QR Code Business Card
ಇಂಟರ್‍ಯಾಕ್ಟ್ ಕ್ಲಬ್ ಪುತ್ತೂರು ಪೂರ್ವ - ಪದಗ್ರಹಣ ಸಮಾರಂಭ

ಇಂಟರ್‍ಯಾಕ್ಟ್ ಕ್ಲಬ್ ಪುತ್ತೂರು ಪೂರ್ವ – ಪದಗ್ರಹಣ ಸಮಾರಂಭ

Thursday, August 4th, 2022

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ವಿವೇಕಾನಂದ ಇಂಟರ್‍ಯಾಕ್ಟ್‌ಕ್ಲಬ್ ಪುತ್ತೂರು ಪೂರ್ವ ಇದರ ಪದಗ್ರಹಣ ಸಮಾರಂಭವು ದಿನಾಂಕ 3-8-2022 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. Installing Officer ಆಗಿ ರೋ.ಚಂದ್ರಶೇಖರ್.ಎಸ್ ಅವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. 10 ನೇ ತರಗತಿಯ ಕು.ತನ್ವಿ ಶೆಣೈ ವಿವೇಕಾನಂದ ಇಂಟರ್‍ಯಾಕ್ಟ್‌ಕ್ಲಬ್‌ನ ಅಧ್ಯಕ್ಷೆಯಾಗಿ ಹಾಗೂ 10 ನೇ ತರಗತಿಯ ಧನ್ವಿನ್.ಕೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. ಸುಮಾರು 35 ವಿದ್ಯಾರ್ಥಿಗಳು ಇಂಟರ್‍ಯಾಕ್ಟ್‌ಕ್ಲಬ್‌ನ ಸದಸ್ಯರಾಗಿ ಸೇರ್ಪಡೆಯಾದರು. ರೋ.ಚಂದ್ರಶೇಖರ್.ಎಸ್. Installing Officer ನ ನೆಲೆಯಲ್ಲಿ ಮಾತನಾಡಿ, ನೂತನ […]

'ಸ್ಕೌಟಿಂಗ್ ಸನ್ ರೈಸ್ ಡೇ' ಮತ್ತು 'ಸ್ಕೌಟ್ ಸ್ಕಾರ್ಫ್ ಡೇ' ಆಚರಣೆ

‘ಸ್ಕೌಟಿಂಗ್ ಸನ್ ರೈಸ್ ಡೇ’ ಮತ್ತು ‘ಸ್ಕೌಟ್ ಸ್ಕಾರ್ಫ್ ಡೇ’ ಆಚರಣೆ

Monday, August 1st, 2022

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮಾರ್ಗದರ್ಶನದಂತೆ ದಿನಾಂಕ : 01-08-2022ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ.ವಿವೇಕನಗರ ತೆಂಕಿಲ, ಇಲ್ಲಿ ‘ಸ್ಕೌಟಿಂಗ್ ಸನ್ ರೈಸ್ ಡೇ’ ಮತ್ತು ‘ಸ್ಕೌಟ್ ಸ್ಕಾರ್ಫ್ ಡೇ’ ಅನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಕೌಟ್ ಪ್ರತಿಜ್ಞೆಯ ಉಚ್ಚಾರಣೆ ಸ್ವೀಕರಿಸಿ , ಸ್ಕೌಟಿಂಗ್ ಮತ್ತು ಗೈಡಿಂಗ್ ಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸ್ಕೌಟ್ ಮತ್ತು ಗೈಡ್ ಇತಿಹಾಸ, ಉದ್ದೇಶಗಳು ಮತ್ತು ಈ ದಿನದ ಮಹತ್ವದ ಬಗ್ಗೆ ಗೈಡ್ ಕ್ಯಾಪ್ಟನ್ ಅನುರಾಧ […]

ಬ್ಯಾಡ್ಮಿಂಟನ್ ಪಂದ್ಯಾಟ - ದ್ವಿತೀಯ ಸ್ಥಾನ

ಬ್ಯಾಡ್ಮಿಂಟನ್ ಪಂದ್ಯಾಟ – ದ್ವಿತೀಯ ಸ್ಥಾನ

Saturday, July 30th, 2022

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದ.ಕ.ಜಿ.ಪಂ.ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ಮತ್ತು ದ.ಕ.ಜಿ.ಪಂ.ಸರಕಾರಿ ಪ್ರೌಢ ಶಾಲೆ ನ್ಯೂಪಡ್ಪು, ಹರೇಕಳ ಇದರ ಆಶ್ರಯದಲ್ಲಿ ಜುಲೈ 23ರಂದು ಮಂಗಳೂರು ವಿಶ್ವವಿದ್ಯಾನಿಲಯದ ಒಳಾಂಗಣ ಕ್ರೀಡಾಂಗಣ, ಕೊಣಾಜೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ U-14 ವಯೋಮಾನ ವರ್ಗದ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುತ್ತೂರು ತಾಲೂಕು ದ್ವಿತೀಯ ಸ್ಥಾನ ಗಳಿಸಿರುತ್ತದೆ. ಈ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ಸಮನ್ವಿತಾ ಕೆ […]

ಚೆಸ್ ಪಂದ್ಯಾಟ - ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೆಸ್ ಪಂದ್ಯಾಟ – ಜಿಲ್ಲಾ ಮಟ್ಟಕ್ಕೆ ಆಯ್ಕೆ

Friday, July 29th, 2022

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ವತಿಯಿಂದ ದ.ಕ.ಜಿ.ಪ.ಉ.ಹಿರಿಯ ಪ್ರಾಥಮಿಕ ಶಾಲೆ, ಕುಡಿಪಾಡಿ ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರೌಢ ಶಾಲಾ ವಿಭಾಗದ ಹುಡುಗರು- ಧನುಷ್‌ರಾಮ್, 10 ನೇ ತರಗತಿ (ಕಿಯೋನಿಕ್ಸ್‌ನ ಮಾಲಕ ದಿನೇಶ್ ಪ್ರಸನ್ನ ಮತ್ತು ಉಮಾ.ಡಿ.ಪ್ರಸನ್ನ ಇವರ ಪುತ್ರ), ಪ್ರಣೀಲ್ ರೈ, […]

ಕಾರ್ಗಿಲ್ ವಿಜಯೋತ್ಸವ ಹಾಗೂ ಭಾರತೀಯ ಸೈನ್ಯಕ್ಕೆ ಸೇರಿದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ

ಕಾರ್ಗಿಲ್ ವಿಜಯೋತ್ಸವ ಹಾಗೂ ಭಾರತೀಯ ಸೈನ್ಯಕ್ಕೆ ಸೇರಿದ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ

Tuesday, July 26th, 2022

ಕಾರ್ಗಿಲ್‌ನಲ್ಲಿ ನಮ್ಮ ದೇಶ ಕಾಯುವ ಸಹೋದರರ ಪ್ರಾಣಾರ್ಪಣೆಯನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡಾಗ ಅವರ ತ್ಯಾಗ, ಬಲಿದಾನಗಳು ಸಾರ್ಥಕವೆನಿಸುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ಶ್ರೀ ರಘುರಾಜ್ ಉಬರಡ್ಕ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 23ನೇ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಸೈನಿಕರ ಸಾಹಸದ ಜೊತೆಗೆ, ಮುಂದಿನ ಯುವ ಜನಾಂಗವಾಗುವ ವಿದ್ಯಾರ್ಥಿಗಳು ದೇಶ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ವಿವೇಕಾನಂದ […]

ಅಂತಾರಾಷ್ಟ್ರೀಯ ಒಲಿಂಪಿಯಾಡ್‌ : ವಿದ್ಯಾರ್ಥಿಗಳ ವಿಶೇಷ ಸಾಧನೆ

ಅಂತಾರಾಷ್ಟ್ರೀಯ ಒಲಿಂಪಿಯಾಡ್‌ : ವಿದ್ಯಾರ್ಥಿಗಳ ವಿಶೇಷ ಸಾಧನೆ

Monday, July 25th, 2022

2021-22 ನೇ ಸಾಲಿನ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆಗಳನ್ನು ಮಾಡಿದ್ದಾರೆ. 8 ನೇ ತರಗತಿಯ ಚಿನ್ಮಯಿ.ಎಲ್ (ಡಾ.ಕೃಷ್ಣಪ್ರಸಾದ್ ಮತ್ತು ಡಾ. ಅಮೃತಪ್ರಸಾದ್ ದಂಪತಿಗಳ ಪುತ್ರಿ) ಅವರು ಅಂತಾರಾಷ್ಟ್ರೀಯ ಇಂಗ್ಲೀಷ್, ಸಾಮಾನ್ಯ ಜ್ಞಾನ, ಗಣಿತ, ಸಮಾಜ ಅಧ್ಯಯನ ಹಾಗೂ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ 3 ಚಿನ್ನ, 2 ಬೆಳ್ಳಿಯ ಪದಕಗಳನ್ನು ಪಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿರುವ ಅತ್ಯುತ್ತಮ ರ್‍ಯಾಂಕ್‌ಗಾಗಿ ನೀಡಲ್ಪಡುವ ವಿಶೇಷ ಬಹುಮಾನ ಗಿಫ್ಟ್ ವೋಚರ್ ಮತ್ತು ಅಕಾಡೆಮಿಕ್ […]

ಕೇಸರಿ ದಿನ ಆಚರಣೆ

ಕೇಸರಿ ದಿನ ಆಚರಣೆ

Friday, July 22nd, 2022

ದಿನಾಂಕ 22-07-2022 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲದಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಕೇಸರಿ ದಿನವನ್ನು ಆಚರಿಸಲಾಯಿತು. ಶಾಲೆಯ ಪುಟಾಣಿಗಳು ಕೇಸರಿ ಬಣ್ಣದ ಉಡುಗೆಯನ್ನು ತೊಟ್ಟು ಸಂಭ್ರಮದಿಂದ ಮಿನುಗಿದರು. ತರಗತಿಗಳನ್ನು ಕೇಸರಿ ಬಣ್ಣದ ವಸ್ತುಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕಿಯರು ಮಕ್ಕಳಿಗೆ ಕೇಸರಿ ಬಣ್ಣದ ಹಲವು ವಸ್ತುಗಳ ಪರಿಚಯ ಮಾಡಿ, ಕೇಸರಿ ಬಣ್ಣದ ಮಹತ್ವದ ಬಗ್ಗೆ ತಿಳಿಸಿದರು. ಮಕ್ಕಳಿಗೆ ಶಿಕ್ಷಕಿಯರು ಕೇಸರಿ ಬಣ್ಣಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಆಯೋಜಿಸಿದ್ದರು. ಕೇಸರಿ ಬಣ್ಣವು ಉತ್ಸಾಹ, ಭರವಸೆ ಮತ್ತು ಧೈರ್ಯದ […]

ಚೆಸ್ ಪಂದ್ಯಾಟ : ತಾಲೂಕು ಮಟ್ಟಕ್ಕೆ ಆಯ್ಕೆ

ಚೆಸ್ ಪಂದ್ಯಾಟ : ತಾಲೂಕು ಮಟ್ಟಕ್ಕೆ ಆಯ್ಕೆ

Thursday, July 21st, 2022

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಲಯಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಾಥಮಿಕ ವಿಭಾಗದ ಹುಡುಗರು – ಶಮನ್.ಎನ್, 7ನೇ ತರಗತಿ(ನಿತ್ಯಾನಂದ .ಕೆ ಮತ್ತು ಸಂಧ್ಯಾ.ಕೆ ಇವರ ಪುತ್ರ), ನಿರೀಕ್ಷಿತ್ ಹೆಗ್ಡೆ,7ನೇ ತರಗತಿ (ನಿಶ್ಚಯ್ ಕುಮಾರ್ ಹೆಗ್ಡೆ […]

ಬಾಲವನದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ

ಬಾಲವನದಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ

Tuesday, July 19th, 2022

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಶಿಕ್ಷಣ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಹಯೋಗ ಪುತ್ತೂರು : ದ.ಕ.ಜಿ.ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆ ಜು.15 ರಂದು ಪರ್ಲಡ್ಕ ಡಾ/ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ […]

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಜಿಲ್ಲಾಮಟ್ಟಕ್ಕೆ ಆಯ್ಕೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, July 19th, 2022

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 19 ರಂದು ದರ್ಬೆಯ ಆಫೀಸರ್ ಕ್ಲಬ್ ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ 14 ವಯೋಮಾನದ ಬಾಲಕಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ಸಮನ್ವಿತಾ ಕೆ ವಿನ್ಯಾಸ್ ಕನ್‍ಸ್ಟ್ರಕ್ಷಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು […]