QR Code Business Card
ಈಜು ಸ್ಪರ್ಧೆ - ರಾಜ್ಯಮಟ್ಟಕ್ಕೆ ಆಯ್ಕೆ

ಈಜು ಸ್ಪರ್ಧೆ – ರಾಜ್ಯಮಟ್ಟಕ್ಕೆ ಆಯ್ಕೆ

Friday, July 15th, 2022

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಧನ್ವಿತ್.ಕೆ, ಪ್ರತೀಕ್ಷ ಆಳ್ವ ಮತ್ತು ಮಹಿನ್.ಪಿ.ಆರ್ ರಾಜ್ಯಮಟ್ಟಕ್ಕೆ ಆಯ್ಕೆ ದ.ಕ.ಜಿ.ಪಂ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆಯು ದಿನಾಂಕ 15-7-2022 ನೇ ಶುಕ್ರವಾರ ಪುತ್ತೂರು ಬಾಲವನ ಈಜುಕೊಳದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, […]

ರಾಷ್ಟ್ರೀಯ ಚೆಸ್ ಟೂರ್ನಿ - 12 ನೇ ಸ್ಥಾನ ಪಡೆದ ಧನುಷ್ ರಾಮ್. ಎಂ

ರಾಷ್ಟ್ರೀಯ ಚೆಸ್ ಟೂರ್ನಿ – 12 ನೇ ಸ್ಥಾನ ಪಡೆದ ಧನುಷ್ ರಾಮ್. ಎಂ

Thursday, July 14th, 2022

ಅಖಿಲ ಭಾರತ ಚೆಸ್ ಫೆಡರೇಷನ್ ಮತ್ತು ಭಾರತ ಕ್ರೀಡಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಜುಲೈ ತಿಂಗಳ 1ರಿಂದ 9ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆದ 17 ರ ಒಳಗಿನ ವಯೋಮಾನದ 32ನೇ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಧನುಷ್ ರಾಮ್. ಎಂ (ಶ್ರೀ ದಿನೇಶ್ ಪ್ರಸನ್ನ ಮತ್ತು ಶ್ರೀಮತಿ ಉಮಾ.ಡಿ. ಪ್ರಸನ್ನ ಇವರ ಪುತ್ರ) ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಮುಕ್ತ ವಿಭಾಗದಲ್ಲಿ ನಗದು ಪುರಸ್ಕಾರದೊಂದಿಗೆ 12ನೇ ಸ್ಥಾನ ಪಡೆದಿದ್ದಾರೆ […]

ಶಾಲಾ ಮಂತ್ರಿಮಂಡಲದ ರಚನೆ

ಶಾಲಾ ಮಂತ್ರಿಮಂಡಲದ ರಚನೆ

Thursday, July 7th, 2022

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2022-23 ನೇ ಸಾಲಿನ ಪ್ರೌಢ ಶಾಲಾ ವಿಭಾಗದ ಮಂತ್ರಿಮಂಡಲವನ್ನು ಜೂನ್ 2 ರಂದು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಶ್ರೀನಿಧಿ (10ನೇ ತರಗತಿ) ಶಾಲಾ ನಾಯಕನಾಗಿ, ಹಾಗೂ ಅನ್ನಿಕಾ(9ನೇ ತರಗತಿ) ಉಪನಾಯಕಿಯಾಗಿ ಯುಕ್ತಶ್ರೀ(10ನೇ ತರಗತಿ) ಕ್ರೀಡಾ ಮಂತ್ರಿಯಾಗಿ, ವಸುಧಾ.ಭಟ್ (10ನೇ ತರಗತಿ) ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ನಿನಾದ್.ಜಿ.ರೈ (10ನೇ ತರಗತಿ) ವಿರೋಧಪಕ್ಷದ ನಾಯಕನಾಗಿ ಆಯ್ಕೆಯಾಗಿರುತ್ತಾರೆ. ಹಾಗೆಯೇ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿರೀಕ್ಷಿತ್ ಹೆಗ್ಡೆ(7ನೇ ತರಗತಿ) ಶಾಲಾ ನಾಯಕನಾಗಿ, ಆರ್ಯನ್.ಸಿ.ಆರ್(7ನೇ ತರಗತಿ) ಉಪನಾಯಕನಾಗಿ, […]

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ

Wednesday, July 6th, 2022

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆ ಇವರು ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ನಿಲಿಷ್ಕಾ ಕಲ್ಪನೆ [ನೆಹರುನಗರದ ನಿವಾಸಿ, ಇಂಜಿನಿಯರ್ ಶ್ರೀ ದಿನೇಶ್ ನಾೖಕ್‌. ಕೆ.ಜಿ ಮತ್ತು ಅಧ್ಯಾಪಕಿ ಶ್ರೀಮತಿ ಸ್ಮಿತಾಶ್ರೀ ಇವರ ಪುತ್ರಿ] ತೃತೀಯ ಬಹುಮಾನ ಪಡೆದಿರುತ್ತಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಮಂಗಳೂರಿನಲ್ಲಿ ಗಣ್ಯರ ಸಮ್ಮುಖ ನಡೆದಿರುತ್ತದೆ.

ಶಾಲೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ

ಶಾಲೆಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ

Monday, July 4th, 2022

ಪುತ್ತೂರು ಮತ್ತು ಕಡಬ ತಾಲೂಕು ವ್ಯಾಪ್ತಿಯನ್ನು ಒಳಗೊಂಡ ಪುತ್ತೂರು ವಲಯದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಶ್ರೀ ಲೋಕೇಶ್ ಎಸ್.ಆರ್ ಅವರು ಇಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ಶಿಕ್ಷಣ ಇಲಾಖೆಗೆ ಈ ಹಿಂದೆ ದೊರೆತ ಸಹಕಾರ ಮುಂದೆಯೂ ದೊರೆಯಲಿ ಎಂದು ಆಶಿಸಿದರು. ಪುತ್ತೂರು ತಾಲೂಕಿಗೆ ವರ್ಗಾವಣೆಗೊಂಡು ಆಗಮಿಸಿದ ಬಳಿಕ ಈ ಶೈಕ್ಷಣಿಕ ಸಾಲಿನಲ್ಲಿ ಶಾಲಾ ಭೇಟಿ ಕಾರ್ಯಕ್ರಮವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಭೇಟಿಯೊಂದಿಗೆ ಆರಂಭಿಸಿ, ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು […]

ಪುತ್ತೂರು ತಾಲೂಕು ಮಟ್ಟದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಪುತ್ತೂರು ತಾಲೂಕು ಮಟ್ಟದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Tuesday, June 21st, 2022

ಯುಜ್ಯತೇ ಇತಿ ಯೋಗಃ. ಯೋಗೋ ನಾಮ ಚಿತ್ತವೃತ್ತಿ ನಿರೋಧಃ. ಯೋಗದಿಂದ ದೇಹಾರೋಗ್ಯ, ದೀರ್ಘಾಯುಷ್ಯ, ಶಕ್ತಿ, ಸುಖ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶಿವಪ್ರಕಾಶ್. ಎಂ ಹೇಳಿದರು. ಅವರು ಮಾನವೀಯತೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21-6-2022 […]

ಕಬ್ ಬೇಸಿಗೆ ಶಿಬಿರ

ಕಬ್ ಬೇಸಿಗೆ ಶಿಬಿರ

Saturday, June 4th, 2022

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ಕಬ್ ಬೇಸಿಗೆ ಶಿಬಿರವು 30-5-2022 ರಂದು ಉದ್ಘಾಟನೆಗೊಂಡಿತು. ಶಿಬಿರವನ್ನು ಉದ್ಘಾಟಿಸಿದ ಸಂಸ್ಥೆಯ ಗೈಡ್ ಕ್ಯಾಪ್ಟನ್ (HWB) ಶ್ರೀಮತಿ ಅನುರಾಧ, ಕಬ್ಬಿಂಗ್ ನ ಆಶಯವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಹಿತನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕೆ, ಹಿರಿಯ ಸ್ಕೌಟ್ ಮಾಸ್ಟರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಭಾಸ್ಕರ್ ಉಪಸ್ಥಿತರಿದ್ದರು. ಲೇಡಿ […]

ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ-ಅಭಿನಂದನಂ

ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ-ಅಭಿನಂದನಂ

Wednesday, June 1st, 2022

ದಿನಾಂಕ 31/05/22 ನೇ ಮಂಗಳವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಯಾದವ ಶ್ರೀ ಸಭಾಂಗಣದಲ್ಲಿ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆ ಯಲ್ಲಿ 625ರಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳಾದ ಆತ್ಮೀಯ ಕಶ್ಯಪ್, ಅಭಯ್ ಶರ್ಮ, ಅಭಿಜ್ಞ ಆರ್. ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು ಹಾಗೂ ಆಡಳಿತ ಮಂಡಳಿಯ ಮಾತಿನಂತೆ ಲ್ಯಾಪ್­ಟಾಪ್ ನೀಡಿ ಸನ್ಮಾನಿಸಿದರು. ಹಾಗೂ ಆ ಬ್ಯಾಚ್­ನ ಎಲ್ಲಾ 232 ಮಂದಿ ವಿದ್ಯರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಶ್ರೀ […]

Abhinandanam program on 31-5-2022

Abhinandanam program on 31-5-2022

Monday, May 30th, 2022
’ಗುರುವಂದನೆ’ ಕಾರ್ಯಕ್ರಮ

’ಗುರುವಂದನೆ’ ಕಾರ್ಯಕ್ರಮ

Monday, May 23rd, 2022

ಪೂರ್ವ ರೋಟರಿ ಕ್ಲಬ್ ಪುತ್ತೂರು R.I.Dist.3181 ಇದರ ವತಿಯಿಂದ 2022-23 ನೇ ಸಾಲಿನಲ್ಲಿ 10 ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಗಳಾಗಿ ಹೊರಹೊಮ್ಮಲು ಕಾರಣೀಭೂತರಾದ ಗುರು ವೃಂದವನ್ನು ಗುರುತಿಸಿ ಸನ್ಮಾನಿಸುವ ’ಗುರುವಂದನೆ’ ಕಾರ್ಯಕ್ರಮವು ದಿನಾಂಕ 23-05-2022 ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ 10 ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆಗೈದ […]