QR Code Business Card
ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ

ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ

Friday, July 19th, 2019

ದಿನಾಂಕ 19-7-2019 ನೇ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಸಭಾಂಗಣದಲ್ಲಿ ರೋಟರಿ ಕ್ಲಬ್, ಪುತ್ತೂರು ಪೂರ್ವದ ಸಹಯೋಗದೊಂದಿಗೆ ಇಂಟರ್‍ಯಾಕ್ಟ್ ಕ್ಲಬ್‌ನ್ನು ಉದ್ಘಾಟಿಸಲಾಯಿತು. ಇಂಟರ್‍ಯಾಕ್ಟ್ ಕ್ಲಬ್ ರೋಟರಿ ಕ್ಲಬ್‌ನ ಅಂಗಸಂಸ್ಥೆಯಾಗಿದ್ದು ಇದರ ಮೂಲ ಉದ್ದೇಶ ಮಕ್ಕಳಲ್ಲಿರುವ ವ್ಯಕ್ತಿತ್ವವನ್ನು ಮತ್ತೆ ಜಾಗೃತಿಗೊಳಿಸುವುದಾಗಿದೆ. ಮಕ್ಕಳಲ್ಲಿರುವ ಸಭಾ ಕಂಪನ, ಭಾಷಣಕಲೆ, ಸಹಾಯ ಮನೋಭಾವಗಳನ್ನು ಬೆಳೆಸುವುದು ಇಂಟರ್‍ಯಾಕ್ಟ್­ನ ಮೂಲ ಉದ್ಧೇಶವಾಗಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ್ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ನುಡಿದರು. ಅತಿಥಿಯಾಗಿ ಮಾತನಾಡಿದ ವಿವೇಕಾನಂದ […]

Heartfulness Relaxation and Meditation

Heartfulness Relaxation and Meditation

Wednesday, July 17th, 2019

ಈ ಕಾರ್ಯಕ್ರಮವು 17-7-2019 ರಂದು ಬುಧವಾರ ಸಂಜೆ 4.15 ಕ್ಕೆ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ  ಶ್ರೀ ಸುಬ್ರಾಯ ಪೈರವರು ದೀಪ ಬೆಳಗಿಸಿ ಉದ್ಘಾಟಿಸಿದವರು. ಸಂಸ್ಥೆಯ ಕಾರ್ಯಕರ್ತೆಯಾದ ಶ್ರೀಮತಿ ನಳಿನಿಯವರು ಧ್ಯಾನ ಮತ್ತು ಆಧ್ಯಾತ್ಮದ ಬಗ್ಗೆ ವಿವರಿಸಿದರು. ಹಾಗೂ ಧ್ಯಾನದ ಬಗ್ಗೆ ಚಿಂತನೆ ಮತ್ತು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಈ ಕಾರ್ಯಕ್ರಮವು ಮೂರು ದಿವಸಗಳ ಕಾಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ನೂತನ ಅಧ್ಯಕ್ಷರಾದ ಶ್ರೀಯುತ ಡಾ. ಶಿವಪ್ರಕಾಶ್ ಎಂ., ಸಂಚಾಲಕರಾದ ಮುರಳೀಧರ ಕೆ., ಕೋಶಾಧಿಕಾರಿಯವರಾದ […]

ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ

ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆ

Monday, July 15th, 2019

ವಿದ್ಯಾಭಾರತಿ ಕರ್ನಾಟಕ, ದ.ಕ.ಜಿಲ್ಲೆ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇದರ ಆಶ್ರಯದಲ್ಲಿ ಜುಲೈ 12 ರಂದು ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದು, ಜುಲೈ 26, 27  ರಂದು ಕಲ್ಲಡ್ಕದಲ್ಲಿ ನಡೆಯಲಿರುವ ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲವರ್ಗ ವಿಭಾಗದ ಬಾಲಕರಲ್ಲಿ ಪಂಕಜ್ ಭಟ್ ಪ್ರಥಮ, ಮನ್ವಿತ್ ಕೆ. ದ್ವಿತೀಯ ಸ್ಥಾನ ಪಡೆದಿದ್ದು, ಹಾಗೂ ಶಿವಚೇತನ್ ಹಳೆಮನೆ, ಪ್ರಣಿಲ್ ರೈ, ಧನುಷ್ ರಾಮ್ […]

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ

Sunday, July 14th, 2019

ವಿವೇಕಾನಂದ ಶಾಲೆ, ಜಾಲ್ಸೂರು (ವಿನೋಬನಗರ) ಇಲ್ಲಿ 13-7-2019 ರಂದು ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗಳಿಸಿರುತ್ತಾರೆ. ಬಾಲವರ್ಗ ಹುಡುಗರು: ರಿದಮಿಕ್ ವಿಭಾಗದ ಯೋಗಾಸನದಲ್ಲಿ ಚೈತನ್ಯ ಬಿ. ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ (ಪ್ರಾಂತ) ಆಯ್ಕೆಯಾಗಿರುತ್ತಾರೆ. ಕಿಶೋರ ವರ್ಗದ ಬಾಲಕರ ಗುಂಪು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ ಹಾಗೂ ವೈಯಕ್ತಿಕ ವಿಭಾಗದಲ್ಲಿ ನಿಶ್ಚಲ್ ಕೆ. ಜೆ. (9ನೇ) ದ್ವಿತೀಯ ಸ್ಥಾನ, ಮನ್ನಿತ್ ಕೆ. (9ನೇ)-ಚತುರ್ಥ ಸ್ಥಾನ, ಭವಿಷ್ […]

ವಿದ್ಯಾಭಾರತಿ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ

ವಿದ್ಯಾಭಾರತಿ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ

Wednesday, July 10th, 2019

ದಿನಾಂಕ 9-7-2019 ನೇ ಮಂಗಳವಾರದಂದು ವಿದ್ಯಾಭಾರತಿ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಸ್ಕೆಟ್ ಬಾಲ್ ಅಂಕಣದಲ್ಲಿ ನಡೆಸಲಾಯಿತು. ಪಂದ್ಯಾಟವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಭರತ್ ಪೈ ಉದ್ಘಾಟಿಸಿ ಮಾತನಾಡಿ ಮಕ್ಕಳು ದೈಹಿಕವಾಗಿ ಸದೃಢರಾಗಬೇಕಾದರೆ ಶಾರೀರಿಕವಾಗಿ ಸಾಮರ್ಥ್ಯ ಅಗತ್ಯ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಂಡಾಗ ಮಾತ್ರ ಸಾಧ್ಯ. ಆದುದರಿಂದ ಮಕ್ಕಳು ಸ್ಪರ್ಧಾತ್ಮಕ ಪಂದ್ಯಾಟಗಳ ಮೂಲಕ ತಮ್ಮನ್ನು ತೊಡಗಿಸಬೇಕೆಂದು ಹೇಳಿದರು. ಕಾರ್ಯಕ್ರಮದ […]

ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ

ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ

Tuesday, July 9th, 2019

ದಿನಾಂಕ 5-7-2019 ನೇ ಶುಕ್ರವಾರದಂದು ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾದಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಶ್ರೀ ಬಿರ್ಮಣ್ಣಗೌಡ ಇವರು ಮಾತನಾಡಿ ಶಿಕ್ಷಕರು ದಿನದಿಂದ ದಿನಕ್ಕೆ ಹೆಚ್ಚು ಕ್ರಿಯಾಶೀಲರಾದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದು. ಆಧುನಿಕ ಶಿಕ್ಷಣ ಪದ್ಧತಿಯಜೊತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಯನ್ನು ಪರಿಪೂರ್ಣರನ್ನಾಗಿಸಬಹುದುಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಡಾ. ಶಶಿಧರ್ ಕಜೆಯವರು […]

ಕಲಿಕಾ ಕೌಶಲ್ಯಗಳ ತರಬೇತಿ

ಕಲಿಕಾ ಕೌಶಲ್ಯಗಳ ತರಬೇತಿ

Tuesday, July 9th, 2019

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಕಲಿಕಾ ಕೌಶಲ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಶ್ರೀ ಎಚ್. ಎ. ಜಯಸಿಂಹರವರು 4 ದಿನಗಳ ವಿಶೇಷ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಕಾರ್ಯಾಗಾರದ ನಂತರ ಅವರು ಹತ್ತನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಅದಕ್ಕಾಗಿ ಹೇಗೆ ಅಧ್ಯಯನ ಮಾಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಮೊಬೈಲ್ ಮತ್ತು ಕಂಪ್ಯೂಟರ್‌ನಿಂದ ದೂರವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಬೇಗನೆ ಎದ್ದು ಸೂರ್ಯನನ್ನು ಹುಡುಕಬೇಕೇ ಹೊರತು ಸೂರ್ಯ ಬಂದು […]

ಅಂತರ್ ಪ್ರೌಢಶಾಲಾ ಭಾವಗೀತೆ ಸ್ಪರ್ಧೆ -  ಶ್ರೀಲಕ್ಷ್ಮಿ ಭಟ್ ಪ್ರಥಮ ಸ್ಥಾನ

ಅಂತರ್ ಪ್ರೌಢಶಾಲಾ ಭಾವಗೀತೆ ಸ್ಪರ್ಧೆ – ಶ್ರೀಲಕ್ಷ್ಮಿ ಭಟ್ ಪ್ರಥಮ ಸ್ಥಾನ

Wednesday, July 3rd, 2019

ಸರ್ವೋದಯ ಪ್ರೌಢಶಾಲೆ ಸುಳ್ಯಪದವು ಇಲ್ಲಿ ಜುಲೈ 2 ರಂದು ಡಾ. ಕೆ. ಪಿ.  ಬಾಲಕೃಷ್ಣ ರೈ ಮಧುವನ ಇವರ ಸ್ಮರಣಾರ್ಥ ನಡೆದ ಅಂತರ್ ಪ್ರೌಢಶಾಲಾ ಭಾವಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 10ನೇ ತರಗತಿಯ ಡಿ. ಶ್ರೀಲಕ್ಷ್ಮಿ ಭಟ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾಳೆ ಮತ್ತು 8ನೇ ತರಗತಿಯ ಹಂಶಿತಾ ಭಾಗವಹಿಸಿರುತ್ತಾಳೆ ಎಂದು ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.

ವಿದ್ಯಾರ್ಥಿ ನಾಯಕರ ಆಯ್ಕೆ 2019

ವಿದ್ಯಾರ್ಥಿ ನಾಯಕರ ಆಯ್ಕೆ 2019

Thursday, June 27th, 2019

ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಯ ಸ್ಥೂಲ ಪರಿಚಯ ನೀಡುವ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ-ನಾಯಕಿಯರ ಚುನಾವಣೆಯು ದಿನಾಂಕ 22-6-2019 ರಂದು ಶಾಲಾ ಆವರಣದಲ್ಲಿ ನಡೆಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸರತಿ ಸಾಲಿನಲ್ಲಿ ಬಂದು ತಮ್ಮ ನೆಚ್ಚಿನ ನಾಯಕ-ನಾಯಕಿಯರಿಗೆ ಮತ ಚಲಾಯಿಸಿದರು. ಪ್ರೌಢ ಶಾಲಾ ವಿದ್ಯಾರ್ಥಿ ನಾಯಕನಾಗಿ ಸಾತ್ವಿಕ್ (10ನೇ ತರಗತಿ) ಉಪನಾಯಕನಾಗಿ ಕಶ್ಯಪ್ ಕೆ. (9ನೇ ತರಗತಿ) ಹಾಗೂ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಕೆ. ತನ್ವಿ ಶೆಣೈ (7ನೇ ತರಗತಿ) […]

ಸ್ಕೌಟ್ಸ್‌ ಮತ್ತು ಕಬ್ ದಳ ವತಿಯಿಂದ ಪರಿಸರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸ್ಕೌಟ್ಸ್‌ ಮತ್ತು ಕಬ್ ದಳ ವತಿಯಿಂದ ಪರಿಸರ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Monday, June 24th, 2019

ವಿವೇಕಾನಂದ ಆಂಗ್ಲ ಮಾಧ್ಯಮ ತೆಂಕಿಲ ಪುತ್ತೂರು ಶಾಲೆಯ ವಿವೇಕಾನಂದ ಸ್ಕೌಟ್ಸ್‌ ಮತ್ತು ಕಬ್ ದಳ ಹಾಗೂ ನಿವೇದಿತಾ ಗೈಡ್ಸ್ ಕಂಪೆನಿಗಳು ವಿಶ್ವ ಪರಿಸರ ದಿನಾಚರಣೆಯನ್ನು ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21-6-2019 ನೇ ಶುಕ್ರವಾರ ವ್ಯವಸ್ಥಿತ ರೀತಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾರವರು ಗಿಡನೆಟ್ಟು, ’ಪರಿಸರ ಸಂರಕ್ಷಣೆಯ ಹೊಣೆಯನ್ನು ತಾವೆಲ್ಲರೂ ಹೊತ್ತು ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯವಾಗಿಸಬೇಕೆಂದು’ ಹೇಳುವುದರ ಮೂಲಕ ಅವರ ಕರ್ತವ್ಯಗಳನ್ನು ಅವರಿಗೆ ನೆನಪಿಸಿ ಹುರಿದುಂಬಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಯೋಗದಲ್ಲಿ […]