QR Code Business Card
ಶಟಲ್ ಬ್ಯಾಡ್ಮಿಂಟನ್:  ವಿಭಾಗೀಯ ಮಟ್ಟದ ಆಯ್ಕೆ

ಶಟಲ್ ಬ್ಯಾಡ್ಮಿಂಟನ್:  ವಿಭಾಗೀಯ ಮಟ್ಟದ ಆಯ್ಕೆ

Tuesday, October 2nd, 2018

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೈಸೂರು ಇದರ ಆಶ್ರಯದಲ್ಲಿ ಮೈಸೂರಿನ ಮಾನಸಗಂಗೋತ್ರಿ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ಮತ್ತು 4 ರಂದು ನಡೆಯುವ ಮೈಸೂರು ವಿಭಾಗೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಹಷೀತ ಕೆ. (6ನೇ ತರಗತಿ), ಅಪೂರ್ವ (6ನೇ ತರಗತಿ), ಹಾಗೂ ಶ್ರೇಯಸ್ ಕೆ. (8ನೇ ತರಗತಿ) ಇವರು ಪ್ರಾಥಮಿಕ ವಿಭಾಗದ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತಾಲೂಕು ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟಕ್ಕೆ ಆಯ್ಕೆ

Friday, September 28th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀನಿಧಿ ಶಂಕರ್ 100 ಮೀ(ಪ್ರ), 2೦೦ಮೀ(ಪ್ರ) ಸುಶಾನ್ ಪ್ರಕಾಶ್ 2೦೦ಮೀ(ದ್ವಿ), ಅಕ್ಷಿತ್ ಭಂಡಾರಿ 6೦೦ಮೀ(ಪ್ರ), ಅಮಿತ್ ಬೋರ್ಕರ್ 4೦೦ ಮೀ(ದ್ವಿ), ಬರ್ಫಿ ಲಮಾರೆ ಲಾಂಗ್‌ಜಂಪ್, ಹ್ಶೆಜಂಪ್ , ಚಕ್ರಎಸೆತ(ಪ್ರಥಮ […]

ಭಾಷಾ ಸಂಘಗಳ ಉದ್ಟಾಟನೆ

ಭಾಷಾ ಸಂಘಗಳ ಉದ್ಟಾಟನೆ

Thursday, September 27th, 2018

ದಿನಾಂಕ 26-9-2018 ನೇ ಬುಧವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಕನ್ನಡ, ಆಂಗ್ಲ, ಸಂಸ್ಕೃತ ಹಾಗೂ ಹಿಂದಿ ಚತುರ್ಭಾಷಾ ಸಂಘಗಳ ಉದ್ಟಾಟನೆಯನ್ನು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶ್ರೀಶ ಕುಮಾರ್ ಅವರು ನೆರವೇರಿಸಿ, ಯಾವುದೇ ದೇಶದ ಸಂಸ್ಕೃತಿಯ ಅರಿವು ಉಳಿವು ಅಲ್ಲಿನ ಭಾಷೆಯನ್ನವಲಂಬಿಸಿದೆ. ಆದ್ದರಿಂದ ನಾವು ಭಾಷೆಯನ್ನು ಪಳಗಿಸಿ ಕಾವ್ಯವಾಗಿಸಿಕೊಂಡರೆ ಭಾಷೆಯ ಸೊಗಸು ವರ್ಣನಾತೀತ ಎಂದು ಭಾಷಾ ಪ್ರಾಮುಖ್ಯತೆಯನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಮಾನವನ ಅಭಿವ್ಯಕ್ತಿಯ ಭಾಷೆ, […]

Alumni Meet on 2-10-2018

Monday, September 24th, 2018

Dear Students, We are pleased to inform you that there is an Alumni Meet at 9.30 on 2nd October 2018 in the school premises you are requested to attend the same We look forward for your esteemed presence and valuable suggestions to strengthen an  Alumni Association.

ಸೃಷ್ಠಿ ಚಿತ್ರಕಲಾ ವಿಭಾಗದ ಹಿರಿಯರ ಚಿತ್ರಕಲಾ ತರಗತಿ ಉದ್ಘಾಟನೆ

ಸೃಷ್ಠಿ ಚಿತ್ರಕಲಾ ವಿಭಾಗದ ಹಿರಿಯರ ಚಿತ್ರಕಲಾ ತರಗತಿ ಉದ್ಘಾಟನೆ

Saturday, September 22nd, 2018

ತಾ 22-09-2018 ರಂದು ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆ ತೆಂಕಿಲ ಇಲ್ಲಿ ಪ್ರತಿ ಗುರುವಾರ ಮತ್ತು ಶನಿವಾರ ನಡೆಯಲಿರುವ ಸೃಷ್ಠಿ ಚಿತ್ರಕಲಾ ವಿಭಾಗದ ಹಿರಿಯರ ಚಿತ್ರಕಲಾ ತರಗತಿ ಇಂದು ಉದ್ಘಾಟನೆಗೊಂಡಿತು. ಕಾರ್‍ಯಕ್ರಮವನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಡಾ. ಶಶಿಧರ್ ಕಜೆರವರು ದೀಪ ಬೆಳಗಿಸಿ, ಬಿಳಿ ಹಾಳೆಯ ಮೇಲೆ ಬಣ್ಣಗಳ ಲೇಪನ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮುರಳೀಧರ ಕೆ. ವಹಿಸಿ ಶುಭ ಹಾರೈಸಿದರು. ಶಾಲಾ ಮುಖ್ಯಗುರುಗಳಾದ […]

ಅಖಿಲ ಭಾರತೀಯ ಜ್ಞಾನ-ವಿಜ್ಞಾನ ಮೇಳ : ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆ

ಅಖಿಲ ಭಾರತೀಯ ಜ್ಞಾನ-ವಿಜ್ಞಾನ ಮೇಳ : ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆ

Tuesday, September 18th, 2018

ಗುಲ್ಬರ್ಗಾ(ಕಲಬುರ್ಗಿ) ಜಿಲ್ಲೆಯ ಸೇಡಂನಲ್ಲಿ ಸೆಪ್ಟಂಬರ್ 7, 8, 9 ರಂದು ನಡೆದ ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕಿಶೋರವರ್ಗದ ವಿಭಾಗದಲ್ಲಿ ಕನ್ಯಾ ಶೆಟ್ಟಿ (9ನೇ) ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ರಾಕೇಶ್‌ ಕೃಷ್ಣ (9ನೇ ತರಗತಿ)-ವಿಜ್ಞಾನ ಸಂಶೋಧನಾತ್ಮಕ ಮಾದರಿಯಲ್ಲಿ ಪ್ರಥಮ ಸ್ಥಾನ, ಬಾಲವರ್ಗದಲ್ಲಿ ವರ್ಷ ಕೆ. (8ನೇ ತರಗತಿ)-ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ಆಶ್ರಯ (8ನೇ ತರಗತಿ)-ವೇದಗಣಿತ ಪತ್ರವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ವಿಶಾಖಪಟ್ಟಣಂನಲ್ಲಿ […]

ಪ್ರಹರ್ಷಿತಾ-2018 : ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದ ಮಾನ್ಯ

ಪ್ರಹರ್ಷಿತಾ-2018 : ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದ ಮಾನ್ಯ

Saturday, September 15th, 2018

ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ವಿದ್ಯಾದಾಯಿನಿ ವಿದ್ಯಾಸಂಸ್ಥೆಗಳು, ಸುರತ್ಕಲ್ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ’ಪ್ರಹರ್ಷಿತಾ-2018’ ದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಕುಮಾರಿ ಮಾನ್ಯ ಕಿರಿಯರ ವಿಭಾಗದ ಮರಾಠಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವಳು ಪಡ್ನೂರು ನಿವಾಸಿ ಶ್ರೀ ಉಮೇಶ್ ಮತ್ತು ಶ್ರೀಮತಿ ವಾರಿಜ ದಂಪತಿ ಸುಪುತ್ರಿ.

17 ನೇ ಜ್ಞಾನ ವಿಜ್ಞಾನ ಮೇಳ : ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆ

17 ನೇ ಜ್ಞಾನ ವಿಜ್ಞಾನ ಮೇಳ : ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆ

Saturday, September 15th, 2018

ವಿದ್ಯಾಭಾರತಿ ರಾಜ್ಯಮಟ್ಟದ (ಪ್ರಾಂತಮಟ್ಟ) 17 ನೇ ಜ್ಞಾನ ವಿಜ್ಞಾನ ಮೇಳ 2018 ವು ಗುಲ್ಬರ್ಗಾ (ಕಲಬುರ್ಗಿ) ಜಿಲ್ಲೆಯ ಸೇಡಂನಲ್ಲಿ ಸೆಪ್ಟಂಬರ್ 7, 8, 9 ರಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಇಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿದ 4 ಮಕ್ಕಳು ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲವರ್ಗದಲ್ಲಿ ವರ್ಷ ಕೆ. (8ನೇ ತರಗತಿ)-ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ಆಶ್ರಯ (8ನೇ ತರಗತಿ)-ವೇದಗಣಿತ […]

ಮಕ್ಕಳಿಂದ ಮೂಡಿ ಬಂದ ಪರಿಸರ ಸ್ನೇಹಿ ಸಾವಿರ ಗಣಪತಿ

ಮಕ್ಕಳಿಂದ ಮೂಡಿ ಬಂದ ಪರಿಸರ ಸ್ನೇಹಿ ಸಾವಿರ ಗಣಪತಿ

Friday, September 14th, 2018

ತಾ. 12-09-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಇಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶಾಲಾ ’ಸೃಷ್ಟಿ’ ಚಿತ್ರಕಲಾ ವಿಭಾಗದ ಆಶ್ರಯದಲ್ಲಿ ಸಾವಿರದ ಗಣಪತಿ ರಚನೆಯ ವಿಶೇಷ ಕಾರ್ಯಕ್ರಮ ನಡೆಯಿತು. ಪ್ಲಾಸ್ಟ್-ಪ್ಯಾರಿಸ್, ಪೈಬರ್ ಹಾಗೂ ಇನ್ನಿತರ ರಾಸಾಯನಿಕ ವಸ್ತುವಿನಿಂದ ಆಗುವ ಪರಿಸರ ಮಾಲಿನ್ಯದ ಅರಿವು ಮೂಡಿಸುವ ಸಲುವಾಗಿ ಆವೆ ಮಣ್ಣಿನಿಂದ ಗಣೇಶ ಮೂರ್ತಿ ರಚನೆಯನ್ನು ಕಲಾಶಿಕ್ಷಕರು ಹಾಗೂ ಸೃಷ್ಟಿ ಆರ್ಟ್ ಕ್ಲಬ್‌ನ ವಿದ್ಯಾರ್ಥಿಗಳ ಮಾರ್ಗದರ್ಶನದ ಮೂಲಕ 3 ರಿಂದ 6 ನೇ ತರಗತಿಯ ವಿದ್ಯಾರ್ಥಿಗಳು […]

ಸೃಷ್ಟಿ ಚಿತ್ರಕಲಾ ಸಂಘದ ಉದ್ಘಾಟನೆ

ಸೃಷ್ಟಿ ಚಿತ್ರಕಲಾ ಸಂಘದ ಉದ್ಘಾಟನೆ

Wednesday, September 12th, 2018

ದಿನಾಂಕ 12-9-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೃಷ್ಟಿ ಚಿತ್ರಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ ಇವರು ನೆರವೇರಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ವಿವಿಧ ಬಣ್ಣಗಳ ಮೂಲಕ ಹಸ್ತಪ್ರಮಾಣ ವಚನವನ್ನು ಮಾಡಿದರು. ವಿದ್ಯಾರ್ಥಿನಿ ಕು.ದ್ವಿತಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸಿಂಧೂರ, ಮನ್ವಿತಾ, ರಮ್ಯ ಪ್ರಾರ್ಥಿಸಿ, ವಿದ್ಯಾರ್ಥಿ ಸ್ವಾತಿಕ್ ವಂದಿಸಿ, ವಿದ್ಯಾರ್ಥಿನಿ ಕು.ಕನ್ಯಾ ಶೆಟ್ಟಿ ಕಾರ್ಯಕ್ರಮ […]