QR Code Business Card
ಇನ್‌ಸ್ಪೆಯರ್ ಅವಾರ್ಡ್ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆ

ಇನ್‌ಸ್ಪೆಯರ್ ಅವಾರ್ಡ್ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆ

Sunday, December 30th, 2018

ಜಿಲ್ಲಾ ಮಟ್ಟದ ಇನ್‌ಸ್ಪೆಯರ್ ಅವಾರ್ಡ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅನ್ವಿತ್ ಎನ್. “A novel product by Saloon waste to increase soil fertility” ಎಂಬ ಉಪಯುಕ್ತ ಉತ್ಪನ್ನ ತಯಾರಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತನು ಶ್ರೀಪತಿ ಎನ್. ಮತ್ತು ಇರ್ದೆ ಶಾಲಾ ಶಿಕ್ಷಕಿ ವಿದ್ಯಾಲಕ್ಷ್ಮಿ ಇವರ ಸುಪುತ್ರ. ರಾಜ್ಯಮಟ್ಟದ ಸ್ಪರ್ಧೆಯು ಡಿಸೆಂಬರ್ 29, 30 ರಂದು ಮೈಸೂರಿನಲ್ಲಿ ನಡೆಯಲಿರುವುದು ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್

Thursday, December 27th, 2018

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ನವದೆಹಲಿ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ದಿನಾಂಕ 27-12-2018 ರಿಂದ 21-12-2018  ರವರೆಗೆ ಕೇರಳದ ಪಾಲಕ್ಕಾಡ್‌ ಇಲ್ಲಿ ನಡೆಯಲಿರುವುದು. ಈ ಶಿಬಿರದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್‌ಗಳಾದ ಆಶೀಶ್‌ ಶಂಕರ, ರವಿಶಂಕರ, ಮಯೂರ್, ಅನೀಶ್‌ ಮಯ್ಯ, ಕೌಶಲ್‌ ಸುಬ್ರಮಣ್ಯ, ಶಶಾಂಕ್ ಬಿ., ಮುರಳಿ ಕಾರ್ತಿಕ್, ಅಂಕಿತ್ ಕೆ.ಎಲ್. ಹಾಗೂ ಗೈಡ್ಸ್‌ಗಳಾದ ಶ್ರದ್ಧಾ, ಶ್ರೇಯ, ಧೃತಿ.ಪಿ.ಭಟ್, ಶ್ರದ್ಧಾಕೃಷ್ಣ, ರಮ್ಯಶ್ರೀ.ಕೆ.ಟಿ., ವರ್ಣ, ಶ್ರದ್ಧಾ.ಕೆ.ನಾಯ್ಕ್, ಪೂಜಾ.ಜೆ. ಇವರು ಭಾಗವಹಿಸಲಿರುವರು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವ ಏಕೈಕ […]

Invitation : Annual Day Celebrations 2018

Invitation : Annual Day Celebrations 2018

Wednesday, December 19th, 2018
ಅನ್ವೇಷಣಾ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಹಲವು ಬಹುಮಾನ

ಅನ್ವೇಷಣಾ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಹಲವು ಬಹುಮಾನ

Friday, December 14th, 2018

ಅಂಬಿಕಾ ಪದವಿ ಪೂರ್ವ ವಿದ್ಯಾಲಯ (ಬಪ್ಪಳಿಗೆ) ಇವರು ಆಯೋಜಿಸಿದ ಅನ್ವೇಷಣಾ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ವರ್ಷಾ ಕೆ. (8ನೇ) (5000 ರೂಪಾಯಿ ನಗದು) ವಿಜ್ಞಾನ ಪ್ರಬಂಧ ಮಂಡನೆ ಪ್ರಥಮ, ಅಚಿಂತ್ಯ ಕೃಷ್ಣ (10ನೇ) ಮತ್ತು ಶ್ರೇಯಸ್ ಹೆರಳೆ (10ನೇ) ವಿಜ್ಞಾನ ರಸಪ್ರಶ್ನೆ ದ್ವಿತೀಯ (3000 ರೂ. ನಗದು) ಧ್ಯಾನ್ ಯಸ್ ರಾವ್ (10ನೇ), ಶಶಾಂಕ್ ಬಿ. (10ನೇ) ಮತ್ತು ಅಂಕಿತ್ ರೈ (10ನೇ) ಇವರು […]

ಸಂಸ್ಕೃತಿ ಜ್ಞಾನ ಪತ್ರ ವಾಚನ ಸ್ಪರ್ಧೆ

ಸಂಸ್ಕೃತಿ ಜ್ಞಾನ ಪತ್ರ ವಾಚನ ಸ್ಪರ್ಧೆ

Monday, December 10th, 2018

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಏರ್ಪಡಿಸಿದ ರಾಷ್ಟ್ರಮಟ್ಟದ ಸಂಸ್ಕೃತಿ ಜ್ಞಾನ ಪತ್ರ ವಾಚನ ಸ್ಪರ್ಧೆಯು ಹರಿಯಾಣದ ಕುರುಕ್ಷೇತ್ರದಲ್ಲಿ ಇತ್ತೀಚೆಗೆ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಕನ್ಯಾ ಶೆಟ್ಟಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಸಹ ಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಜಿಲ್ಲಾ ಮಟ್ಟದ ಸಹ ಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Monday, December 10th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು, ವಿದ್ಯಾಂಗ ಉಪನಿರ್ದೇಶಕರ ಕಛೇರಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿ ಡಿಸೆಂಬರ್ 7 ರಂದು ನಡೆದ ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ಚೇತನ್ ವಿಟ್ಲ ಪ್ರೌಢ ವಿಭಾಗ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ 2018-19

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ 2018-19

Saturday, December 8th, 2018

ದಿನಾಂಕ 6-12-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2018-19 ರ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಮುಳಿಯ ಜುವೆಲ್ಸ್‌ನ ಮಾಲಕ ಶ್ರೀ ಕೇಶವಪ್ರಸಾದ್ ಮುಳಿಯ ಕಾರ್ಯಕ್ರಮ ಉದ್ಘಾಟಿಸಿವಿದ್ಯಾರ್ಥಿ ಜೀವನದಲ್ಲಿ ದೈಹಿಕ ಕ್ಷಮತೆ, ಒಳ್ಳೆಯ ಆರೋಗ್ಯ, ಸಂಸ್ಕಾರವನ್ನು ಪಡೆಯಲು ಕ್ರೀಡೆ ಬಹಳ ಮುಖ್ಯ. ಕ್ರೀಡೆಯುಸಹಕಾರ, ಸಹಬಾಳ್ವೆ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ […]

ಮಕ್ಕಳ ರಾಷ್ಡ್ರೀಯ ವಿಜ್ಞಾನ ಸಮಾವೇಶ : ಶಾಲೆಯ ಎರಡು ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಮಕ್ಕಳ ರಾಷ್ಡ್ರೀಯ ವಿಜ್ಞಾನ ಸಮಾವೇಶ : ಶಾಲೆಯ ಎರಡು ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Wednesday, December 5th, 2018

ದಿನಾಂಕ 30-11-2018 ರಂದು 26 ನೇ ದ.ಕ ಜಿಲ್ಲಾಮಟ್ಟದ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶ (N.C.S.C.)-’ಜಿಲ್ಲಾಮಟ್ಟದ ವಿಜ್ಞಾನ ಪ್ರಬಂಧ ಮಂಡನೆ’ ಸ್ಪರ್ಧೆಯು ಪ್ರಾದೇಶಿಕ ವಿಜ್ಞಾನ ಕೇಂದ್ರ ಪಿಲಿಕುಳದಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಕರಣ್ ಎಮ್. ಭಟ್ ಮತ್ತು ಅತಿಶಯ್ ಜೈನ್, ಚಿನ್ಮಯಕೃಷ್ಣವರ್ಮ ಮತ್ತು ತಮನ್, ವರ್ಷ ಮತ್ತು ಸಂಸ್ಕೃತಿ ಜೂನಿಯರ್ ವಿಭಾಗ ಹಾಗೂ ಕನ್ಯಾ ಶೆಟ್ಟಿ ಮತ್ತು ತಶ್ವಿ ರೈ- ಸೀನಿಯರ್ ವಿಭಾಗ ಹೀಗೆ 4 ತಂಡಗಳು ಭಾಗವಹಿಸಿರುತ್ತಾರೆ. ಸೂರ್‍ಯ- […]

Dec. 6 - Annual Sports Meet 2018

Dec. 6 – Annual Sports Meet 2018

Monday, December 3rd, 2018
ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಚೆಸ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Tuesday, November 27th, 2018

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನ. 22 ರಿಂದ 24 ರವರೆಗೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದ ರಾಜ್ಯಮಟ್ಟದ 17 ರ ವಯೋಮಿತಿಯ ಬಾಲಕಿಯರ ವಿಭಾಗದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ದೀಪ್ತಿಲಕ್ಷ್ಮೀ ಕೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಶ್ರೀಮತಿ ಮತ್ತು ಶ್ರೀಕೆ.ಶಂಕರ ಪ್ರಸಾದ ಮತ್ತು ಉಷಾ, ಬೆಳಿಯೂರುಕಟ್ಟೆ, ಪುತ್ತೂರು ಇವರ ಪುತ್ರಿ. ಡಿಸೆಂಬರ್ ಕೊನೆ ವಾರದಲ್ಲಿ ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ (S.G.F.I) ಭಾಗವಹಿಸಲಿರುವಳು ಎಂದು […]