QR Code Business Card
Science Talent Hunt ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು

Science Talent Hunt ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು

Saturday, November 18th, 2017

ಸಹ್ಯಾದ್ರಿ ಇಂಜಿನಿಯರಿಂಗ್‌ ಕಾಲೇಯು ಆಯೋಜಿಸಿದ ‘Science talent hunt’ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. 10ನೇ ತರಗತಿ ಹರ್ಶಿತ್ ವಿಶ್ವಕರ್ಮ, ವಿಕ್ರಮ ಆಳ್ವ, ಲೋಕೇಂದರ್, ಶ್ರೀ ಚರಣ್‌ಇವರು ಮಾದರಿಯು ದ್ವಿತೀಯ ಸ್ಥಾನ ಹಾಗೂ ನಗದು ಬಹುಮಾನ ಪಡೆದಿದ್ದಾರೆ. 9 ನೇ ತರಗತಿ ವಿಷ್ಣುಪ್ರಸಾದ್, ಸಾತ್ವಿಕ್.ಎನ್, ಶಶಾಂಕ್ ಎಂ ಮತ್ತು ಶಶಾಂಕ್.ಬಿ ಪ್ರದರ್ಶಿಸಿದ ಮಾದರಿಯು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಕಾರ್ತಿಕ್ ಆರ್. (8ನೇತರಗತಿ) ಅಂಕಿತ್‌ ರೈ ಆದಿತ್ಯ ದಿನೇಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದು […]

ರಾಷ್ಟ್ರಮಟ್ಟದ [ಎಸ್.ಜಿ.ಎಫ್.ಐ] ಚೆಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು

ರಾಷ್ಟ್ರಮಟ್ಟದ [ಎಸ್.ಜಿ.ಎಫ್.ಐ] ಚೆಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು

Saturday, November 18th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನವೆಂಬರ್ 10 ರಿಂದ 14 ರ ವರೆಗೆ ವಾರಂಗಲ್‌ನಲ್ಲಿ ನಡೆದ ರಾಷ್ಟ್ರಮಟ್ಟದ [ಎಸ್.ಜಿ.ಎಫ್.ಐ] ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 14 ರ ವಯೋಮಾನದ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ತಂಡದಲ್ಲಿ 8 ನೇ ತರಗತಿಯ ಸ್ವಾತಿಕ್ ಶಿವಾನಂದ್ ಮತ್ತು ಗಗನ್ ಎಂ.ಎಸ್, 6ನೇ ತರಗತಿಯ ಪಂಕಜ್ ಭಟ್, ಮನ್ವಿತ್‌ ಕಣಜಾಲು ಮತ್ತು ದೀಪ್ತಿಲಕ್ಷ್ಮಿ ಭಾಗವಹಿಸಿದ್ದು, ಮನ್ವಿತ್‌ ಕಣಜಾಲು ಮತ್ತು ದೀಪ್ತಿಲಕ್ಷ್ಮಿ ಉತ್ತಮ ಆಟಗಾರರಾಗಿ ಬೋರ್ಡ್ ಪ್ರೈಸ್ ಗಳಿಸಿರುತ್ತಾರೆ.

ವಿಜ್ಞಾನ ಮಾದರಿ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿಜ್ಞಾನ ಮಾದರಿ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Saturday, November 18th, 2017

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಾಖೇಶ್ ಕೃಷ್ಣ (8ನೇ) ಶ್ರೀ ರವಿಶಾಮ್  ಆರ್.  ಮತ್ತು ಡಾ| ದುರ್ಗಾರತ್ನ ಇವರ ಪುತ್ರ Innovative method of seeds sowing ವಿಜ್ಞಾನ ಮಾದರಿ ತಯಾರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸ್ಪರ್ಧೆಯು ನವೆಂಬರ್ 15,16,17 ರಂದು ನವದೆಹಲಿಯಲ್ಲಿ ನಡೆಯುವುದು.

ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Wednesday, November 15th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಂತ ವಿಕ್ಟರನ ಬಾಲಿಕ ಪ್ರೌಢ ಶಾಲೆ, ಪುತ್ತೂರು, ಇಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಾಕೇಶ್‌ಕೃಷ್ಣ (8ನೇ) ಮತ್ತು ಶರತ್(8ನೇ) -ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ಆದಿತ್ಯ ದಿನೇಶ್(9ನೇ) ಮತ್ತು ಅಂಕಿತ್ ರೈ(9ನೇ)-ದ್ವಿತೀಯ ಸ್ಥಾನ, ಐಶ್ವರ್ಯ(9ನೇ) ಮತ್ತು ಅಮೃತ(9ನೇ)- ತೃತೀಯ, ಶುಭಶ್ರೀ(8ನೇ)ಮತ್ತು ವಿಜಿತ್(8ನೇ)- ತೃತೀಯ ಸ್ಥಾನ ಗಳಿಸಿದ್ದಾರೆ. ಕಾರ್ತಿಕ್.ಆರ್, ಅದ್ವೈತ್ ಶೆಟ್ಟಿ, ಸಿಂಚನಾಲಕ್ಷ್ಮಿ ಇವರು ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ ಎಂದು […]

ವಿದ್ಯಾಭಾರತಿ ದಕ್ಷಿಣ ಭಾರತ ಮಟ್ಟದ ಜ್ಞಾನ-ವಿಜ್ಞಾನ ಮೇಳ :  ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ದಕ್ಷಿಣ ಭಾರತ ಮಟ್ಟದ ಜ್ಞಾನ-ವಿಜ್ಞಾನ ಮೇಳ : ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tuesday, November 14th, 2017

ವಿದ್ಯಾಭಾರತಿ ಸಂಸ್ಥೆ ಆಯೋಜಿಸಿದ ದಕ್ಷಿಣ ಭಾರತ ಮಟ್ಟದ ಜ್ಞಾನ -ವಿಜ್ಞಾನ ಮೇಳವು ಹೈದರಾಬಾದ್‌ನ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕನ್ಯಾ ಶೆಟ್ಟಿ(8ನೇ)-ಸಂಸ್ಕೃತಿ ಜ್ಞಾನ ಪತ್ರವಾಚನ-ಪ್ರಥಮ ಯಶಸ್ವಿನಿ ಶೆಟ್ಟಿ(7ನೇ)-ವಿಜ್ಞಾನ ಪತ್ರವಾಚನ ಪ್ರಥಮ, ಸುಮೇಧಾ ನಾವಡ(8ನೇ)-ಕಂಪ್ಯೂಟರ್ ಮಾದರಿ ರಚನೆ-ಪ್ರಥಮ, ನಿಶ್ಚಯ್ ರೈ(8ನೇ)-ವಿಜ್ಞಾನ ಮಾದರಿ-ಪ್ರಥಮ, ಸುಶ್ರುತ್(8ನೇ) -ವಿಜ್ಞಾನ ಮಾದರಿ-ದ್ವಿತೀಯ, ತೇಜಸ್(8ನೇ) -ವಿಜ್ಞಾನ ಮಾದರಿ-ದ್ವಿತೀಯ, ನಿಖಿಲಾ(10ನೇ)-ವಿಜ್ಞಾನ ಮಾದರಿ-ದ್ವಿತೀಯ, ಚರಣ್(10ನೇ) -ವಿಜ್ಞಾನ ಮಾದರಿ-ದ್ವಿತೀಯ, ಧ್ಯಾನ್.ಎಸ್.ರಾವ್(9ನೇ)-ವಿಜ್ಞಾನ ಮಾದರಿ-ದ್ವಿತೀಯ ಸ್ಥಾನ. ಇವರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ […]

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

Saturday, November 4th, 2017

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನವೆಂಬರ್ 6 ರಿಂದ 12 ರ ವರೆಗೆ ಮಧ್ಯಪ್ರದೇಶದ ಭೋಪಾಲ್ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10 ನೇ ತರಗತಿಯ ವಿದ್ಯಾರ್ಥಿಗಳಾದ ವಿನೀತ್ ಜಿ.ಆರ್ ಚಕ್ರ ಎಸೆತ ಸ್ಪರ್ಧೆಗೆ ಹಾಗೂ ಹಿಮಾನಿ.ಜಿ 4×100 ಮೀ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿನೀತ್.ಜಿ.ಆರ್, ರಾಮಚಂದ್ರ ಜಿ. ಮತ್ತು ಸುನೀತಾ.ಎಂ, ಪರ್ಲಡ್ಕ ಇವರ ಪುತ್ರ ಹಾಗೂ ಹಿಮಾನಿ ಜಿ., ಇವಳು ಪದ್ಮನಾಭ ಗೌಡ ಜಿ. ಮತ್ತು ಕವಿತಾ ಜಿ. ಪರ್ಲಡ್ಕ ಇವರ ಪುತ್ರಿ.

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

Wednesday, November 1st, 2017

ದಿನಾಂಕ 1-1-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳು ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಗೈದು, ನಾಡಗೀತೆ ಹಾಗೂ ನಿತ್ಯೋತ್ಸವ ಹಾಡನ್ನು ಹಾಡಿದರು. ಶಾಲಾ ಶಿಕ್ಷಕ-ಶಿಕ್ಷಕೇತರ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

Smart Class Educational Services ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮ

Smart Class Educational Services ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮ

Friday, October 27th, 2017

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಿನಾಂಕ 25-10-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಸುಸಜ್ಜಿತ ಸುಜ್ಞಾನ ಗ್ರಂಥಾಲಯ, ದ್ರೋಣಾಚಾರ್ಯ-ಕ್ರೀಡಾ ಸಮುಚ್ಛಯ, ಸೃಷ್ಟಿ-ಕಲಾ ಕುಟೀರ, ಇ-ಶಿಕ್ಷಣವನ್ನು ಅಳವಡಿಸಿಕೊಂಡ Smart Class Educational Services ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು. ಸೃಷ್ಟಿ-ಕಲಾ ಕುಟೀರ ಹಾಗೂ ಇ-ಶಿಕ್ಷಣವನ್ನು ಅಳವಡಿಸಿಕೊಂಡ Smart Class Educational Services ತಂತ್ರಜ್ಞಾನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಿ ಶುಭ ಹಾರೈಸಿದರು. ದ್ರೋಣಾಚಾರ್ಯ-ಕ್ರೀಡಾ ಸಮುಚ್ಛಯವನ್ನು […]

ಚೆಸ್ ಸ್ಪರ್ಧೆ : ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಚೆಸ್ ಸ್ಪರ್ಧೆ : ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Thursday, October 26th, 2017

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಂತ ಅಲೋಶಿಯಸ್ ಹಿ.ಪ್ರಾ.ಶಾಲೆ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ 14 ಮತ್ತು 17 ರ ವಯೋಮಿತಿಯ ಬಾಲಕ-ಬಾಲಕಿಯರ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಯಾದ ಶಶಾಂಕ್.ಭಟ್.ಜಿ.ಎಸ್(17ರ ವಯೋಮಿತಿಯ ಬಾಲಕರಲ್ಲಿ ಪ್ರಥಮ ಸ್ಥಾನ)-ಶಿವಕುಮಾರ್ ಮತ್ತು ದೀಪಾರವರ ಪುತ್ರ, 6ನೇ ತರಗತಿಯ ಶಿವಚೇತನ್ ಹಳೆಮನೆ(14ರ ವಯೋಮಿತಿಯ ಬಾಲಕರಲ್ಲಿ ಪ್ರಥಮ ಸ್ಥಾನ)-ಸೂರ್ಯಶಂಕರ ಮತ್ತು ಮಾಲತಿ ಭಟ್‌ರವರ ಪುತ್ರ, 6ನೇ ತರಗತಿಯ ಪಂಕಜ್ ಭಟ್(14ರ ವಯೋಮಿತಿಯ ಬಾಲಕರಲ್ಲಿ ತೃತೀಯ ಸ್ಥಾನ)-ಡಾ.ಎಸ್.ಎಂ.ಪ್ರಸಾದ್ […]

ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಶಾಲಾ ವಿದ್ಯಾರ್ಥಿಗಳು ಆಯ್ಕೆ

ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಶಾಲಾ ವಿದ್ಯಾರ್ಥಿಗಳು ಆಯ್ಕೆ

Monday, October 16th, 2017

ವಿದ್ಯಾಭಾರತಿ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಜ್ಞಾನ -ವಿಜ್ಞಾನ ಮೇಳವು ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಯಶಸ್ವಿನಿ ಶೆಟ್ಟಿ(7ನೇ) – ವಿಜ್ಞಾನ ಪತ್ರವಾಚನ ಪ್ರಥಮ, ಕನ್ಯಾ ಶೆಟ್ಟಿ(8ನೇ) -ಸಂಸ್ಕೃತಿ ಜ್ಞಾನ ಪತ್ರವಾಚನ – ಪ್ರಥಮ, ಸುಮೇಧಾ ನಾವಡ(8ನೇ)-ಕಂಪ್ಯೂಟರ್ ಮಾದರಿ ರಚನೆ-ಪ್ರಥಮ, ನಿಖಿಲಾ(10ನೇ)-ವಿಜ್ಞಾನ ಮಾದರಿ-ಪ್ರಥಮ, ಚರಣ್(10ನೇ) -ವಿಜ್ಞಾನ ಮಾದರಿ-ಪ್ರಥಮ, ನಿಶ್ಚಯ್ ರೈ(8ನೇ)-ವಿಜ್ಞಾನ ಮಾದರಿ-ಪ್ರಥಮ, ಧ್ಯಾನ್.ಎಸ್.ರಾವ್(9ನೇ) -ವಿಜ್ಞಾನ ಮಾದರಿ-ಪ್ರಥಮ, ಸುಶ್ರುತ್(8ನೇ) -ವಿಜ್ಞಾನ ಮಾದರಿ-ಪ್ರಥಮ, ತೇಜಸ್(8ನೇ) -ವಿಜ್ಞಾನ ಮಾದರಿ-ಪ್ರಥಮ, ದೀಪಶ್ರೀ(10ನೇ), ನಿಶ್ಮಿತಾ(10ನೇ), […]