QR Code Business Card
ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ

ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ

Friday, June 21st, 2019

ದಿನಾಂಕ 21-06-2019 ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಯೋಗ ವಿಶ್ವಕ್ಕೆ ಭಾರತದ ಕೊಡುಗೆ, ಪತಂಜಲಿಯ ಯೋಗ ಶಾಸ್ತ್ರವು ಮಾನವ ಬದುಕಿನ ಪ್ರಮುಖ ಭಾಗವೆಂದು ಪರಿಗಣಿಸಿ ಜೂನ್ ೨೧ನೇ ತಾರೀಕನ್ನು ವಿಶ್ವ ಯೋಗ ದಿನ ಎಂದು ಆಚರಿಸುತ್ತಿದ್ದೇವೆ. ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಇಂದು ಭಾರತ ವಿಶ್ವ […]

ಸ್ವಾತಿಗೆ ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ರಜತ ಪದಕ

ಸ್ವಾತಿಗೆ ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ರಜತ ಪದಕ

Thursday, June 20th, 2019

ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಸ್ವಾತಿ ಭಾರತ ಸಂಸ್ಕೃತಿ ಪ್ರತಿಷ್ಠಾನದವರು ನಡೆಸಿದ ರಾಜ್ಯ ಮಟ್ಟದ ಕಿಶೋರ ಭಾರತ ಪರೀಕ್ಷೆಯಲ್ಲಿ ಪ್ರಾಂತ ದ್ವಿತೀಯ ಸ್ಥಾನ ಪಡೆದು ರಜತ ಪದಕವನ್ನು ಪಡೆದಿರುತ್ತಾರೆ. ಶಾಲಾ ಸಂಯೋಜಕರಾಗಿ ಮಧುರಾ ಜೋಶಿ ಮತ್ತು ಸೌಮ್ಯಲತಾ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಸಾಧನೆ

ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಸಾಧನೆ

Monday, May 6th, 2019

ನಮ್ಮ ದೇಶದ ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ಮಣಿಪುರದಿಂದ ಬಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮಾಜಮುಖಿ ಯೋಜನೆಗೆ ಅನುಗುಣವಾಗಿ ತನ್ನ ಸಹಸಂಸ್ಥೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಮತ್ತು ವಸತಿಯನ್ನು ಪಡೆದು, ಕಳೆದ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಒಂಬತ್ತು ವಿದ್ಯಾರ್ಥಿಗಳು ಹಾಜರಾಗಿದ್ದು ಕನ್ನಡ ಭಾಷೆಯಲ್ಲಿ ಎಲ್ಲರೂ ಉತ್ತೀರ್ಣರಾಗಿ ಕಲಿತ ಶಾಲೆಗೂ, ಪುತ್ತೂರಿಗೂ ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ: ರಾಂ ಲಿಂಗ್ಡೊ-485, ಪಿಲ್ ದಖರ್-443, ಪಿನ್ಶ್ […]

2019 ನೇ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ  ಫಲಿತಾಂಶ

2019 ನೇ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ

Tuesday, April 30th, 2019

2019 ನೇ ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 222 ವಿದ್ಯಾರ್ಥಿಗಳು ತೇರ್ಗಡೆಯಾಗಿ 97% ಫಲಿತಾಂಶ ಬಂದಿರುತ್ತದೆ. ಶಾಲೆಯ ವಿದ್ಯಾರ್ಥಿನಿ ಕು.ಸಿಂಚನಲಕ್ಷ್ಮೀ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ. ಇವಳು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಮುರಳೀಧರ ಭಟ್ ಬಂಗಾರಡ್ಕ ಮತ್ತು ಶೋಭಾ ದಂಪತಿ ಪುತ್ರಿ. ಅವನೀಶ್ 620 ಅಂಕ, ಮತ್ತು ಶಶಾಂಕ್ ಬಿ. 619 ಅಂಕಗಳನ್ನು ಪಡೆದಿರುತ್ತಾರೆ. […]

ಬಾಸ್ಕೆಟ್ ಬಾಲ್ ತರಬೇತಿ ಶಿಬಿರ ಉದ್ಘಾಟನೆ

ಬಾಸ್ಕೆಟ್ ಬಾಲ್ ತರಬೇತಿ ಶಿಬಿರ ಉದ್ಘಾಟನೆ

Friday, March 22nd, 2019

ದಿನಾಂಕ 22-3-2019, ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಇಲ್ಲಿ ಬಾಸ್ಕೆಟ್ ಬಾಲ್ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದ ಉದ್ಟಾಟನೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಶ್ರೀ ಬಿರ್ಮಣ್ಣ ಗೌಡ ಇವರು ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೇಶವ ಪ್ರಸಾದ್ ಮುಳಿಯ ಇವರು ವಹಿಸಿ, ಶುಭ ಹಾರೈಸಿದರು. ತರಬೇತಿಯನ್ನು ಬೆಂಗಳೂರಿನ ಖ್ಯಾತ ಬಾಸ್ಕೆಟ್ ಬಾಲ್ ತರಬೇತುದಾರರಾದ ಶ್ರೀ ಕಾರ್ತಿಕ್ ಇವರು ನಡೆಸಿಕೊಡಲಿರುವರು. […]

ಹಿಂಗಾರ ಕವನ ಸಂಕಲನ ಬಿಡುಗಡೆ

ಹಿಂಗಾರ ಕವನ ಸಂಕಲನ ಬಿಡುಗಡೆ

Saturday, March 2nd, 2019

ದಿನಾಂಕ 2-3-2019 ನೇ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ಚೇತನ್.ಕೆ ವಿಟ್ಲರವರ ಚೊಚ್ಚಲ ಕನ್ನಡ ಕವನ ಸಂಕಲನವಾದ ಹಿಂಗಾರ -ಪ್ರಕೃತಿ ಕವನಗಳು ಪುಸ್ತಕ ಬಿಡುಗಡೆ ಸಮಾರಂಭ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಭಾಸ್ಕರ್ ಅಡ್ವಳ್‌ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಮುರಳೀಧರ.ಕೆ ಅವರು ವಹಿಸಿದರು. ಹಿಂಗಾರ ಕವನ ಸಂಕಲನವನ್ನು ಸಾಹಿತಿ ನಾಗರಾಜ್ ಖಾರ್ವಿ ಬಿಡುಗಡೆಗೊಳಿಸಿ ವಿಮಾರ್ಶೆಯ ಮಾತುಗಳಾನ್ನಾಡಿ ಶುಭ ಹಾರೈಸಿದರು. ಅತಿಥಿಗಳಾಗಿ ಹಿರಿಯ […]

ಹಿಂಗಾರ - ಪ್ರಕೃತಿ ಕವನಗಳು - ಪುಸ್ತಕ ಬಿಡುಗಡೆ ಕಾರ್ಯಕ್ರಮ

ಹಿಂಗಾರ – ಪ್ರಕೃತಿ ಕವನಗಳು – ಪುಸ್ತಕ ಬಿಡುಗಡೆ ಕಾರ್ಯಕ್ರಮ

Wednesday, February 27th, 2019

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ಚೇತನ್.ಕೆ.ವಿಟ್ಲ ರವರ ಚೊಚ್ಚಲ ಕನ್ನಡ ಕವನ ಸಂಕಲನವಾದ ಹಿಂಗಾರ – ಪ್ರಕೃತಿ ಕವನಗಳು ಇದೇ ಶನಿವಾರ 2-3-2019 ನೇ ರಂದು ಮಧ್ಯಾಹ್ನ 2.30 ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಶ್ರೀ ವೆಂಕಟೇಶ್ವರ ಅಮೈ - ಶ್ರದ್ಧಾಂಜಲಿ ಸಭೆ

ಶ್ರೀ ವೆಂಕಟೇಶ್ವರ ಅಮೈ – ಶ್ರದ್ಧಾಂಜಲಿ ಸಭೆ

Monday, February 25th, 2019

ದಿನಾಂಕ 24-2-2019 ನೇ ಆದಿತ್ಯವಾರ ಮುಂಜಾನೆ ಅಗಲಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಅವರ ಗೌರವಪೂರ್ವಕವಾಗಿ ಶಾಲಾ ಸಭಾಂಗಣದಲ್ಲಿ ದಿನಾಂಕ 25-2-2019 ನೇ ಸೋಮವಾರ ಬೆಳಿಗ್ಗೆ 9.30 ಕ್ಕೆ ಗಣ್ಯರ ಸಮ್ಮುಖದಲ್ಲಿ ಶ್ರದ್ದಾಂಜಲಿಯನ್ನು ಅರ್ಪಿಸಿಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ವೆಂಕಟೇಶ್ವರ ಅಮೈಯವರು ಒಬ್ಬ ಶ್ರಮಜೀವಿಯಾಗಿ ಸಂಘ ನೀಡಿದ ಯಾವುದೇ ಕಾರ್ಯವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದರು. ಸದಾ ಉತ್ಸಾಹದ ಚಿಲುಮೆಯಂತಿದ್ದ […]

ಹುತಾತ್ಮ ಯೋಧರಿಗೆ ನಮನ

ಹುತಾತ್ಮ ಯೋಧರಿಗೆ ನಮನ

Friday, February 15th, 2019

ದಿನಾಂಕ 15-2-2019 ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಮ್ಮುಕಾಶ್ಮೀರದ ಆವಂತಿಪೋರದಲ್ಲಿ ನಡೆದ ಭಯೊತ್ಪಾದಕರ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ದೇಶದ ಇತಿಹಾಸದಲ್ಲಿ ಯೋಧರ ವೀರ ಮರಣ ಭಾರತಕ್ಕೆ ತುಂಬಲಾರದ ನಷ್ಟ. ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯನು ಈ ಕೃತ್ಯವನ್ನು ಖಂಡಿಸಬೇಕು. ನಾವು ಇಂದು ನಮ್ಮ ಮನೆಗಳಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ವೀರ ಯೋಧರು ಕಾರಣ. ತಮ್ಮ ಮಗನನ್ನು ಕಳೆದುಕೊಂಡ ಪ್ರತಿ ತಾಯಿಗೆ, ಕುಟುಂಬದವರಿಗೆ ದುಃಖವನ್ನು ತಡೆಯುವ ಶಕ್ತಿ […]

ರಥಸಪ್ತಮಿ : ಸಾಮೂಹಿಕ ಸೂರ್ಯ ನಮಸ್ಕಾರ

ರಥಸಪ್ತಮಿ : ಸಾಮೂಹಿಕ ಸೂರ್ಯ ನಮಸ್ಕಾರ

Tuesday, February 12th, 2019

ಜಗತ್ತಿಗೇ ಶಕ್ತಿ ಹಾಗೂ ಬೆಳಕನ್ನು ನೀಡುವ ಭಗವಾನ್ ಸೂರ್ಯದೇವರ ಜನ್ಮದಿನವನ್ನು ರಥಸಪ್ತಮಿ ಎಂದು ದೇಶಾದ್ಯಂತ ಆಚರಿಸುವಂತೆ, ದಿನಾಂಕ 12-2-2019 ನೇ ಮಂಗಳವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಭಕ್ತಿ, ಶ್ರದ್ಧೆಗಳಿಂದ ಆಚರಿಸಲಾಯಿತು. ಶಾಲೆಯ ಸುಮಾರು 1800 ಕ್ಕೂ ಮಿಕ್ಕಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರಿಂದ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ| ಶಶಿಧರ್ […]