QR Code Business Card
73ನೇ ಗಣರಾಜ್ಯೋತ್ಸವ ಆಚರಣೆ

73ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2022

ದಿನಾಂಕ 26-01-2022ನೇ ಬುಧವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ತೆಂಕಿಲ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 73ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನಿಕ ಮೇಜರ್ ಸುಬೆದಾರ್ ಶ್ರೀ ಚಂದ್ರಶೇಖರ ಅವರ ಗಣರಾಜ್ಯೋತ್ಸವದ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ’ಇಂದು ನಾವು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ, ಭಾರತದ ಪ್ರಜೆಗಳಿಗಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಸಂವಿಧಾನವನ್ನು ರೂಪಿಸಿದ ದಿನವಾಗಿದೆ. ಇದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ರಾಜೇಂದ್ರಪ್ರಸಾದ್ರವರು ನೀಡಿದ ಕೊಡುಗೆ ಅತ್ಯಂತ […]

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ : ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Saturday, January 22nd, 2022

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯದಲ್ಲಿ 29ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17ರ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ವರದಿಗಳ ಮೌಲ್ಯಮಾಪನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಜ್ಞ ಮೌಲ್ಯಮಾಪಕರ ತಂಡ ಮಾಡಿರುತ್ತದೆ. ಜನವರಿ ತಿಂಗಳಲ್ಲಿ ನಡೆದ 29ನೇ ರಾಜ್ಯಮಟ್ಟದ ಮಕ್ಕಳ […]

ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಶಾಲೆಯ 2 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಶಾಲೆಯ 2 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Monday, January 17th, 2022

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯಲ್ಲಿ 29ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ರ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ವರದಿಗಳ ಮೌಲ್ಯಮಾಪನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಜ್ಞ ಮೌಲ್ಯಮಾಪಕರ ತಂಡ ಮಾಡಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ನಡೆದ 29 ನೇ […]

ವಿವೇಕಾನಂದ ಜಯಂತಿ ಆಚರಣೆ

ವಿವೇಕಾನಂದ ಜಯಂತಿ ಆಚರಣೆ

Wednesday, January 12th, 2022

“ಏಳಿ ಎದ್ದೇಳಿ, ಎಲ್ಲಿಯೂ ವಿಶ್ರಮಿಸದಿರಿ ಗುರಿ ಮುಟ್ಟುವ ತನಕ ಹೋರಾಡಿ” ಎಂಬ ವಿವೇಕದ ಮಾತುಗಳನ್ನಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು ದಿನಾಂಕ 12.01.2022ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಜಯಂತಿಯನ್ನು ಸರಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವಿನಾರಾಯಣ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ […]

ಭಾರತೀಯ ಸೇನೆಯ ರೆಜೆಮೆಂಟಲ್ ಮೆಡಿಕಲ್ ಆಫೀಸರ್ ಭೇಟಿ

ಭಾರತೀಯ ಸೇನೆಯ ರೆಜೆಮೆಂಟಲ್ ಮೆಡಿಕಲ್ ಆಫೀಸರ್ ಭೇಟಿ

Thursday, January 6th, 2022

ಜನವರಿ 6 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಭಾರತೀಯ ಸೇನೆಯ 15 ನೇ ಬೆಟಾಲಿಯನ್‌ನ ಜಾಟ್ ರೆಜಿಮೆಡ್‌ನ ಮೇಡಿಕಲ್ ಆಫೀಸರ್, ಪ್ರಸ್ತುತ ಕಾರ್ಗಿಲ್ ಬೆಟಾಲಿಯನ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಅನಿತೇಜ್ ರಾವ್ ರವರು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ನಂತರ ಮಾತನಾಡಿದ ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಬಾಲ್ಯದ ದಿನಗಳು ನಿಜಕ್ಕೂ ಅದ್ಭುತವಾದುದು, ಇಲ್ಲಿನ ಆಚಾರ-ವಿಚಾರ , ಶಿಕ್ಷಕರ ಮಾರ್ಗದರ್ಶನ, ಸಂಸ್ಕಾರ, ಸಂಸ್ಕೃತಿಗಳು ಇಂದು […]

ಏರೊ ಮಾಡೆಲಿಂಗ್ ಕಾರ್ಯಾಗಾರ ಉದ್ಘಾಟನೆ

ಏರೊ ಮಾಡೆಲಿಂಗ್ ಕಾರ್ಯಾಗಾರ ಉದ್ಘಾಟನೆ

Monday, January 3rd, 2022

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕ ನಗರ, ತೆಂಕಿಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‌ನ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಎರಡು ದಿನಗಳ ಏರೊ ಮಾಡೆಲಿಂಂಗ್ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಸಂಚಾಲಕರಾದ ಶ್ರೀ ರವಿನಾರಾಯಣ ಎಂ. ಇವರು ಕೇಂದ್ರ ಸರಕಾರದ ಮಹಾತ್ವಾಂಕಾಕ್ಷೆಯ ಯೋಜನೆಯ ಭಾಗವಾದ ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ವೃದ್ದಿಸಲು ಸಹಕಾರಿಯಾಗಿದ್ದು ವಿದ್ಯಾರ್ಥಿಗಳ ಕುತೂಹಲಗಳಿಗೆ ಸೂಕ್ತ ಉತ್ತರಗಳು ದೊರಕುವುದರೊಂದಿಗೆ ವಿಮಾನಗಳ ತಯಾರಿಕೆಯ ಕುರಿತಾದ ಕೌಶಲ್ಯಗಳು ವೃದ್ಧಿಯಾಗಲಿ ಎಂದು ಹರಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

INSEF ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಗೆ ಆಯ್ಕೆ

INSEF ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಗೆ ಆಯ್ಕೆ

Thursday, December 30th, 2021

Science Society of India ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವ ಸಲುವಾಗಿ ಪ್ರತೀ ವರ್ಷ ನಡೆಸುವ INSEF ಪ್ರಾದೇಶಿಕ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಕೆಳಗಿನ 2 ಯೋಜನೆಗಳು ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿವೆ. 9 ನೇ ತರಗತಿಯ ಅನ್ವಿತ್ ಎನ್ (ಶ್ರೀ ಶ್ರೀಪತಿ ಎನ್. ಹಾಗೂ ಶ್ರೀಮತಿ ವಿದ್ಯಾಲಕ್ಷ್ಮಿ.ಎ. ದಂಪತಿಯ ಪುತ್ರ.) […]

3 ವಿದ್ಯಾರ್ಥಿಗಳು Inspire Award ಸ್ಪರ್ಧೆಯಲ್ಲಿ ಆಯ್ಕೆ

3 ವಿದ್ಯಾರ್ಥಿಗಳು Inspire Award ಸ್ಪರ್ಧೆಯಲ್ಲಿ ಆಯ್ಕೆ

Tuesday, December 28th, 2021

ಭಾರತ ಸರಕಾರದ ಅಧೀನದಲ್ಲಿರುವ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗ ಸಂಸ್ಥೆ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಗತಿಗೋಸ್ಕರ ಮತ್ತು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಇನ್‌ಸ್ಪಾಯರ್ [Inspire Award] ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರತಿ ಬಾರಿಯಂತೆ ನಮ್ಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈ ಬಾರಿಯು ಸಹ ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಮೂರು ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. 9ನೇ ತರಗತಿಯ ವಸುಧಾ.ಎಂ (ಶ್ರೀ ಕೃಷ್ಣಮೂರ್ತಿ ಹಾಗೂ ಶ್ರೀಮತಿ ಶ್ವೇತಾ ಸರಸ್ವತಿ […]

ಆಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮ

ಆಜಾದಿ ಕಾ ಅಮೃತ ಮಹೋತ್ಸವ್ ಕಾರ್ಯಕ್ರಮ

Monday, December 20th, 2021

ಡಿಸೆಂಬರ್ 20 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವ್ ಹಾಗೂ Unsung Heroes of freedom struggle and My vision for India in 2047 ಎನ್ನುವ ಅಂಚೆ ಪತ್ರ ಬರಹ ಅಭಿಯಾನ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಕಾರದೊಂದಿಗೆ ಜರುಗಿತು. ಕಾರ್ಯಕ್ರಮದ ಅಂಗವಾಗಿ “75 AZADI KI AMRIT MAHOTSAV” ಎಂಬ ಬರವಣಿಗೆಯನ್ನು 1600 ವಿದ್ಯಾರ್ಥಿಗಳನ್ನು ಜೋಡಿಸಿಕೊಂಡು ಶಾಲಾ ಕ್ರೀಡಾಂಗಣದಲ್ಲಿ ಬಹಳ ಮನಮೋಹಕವಾಗಿ ಜೋಡಿಸಲಾಗಿತ್ತು. […]

ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Monday, December 20th, 2021

ಡಿಸೆಂಬರ್ 20 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಾಲೆಯಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಕ್ರಾಫ್ಟ್, ಸೆಮಿ ಕ್ಲಾಸಿಕಲ್ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ, ಕರಾಟೆ ಮುಂತಾದ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆಯು ನಡೆಯಿತು. ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಮಾಲಾ ಮಹೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಗೀತ ಹಾಗೂ ನಾಟ್ಯಗಳು ತಾಯಿಯ ಗರ್ಭದಲ್ಲಿರುವಾಗಲೇ ಮಗು ಅಭ್ಯಾಸ ಮಾಡುತ್ತದೆ. ನಂತರದ ದಿನಗಳಲ್ಲಿ ತರಗತಿಗಳ ಮೂಲಕ ಸಹಪಠ್ಯ ಚಟುವಟಿಕೆಗಳನ್ನು ಅಭ್ಯಾಸ ಮಾಡಿ ಮಗುವಿನಲ್ಲಿರುವ […]