2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ತೆಂಕಿಲ ಇಲ್ಲಿನ ಆತ್ಮೀಯ. ಎಂ. ಕಶ್ಯಪ್ (ಡಾ. ಮೋಹನ್. ಜಿ.ಎಸ್ ಮತ್ತು ಸೌಖ್ಯ. ಎಂ. ಎಸ್ ಇವರ ಪುತ್ರ ) ಅಭಯ್ ಶರ್ಮ(ಶ್ರೀ ಗಿರೀಶಂಕರ್. ಕೆ ಮತ್ತು ವಿದ್ಯಾ. ಜಿ. ಭಟ್ ಇವರ ಪುತ್ರ) ಮತ್ತು ಅಭಿಜ್ಞಾ.ಆರ್.ಭಟ್ (ಡಾ.ರಾಜೇಶ್. ಎಂ ಮತ್ತು ಛಾಯಾ ರಾಜೇಶ್ ಇವರ ಪುತ್ರಿ ) 625ರಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಷ್ಟ್ರೋತ್ಥಾನ ಸಂವಿತ್ ಶಿಕ್ಷಣ ಸಂಶೋಧನಾ ಸಂಸ್ಥೆ ವಿದ್ಯಾಭಾರತಿ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಆಯೋಜಿಸಿದ 2 ದಿನದ ಸಂವಿತ್ ಯೋಗ ಶಿಕ್ಷಕರ ಕಾರ್ಯಾಗಾರವು 6-5-2022 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದ್ಯಾಭಾರತಿ ಕ್ಷೇತ್ರಿಯ ಸಹಕಾರ್ಯದರ್ಶಿ, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ಮತ್ತು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಂಚಾಲಕರಾದ ಶ್ರೀ ವಸಂತ ಮಾಧವ ಅವರು ನಮ್ಮ ಜೀವನದಲ್ಲಿ ಸುಖ, ಆರೋಗ್ಯ, ಸಮಾಧಾನ, ಸಂತೃಪ್ತಿ ಸಿಗಬೇಕಾದರೆ ನಾವು […]
ದಿನಾಂಕ 02-05-2022 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ತರಬೇತಿ ಶಿಬಿರವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲುಕು ದೈಹಿಕ ಶಿಕ್ಷಣ ಶಿಕ್ಷಕರು ಸಂಘದ ಅಧ್ಯಕ್ಷರಾದ ಮೋನಪ್ಪ ಪಟ್ಟೆ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಇವರು ವಹಿಸಿದರು. ಪಟ್ಟೆಯವರು ಕ್ರೀಡಾಪಟುಗಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ಶಾಲಾ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶ್ರೀ ಭಾಸ್ಕರ್ ಗೌಡ. ಎಂ ಉಪಸ್ಥಿತರಿದ್ದರು. […]
ಜೀವನಕ್ಕೊಂದು ದಾರಿಯನ್ನು ತೋರುವವ ಗುರು. ಗುರು ತೋರಿದ ಹಾದಿಯೇ ಭವಿಷ್ಯದ ಏಳಿಗೆಗೆ ದೀವಟಿಗೆ ಇದ್ದಂತೆ. ಆ ದೀವಟಿಗೆ ತಾನು ಉರಿದು ಇನ್ನೊಂದನ್ನು ಉರಿಸುವಂತೆ, ನಿಜವಾದ ಗುರು ಸದಾ ಕ್ರಿಯಾಶೀಲರಾಗಿರುತ್ತಾರೆ. ಅಂತಹ ಕ್ರಿಯಾಶೀಲ ಭಗಿನಿಯರಾದ ಶ್ರೀಮತಿ ಮಧುರಾ ಜೋಶಿ, ಶ್ರೀಮತಿ ವೀಣಾ ಜೋಶಿ, ಮತ್ತು ಶ್ರೀಮತಿ ಶಾರದಾ ಶೆಟ್ಟಿ.ಕೆ ಯವರ ಸೇವಾ ಸ್ಮರಣಾ ಕಾರ್ಯಕ್ರಮವು ದಿನಾಂಕ 31-3-2022 ನೇ ಗುರುವಾರದಂದು ಶಾಲಾ ಆವರಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ವಿಶೇಷ ಅಭ್ಯಾಗತರಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿಗಳಾದ ಶ್ರೀ ಅಚ್ಯುತ್ […]
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯದಲ್ಲಿ 29 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ರ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಯೋಜನಾ ವರದಿಗಳ ಮೌಲ್ಯಮಾಪನವನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ತಜ್ಞ ಮೌಲ್ಯಮಾಪಕರ ತಂಡ ಮಾಡಿರುತ್ತದೆ. ಜನವರಿ ತಿಂಗಳಲ್ಲಿ ನಡೆದ […]
ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ 17-2-2022 ರಂದು ಸರಕಾರಿ ಪ್ರೌಢ ಶಾಲೆ, ಬುಳೇರಿಮೊಗ್ರು, ಬೆಳ್ತಂಗಡಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ 2020-21 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ತಮನ್ ಎಸ್. ಎನ್. (ಶ್ರೀ ಸುರೇಂದ್ರ ಎ ಮತ್ತು ಶ್ರೀಮತಿ ನಳಿನ ಕುಮಾರಿ ಇವರ ಪುತ್ರ) ಪ್ರಥಮ ಸ್ಥಾನ ಹಾಗೂ ರೂ. 5000/- […]
ನಿಜವಾದ ಪ್ರತಿಭೆ ಎಲ್ಲೇ ಇದ್ದರೂ ಎಷ್ಟೇ ಕಷ್ಟವಿದ್ದರೂ ಏನೇ ಅಡೆತಡೆಗಳಿದ್ದಾರೂ ತಲುಪಬೇಕಾದ ಗುರಿ ತಲುಪಿಯೇ ತಲುಪುತ್ತದೆ ಎಂಬ ವಿವೇಕವಾಣಿಯಂತೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಹಿರಿಯ ವಿದ್ಯಾರ್ಥಿನಿ ಸಾಧಕರಿಗೆ ಸನ್ಮಾನಿಸುವ ಪ್ರತಿಭಾ ಸಿಂಚನಾ ಕಾರ್ಯಕ್ರಮವು ಶಾಲಾ ಯಾದವಶ್ರೀ ಸಭಾಂಗಣದಲ್ಲಿ ದಿನಾಂಕ 11-2-2022 ನೇ ಶುಕ್ರವಾರದಂದು ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ.ಕೃಷ್ಣ ಭಟ್ ಸಾಧಕ ವಿದ್ಯಾರ್ಥಿನಿಯರಾದ ಕು.ಸಿಂಚನಾಲಕ್ಷ್ಮೀ(ದೆಹಲಿಯ ಏಮ್ಸ್ ಸಂಸ್ಥೆಯ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ), ಡಾ.ಬಿ.ಎನ್ ಅನುಶ್ರೀ(ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಎಂ.ಡಿ. ವಿದ್ಯಾರ್ಥಿನಿ), ಕು.ಆಶ್ರಯ.ಪಿ […]
ದಿನಾಂಕ 7-2-2022 ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ರಥಸಪ್ತಮಿಯ ಪ್ರಯುಕ್ತ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಸೂರ್ಯನ ಕಿರಣಗಳ ಆಕಾರದಲ್ಲಿ ಕುಳಿತು ಮಂತ್ರ ಸಹಿತ ಸೂರ್ಯ ನಮಸ್ಕಾರವನ್ನು ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಕ್ರಮವನ್ನು ನೆರವೇರಿಸಿ, ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸಿರುವ INSEF – National Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 2 ಪ್ರಾಜೆಕ್ಟ್‌ಗಳು INSEF – Regional Science Fair ನಲ್ಲಿ ಸ್ವರ್ಣ ಪದಕ ಪಡೆದು, ರಾಷ್ಟ್ರಮಟ್ಟದಲ್ಲಿ ಸ್ವರ್ಣ ಹಾಗೂ ಕಂಚಿನ ಪದಕಕ್ಕೆ ಭಾಜನವಾಗಿದೆ. ಜನವರಿ ತಿಂಗಳಿನಲ್ಲಿ ಆನ್‌ಲೈನ್ ಮೂಲಕ ನಡೆದ INSEF – National […]