆಯ ಬಳಿಕ ಸುಮಾರು 50 ಕ್ಕೂ ಪುಟಾಣೆಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶಾಲಾ ಶಿಕ್ಷಕಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ರಕ್ಷಕ […]

ಶಾಲಾ ವಾಹನ ಪೂಜಾ ಉತ್ಸವ

ಶಾಲಾ ವಾಹನ ಪೂಜಾ ಉತ್ಸವ

Thursday, October 11th, 2018

ದಿನಾಂಕ 10-10-2018 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಶಾಲಾ ವಾಹನ ಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ರಾಜ ಮನೆತನದವರು ತಮ್ಮ ರಕ್ಷಣೆಗೆ ಸಹಕಾರಿಯಾಗುವ ಆಯುಧಗಳನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಿದ್ದರು. ಕಾಲ ಬದಲಾದಂತೆ ಪ್ರಸ್ತುತ ದಿನಗಳಲ್ಲಿ ಮಾನವನ ಅನುಕೂಲತೆಗಾಗಿ ಬಳಕೆಯಾಗುವ ವಾಹನಗಳನ್ನು ಪೂಜಿಸುವುದರ ಮೂಲಕ ಆರಾಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳು ತಾವು ಬರುವ ಶಾಲಾ ವಾಹನವನ್ನು ತಳಿರುತೋರಣದಿಂದ ಶೃಂಗರಿಸಿ, ಶಾಲಾ ಮಕ್ಕಳು ಚೆಂಡೆ ವಾದನ ಮತ್ತು ಮಂಗಳ […]

ಚೆಸ್ ತಂಡ ಎಸ್. ಜಿ. ಎಫ್.­ಗೆ ಆಯ್ಕೆ

ಚೆಸ್ ತಂಡ ಎಸ್. ಜಿ. ಎಫ್.­ಗೆ ಆಯ್ಕೆ

Monday, October 8th, 2018

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್ ಹಾಗೂ ಶ್ರೀ ಮದ್ಭಗವತ್ ಗೀತಾ ರಾಷ್ಟೀಯ ಮಾಧ್ಯಮಿಕ ವಿದ್ಯಾಲಯ ಕುರುಕ್ಷೇತ್ರ ಇಲ್ಲಿ ಸೆಪ್ಟಂಬರ್ 25 ರಿಂದ 29 ರ ವರೆಗೆ ನಡೆದ ರಾಷ್ಟ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಡಿಸೆಂಬರ್ 11 ರಿಂದ 13 ರ ವರೆಗೆ ದಾದ್ರ ನಗರ್ ಹಾವೇಲಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಪಂಕಜ್ ಭಟ್(7ನೇ ತರಗತಿ), […]

ಅಭಿನಂದನೆಗಳು

ಅಭಿನಂದನೆಗಳು

Monday, October 8th, 2018

2017-18 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್- ಗೈಡ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ ರಾಜ್ಯ ಸಂಸ್ಥೆಯು ಆಯೋಜಿಸಿರುವ ಅಭಿನಂದನಾ ಕಾರ್ಯಕ್ರಮವು ದಿ. 9-10-2018 ರಂದು ’ಜ್ಞಾನಜ್ಯೋತಿ ಸಭಾಂಗಣ’ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್‌ಗಳಾದ ಅಕ್ಷಯ ಸುಬ್ರಮಣ್ಯ.ಇ (ಶ್ರೀಮತಿ ಮತ್ತು ಶ್ರೀ ಶಿವಪ್ರಸಾದ್.ಇ ಮತ್ತು ಗೀತಾರವರ ಪುತ್ರ). ರಾಹುಲ್ ನಾಯಕ್ (ಶ್ರೀಮತಿ ಮತ್ತು ಶ್ರೀ ರವೀಂದ್ರ ನಾಯಕ್ […]

ಅಥ್ಲೆಟಿಕ್ಸ್ ಕ್ರೀಡಾಕೂಟ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಥ್ಲೆಟಿಕ್ಸ್ ಕ್ರೀಡಾಕೂಟ : ಜಿಲ್ಲಾ ಮಟ್ಟಕ್ಕೆ ಆಯ್ಕೆ

Friday, October 5th, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 3 ಮತ್ತು 4 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಪ್ರಾಥಮಿಕ ವಿಭಾಗದ ಬಾಲಕರಲ್ಲಿ ರಿಯೋ ಬರ್ಫಿ ಲಮರೆ ಚಕ್ರ ಎಸೆತ ಪ್ರ, ಉದ್ದಜಿಗಿತ ಪ್ರ, ಎತ್ತರ ಜಿಗಿತ ಪ್ರ, 4×100 […]