QR Code Business Card
ಗಣರಾಜ್ಯೋತ್ಸವ ಆಚರಣೆ

ಗಣರಾಜ್ಯೋತ್ಸವ ಆಚರಣೆ

Saturday, January 27th, 2018

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿದಿನಾಂಕ 26-1-2018 ರಂದು 69 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿ ಶೇಷಪ್ಪ ಗೌಡ ಅಡಿಲು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ದೇಶ ಸೇವೆಯನ್ನು ಮಾಡುವುದು ನಮ್ಮ ತಾಯಿಯ ಸೇವೆಯನ್ನು ಮಾಡಿದಂತೆ ಎಂದು ಮಕ್ಕಳಿಗೆ ಸಂದೇಶ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಸೇನಾಧಿಕಾರಿ ಶ್ರೀ ಸುಂದರ ಕೆ. ಇವರು ಮಾತನಾಡಿ ಇಂದಿನ ಲಂಚಗುಳಿತನ ಇಲ್ಲದ ಏಕೈಕ ಕ್ಷೇತ್ರ ಎಂದರೆ ಸೇನಾ ಕ್ಷೇತ್ರ ಮಾತ್ರ. ಎಲ್ಲ ಮಕ್ಕಳು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ […]

ವಿವೇಕಾನಂದ ಜಯಂತಿ

ವಿವೇಕಾನಂದ ಜಯಂತಿ

Friday, January 12th, 2018

ದಿನಾಂಕ 11-1-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ತುಳಸಿ ಶಿರ್ಲಾಲು ಇವರು ಮಾತನಾಡಿ ಪ್ರತಿ ಮಗುವಿನಲ್ಲಿ ವಿವೇಕಾನಂದ ಆದರ್ಶಗಳು ಮೈಗೂಡಿದಾಗ ನಿಜವಾದ ಭಾರತ ನಿರ್ಮಾಣವಾಗುವುದು. ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಗುಲಾಮಗಿರಿಯಿಂದ ತೊಳಲಾಡುತ್ತಿದ್ದ ಭಾರತವನ್ನು ತಮ್ಮ ಮಾತಿನ ಮೂಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದರು ಎಂದರು. ವೇದಿಕೆಯಲ್ಲಿ ಹಿರಿಯ ಅಧ್ಯಾಪಕಿ ಶ್ರೀಮತಿ ಮೋಹಿನಿ.ಕೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ ರೈ, ಪ್ರಾಥಮಿಕ ಶಾಲಾ ಮುಖ್ಯಗುರು […]

ಶಾಂತಿವನ ಟ್ರಸ್ಟ್‌ನ ಯೋಗ - ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ

ಶಾಂತಿವನ ಟ್ರಸ್ಟ್‌ನ ಯೋಗ – ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ

Wednesday, December 27th, 2017

ದಿನಾಂಕ 27-12-2017 ರಂದು ಪುತ್ತೂರು ತಾಲೂಕು ಮಟ್ಟದ 27 ನೇ ವರ್ಷದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಧರ್ಮಸ್ಥಳ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಮಕ್ಕಳ ಸಾಹಿತಿ ಇವರು ಉದ್ಘಾಟಿಸಿ ನೈತಿಕತೆ ಶಿಕ್ಷಣದ ಅವಿಭಾಜ್ಯ ಅಂಗ ಎಂದರು. ಅಧ್ಯಕ್ಷತೆಯನ್ನು ಶ್ರೀ ಸತೀಶ್‌ ಕುಮಾರ್‌ರೈ, ಮುಖ್ಯೋಪಾಧ್ಯಾಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇವರು ವಹಿಸಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉತ್ತಮ ಸಂಸ್ಕಾರದ ವಿಚಾರಕ್ಕೆ […]

ವಾರ್ಷಿಕ ಕ್ರೀಡಾಕೂಟ 2017-18

ವಾರ್ಷಿಕ ಕ್ರೀಡಾಕೂಟ 2017-18

Tuesday, December 5th, 2017

ದಿನಾಂಕ 5-12-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇದರ 2017-18 ರ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಒಳ್ಳೆಯ ಆರೋಗ್ಯ, ಸಂಸ್ಕೃತಿ, ಸಂಸ್ಕಾರವನ್ನು ಪಡೆಯಲು ಆರೋಗ್ಯವೇ ಮುಖ್ಯ. ಕ್ರೀಡೆ ಗುಣ, ಆತ್ಮ ವಿಶ್ವಾಸ, ಬದುಕಿಗೆ ಸ್ಪೂರ್ತಿ ನೀಡಬಲ್ಲದ್ದು ಮತ್ತು ಸಾಧನೆಯ ಉತ್ತುಂಗಕ್ಕೆ ಕ್ರೀಡೆಯ ಒಂದು ಪ್ರಮುಖ ಹಂತ ಎಂದರು. ರಾಜ್ಯ ತೀರ್ಪುಗಾರ ಮತ್ತು […]

25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ : ರಾಷ್ಟ್ರಮಟ್ಟಕ್ಕೆ ಆಯ್ಕೆ

25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ : ರಾಷ್ಟ್ರಮಟ್ಟಕ್ಕೆ ಆಯ್ಕೆ

Tuesday, December 5th, 2017

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯರ ತಂಡವು ಪ್ರಸ್ತುತಪಡಿಸಿದ ಸೃಷ್ಟಿ -Innovative Method of Seedgrapher ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 8ನೇ ತರಗತಿಯ ರಾಖೇಶ್‌ಕೃಷ್ಣ ತಂಡದ ನಾಯಕನಾಗಿದ್ದು, 8ನೇ ತರಗತಿಯ ಯಶಸ್ವಿ ಶೆಟ್ಟಿ, 7ನೇ ತರಗತಿಯ ಆಶ್ರಯ, ಪ್ರಥಮ ಶೆಣೈ ಮತ್ತು ಅಮೋಘ ಇವರು […]

ಜಿಲ್ಲಾಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ : ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ : ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ

Wednesday, November 29th, 2017

ಕರ್ನಾಟಕ ವಿಜ್ಞಾನ ಪರಿಷತ್ , ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಜಿಲ್ಲಾಮಟ್ಟದ 25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಮೂಡುಬಿದ್ರೆಯ ರೋಟರಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 22.11.2017 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಮತ್ತು ಕಿರಿಯರ ವಿಭಾಗದ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯರ  ವಿಭಾಗದಲ್ಲಿ ಸಿಂಚನಲಕ್ಷ್ಮಿ(9ನೇ ತರಗತಿ), ಪೂರ್ಣ ಎಸ್. ಪ್ರಸಾದ್ (9ನೇ ತರಗತಿ), ಚೈತನ್ಯ (9ನೇ ತರಗತಿ), ಧ್ಯಾನ್ ಎಸ್. ರಾವ್ (9ನೇತರಗತಿ), ಶಶಾಂಕ್ ಬಿ. (9ನೇ […]

14ನೇ ಜಿಲ್ಲಾಮಟ್ಟದ ಹಿರಿಯರ ಕ್ರೀಡಾಕೂಟ : ವೆಂಕಟೇಶ್ ಪ್ರಸಾದ್ ರಾಜ್ಯಮಟ್ಟಕ್ಕೆ ಆಯ್ಕೆ

14ನೇ ಜಿಲ್ಲಾಮಟ್ಟದ ಹಿರಿಯರ ಕ್ರೀಡಾಕೂಟ : ವೆಂಕಟೇಶ್ ಪ್ರಸಾದ್ ರಾಜ್ಯಮಟ್ಟಕ್ಕೆ ಆಯ್ಕೆ

Wednesday, November 29th, 2017

ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು ಇಲ್ಲಿ ನಡೆದ 14ನೇ ಜಿಲ್ಲಾಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕರಾದ ವೆಂಕಟೇಶ್ ಪ್ರಸಾದ್ 40+ ವಯೋಮಿತಿ ವಿಭಾಗದ ಈಟಿ ಎಸೆತದಲ್ಲಿ ದ್ವಿತೀಯ ಹಾಗೂ ಚಕ್ರ ಎಸೆತದಲ್ಲಿ ತೃತೀಯ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಿಂಚನಾಲಕ್ಷ್ಮಿ- ಜಿಲ್ಲಾ ಯುವ ವಿಜ್ಞಾನಿ

ಸಿಂಚನಾಲಕ್ಷ್ಮಿ- ಜಿಲ್ಲಾ ಯುವ ವಿಜ್ಞಾನಿ

Monday, November 27th, 2017

ದಿನಾಂಕ 22.11.2017 ರಂದು ಮೂಡುಬಿದ್ರೆಯ ರೋಟರಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾಮಟ್ಟದ  25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೇಸ್­ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿಭಾಗದ “Accident Prevention and Automatic speed control” ಎಂಬ ಯೋಜನಾ ವರದಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ನಾಯಕಿ 9 ನೇ ತರಗತಿಯ ಸಿಂಚನಲಕ್ಷ್ಮಿಯು (ಬಂಗಾರಡ್ಕ ಮುರಳೀಧರ ಭಟ್ ಮತ್ತು ಶೋಭಾ ಎಂ. ವಿ. ಇವರ ಪುತ್ರಿ) ಜಿಲ್ಲಾ […]

ಸಹ ಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ

ಸಹ ಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ

Monday, November 27th, 2017

ದ. ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಪಿತಾನಿಯೋ ಶಾಲೆ, ಮಂಗಳೂರು ಇಲ್ಲಿ ಶಿಕ್ಷಕರಿಗೆ ನಡೆದ ಸಹ ಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಪ್ರಾಥಮಿಕ ವಿಭಾಗದ ಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ರೇಷ್ಮಾ ಟಿ. ದ್ವಿತೀಯ ಹಾಗೂ ಶ್ರೀಮತಿ ಯಶೋಧಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಗೆ ಆಯ್ಕೆ

ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಗೆ ಆಯ್ಕೆ

Wednesday, November 22nd, 2017

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಮತ್ತು ಭಾರತೀಯ ಆದರ್ಶ್ ವಿದ್ಯಾ ಮಂದಿರ್ ಬಿಕ್ನೇರ್ ರಾಜಸ್ಥಾನ ಇಲ್ಲಿ ನವೆಂಬರ್ 16 ರಿಂದ 18 ರ ವರೆಗೆ ನಡೆದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಎಸ್.ಜಿ.ಎಫ್.ಐ. ಗೆ ಆಯ್ಕೆಯಾಗಿದ್ದಾರೆ. 17 ರ ವಯೋಮಾನದ ವಿಭಾಗದಲ್ಲಿ ಅಮೃತ್.ಸಿ, 10 ನೇ ತರಗತಿ- 2 ಚಿನ್ನ, 1 ಬೆಳ್ಳಿ. ಪರ್ಜನ್ಯ ಶರ್ಮ, 9 ನೇ ತರಗತಿ- 2 ಬೆಳ್ಳಿ, 1 ಕಂಚು, 14 ರ ವಯೋಮಾನದಲ್ಲಿ ನೂತನ್ ಕುಮಾರ್, 8 ನೇ […]