QR Code Business Card
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಕ್ರೀಡಾಕೂಟಕ್ಕೆ ಪ್ರಣಮ್ಯಾ ಶೆಟ್ಟಿ ಆಯ್ಕೆ

ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಕ್ರೀಡಾಕೂಟಕ್ಕೆ ಪ್ರಣಮ್ಯಾ ಶೆಟ್ಟಿ ಆಯ್ಕೆ

Friday, February 3rd, 2017

ಡಿಸೆಂಬರ್ 26 ರಿಂದ 29 ರ ವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರಣಮ್ಯಾ ಶೆಟ್ಟಿ (ಗಂಗಾಧರ ಶೆಟ್ಟಿ ಮತ್ತು ಶುಭಲಕ್ಷ್ಮಿ ಶೆಟ್ಟಿ, ಕೈಕಾರ ದಂಪತಿ ಪುತ್ರಿ) 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಚಕ್ರ ಎಸೆತ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಫೆಬ್ರವರಿ 6 ರಿಂದ 9 ರ ವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ […]

ಅಮೇರಿಕಾದ ರೋಟರಿ ತಂಡ ಶಾಲೆಗೆ ಭೇಟಿ

ಅಮೇರಿಕಾದ ರೋಟರಿ ತಂಡ ಶಾಲೆಗೆ ಭೇಟಿ

Tuesday, January 31st, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿ ದಿನಾಂಕ 31-1-2017 ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ರೋಟರಿ ತಂಡ ಶಾಲೆಗೆ ಭೇಟಿ ನೀಡಿತು. ಶಾಲಾ ದೈನಂದಿನ ಪ್ರಾರ್ಥನೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಸೇರಿಕೊಂಡರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ತಂಡದಲ್ಲಿ ರೋ|ಕೌಡಿನ್ ಹೆಸ್‌ಮೆ ಹುಸೈನಿ, ರೋ| ನೀನಾ ಗಿನ್‌ನೋಟಿ, ರೋ| ಸುಜಾನೆ ಡಿಲೇನ್, ರೋ| ಸರ್‍ಹಾ ಮರ್ಚೆಂಟ್, ರೋ| ಎಲ್ಲಿ ಮೊರಿಸ್, ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪೂರ್ವದ ಅಧ್ಯಕ್ಷರಾದ ಮುರಳಿ ಶ್ಯಾಂ, ರೋ| ವಸಂತ ಜಾಲಾಡಿ, ಸತ್ಯನಾರಾಯಣ, […]

ರೂಬೆಲ್ಲಾ ಮತ್ತು ದಡರಾ ಲಸಿಕಾ - ಮಾಹಿತಿ ಕಾರ್ಯಾಗಾರ

ರೂಬೆಲ್ಲಾ ಮತ್ತು ದಡರಾ ಲಸಿಕಾ – ಮಾಹಿತಿ ಕಾರ್ಯಾಗಾರ

Saturday, January 28th, 2017

ದಿನಾಂಕ 28-1-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ರಾಷ್ಟ್ರೀಯ ರೂಬೆಲ್ಲಾ ಮತ್ತು ದಡರಾ ಲಸಿಕಾ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಸಹಾಯಕಿ ಅನುರಾಧ ಮಾಹಿತಿ ನೀಡಿದರು. ನಮ್ಮ ಮಗುವಿನಲ್ಲಿ ಹ್ಯುಮಿನೆಟ್ ಶಕ್ತಿಯ ಅಂಶ ಕಡಿಮೆಯಾದಾಗ ರೋಗ ನಿರೋಧಕ ಶಕ್ತಿಯು ಅಂಶ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆದುದರಿಂದ ಫೆಬ್ರವರಿ 7 ರಿಂದ 28 ವರೆಗೆ ಲಸಿಕಾ ಕಾರ್ಯಕ್ರಮ ಕ್ರಿಯಾಯೋಜನೆಯ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. […]

ಖೇಲ್ ಭಾರತ್ ವಾಲಿಬಾಲ್ - ರಾಷ್ಟ್ರಮಟ್ಟಕ್ಕೆ ಆಯ್ಕೆ

ಖೇಲ್ ಭಾರತ್ ವಾಲಿಬಾಲ್ – ರಾಷ್ಟ್ರಮಟ್ಟಕ್ಕೆ ಆಯ್ಕೆ

Saturday, January 28th, 2017

ಕೇಂದ್ರ ಸಚಿವಾಲಯದ ವತಿಯಿಂದ ಖೇಲ್ ಭಾರತ್ ಕಾರ್ಯಕ್ರಮದ ಅಂಗವಾಗಿ ಜ. 23 ಮತ್ತು 24 ರಂದು ಬೆಳಗಾಂನಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ 14ರ ವಯೋಮಾನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಯಾದ ಹೃತಿಕ್ ಎಂ. (ಶ್ರೀ ಮೋನಪ್ಪ ಎಂ. ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿ ಪುತ್ರ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಫೆಬ್ರವರಿ 1 ರಿಂದ 5 ರವರೆಗೆ ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ […]

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ

Saturday, January 28th, 2017

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು, ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನಿಶ್ಚಿತ್ ರೈ ಮತ್ತು ಸ್ವಸ್ತಿಕ್ ಪದ್ಮ ಇವರನ್ನು ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯೆಂದು ಗುರುತಿಸಿ, ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಶಾಲಾ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.

68 ನೇ ಗಣರಾಜ್ಯೋತ್ಸವ ಆಚರಣೆ

68 ನೇ ಗಣರಾಜ್ಯೋತ್ಸವ ಆಚರಣೆ

Friday, January 27th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 68 ನೇ ಗಣರಾಜ್ಯೋತ್ಸವವನ್ನು ಶಾಲಾ ಆವರಣದಲ್ಲಿ ಆಚರಿಸಲಾಯಿತು. ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ ಜಾಲ್ಸೂರು ಕಾಡಮನೆ ವಸಂತ ಗೌಡ ಉರ್ವ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣಗೈದು ದೇಶಪ್ರೇಮವೆಂಬುದು ಕೇವಲ ಸೈನಿಕ ಮಾತ್ರವಲ್ಲ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಇರಬೇಕು. ದೇಶಕಟ್ಟುವ ಕೆಲಸದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವವಾದುದು. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರ ಮೂಲಕ ದೇಶಭಕ್ತಿಯ ಜಾಗೃತಿ ಮೂಡುತ್ತದೆ ಎಂದರು. ವೇದಿಕೆಯಲ್ಲಿ […]

ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ  ಸ್ವಸ್ತಿಕ್ ಪದ್ಮ ಹಾಗೂ ಕನ್ಯಾ ಶೆಟ್ಟಿಗೆ ಪ್ರಶಂಸೆ

ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಸ್ವಸ್ತಿಕ್ ಪದ್ಮ ಹಾಗೂ ಕನ್ಯಾ ಶೆಟ್ಟಿಗೆ ಪ್ರಶಂಸೆ

Wednesday, January 25th, 2017

24ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಪರಿಷತ್ತು ಇವರ ವತಿಯಿಂದ ನಡೆದ ರಾಷ್ಟ್ರೀಯ ವಿಜ್ಞಾನ ಸಮಾವೇಶವು ಮಹಾರಾಷ್ಟ್ರದ ಬಾರಾಮತಿಯಲ್ಲಿ 27-12-2016 ರಿಂದ 30-12-2016 ರವರೆಗೆ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಮತ್ತು ಕಿರಿಯರ ಎರಡು ತಂಡಗಳು ಭಾಗವಹಿಸಿದ್ದು, ಹಿರಿಯ ತಂಡದ ನಾಯಕ ಸ್ವಸ್ತಿಕ್ ಪದ್ಮ ( ಶ್ರೀ ರಾಮ್ ಭಟ್ ಮತ್ತು ಮಲ್ಲಿಕಾ ಭಟ್ ಮುರ್ಗಜೆ ದಂಪತಿ ಪುತ್ರ), ಬಾಲವಿಜ್ಞಾನಿಯಾಗಿ ಮೂಡಿ ಬಂದಿದ್ದು, ಅದ್ಭುತ ಪ್ರಶಂಸೆಗೆ ಪಾತ್ರವಾಗಿದೆ. ಮತ್ತು ಆ ತಂಡ ಪ್ರದರ್ಶಿಸಿದ ’ಪ್ಲಾಮಾ’ ವಸ್ತುವು ಹೆಚ್ಚಿನ ಪರೀಕ್ಷೆಗಳಿಗೆ […]

ಶಮಂತ್ ರೈ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆ

ಶಮಂತ್ ರೈ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆ

Wednesday, January 25th, 2017

ರಾಷ್ಟೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಾಗೂ ಎನ್.ಸಿ.ಇ.ಆರ್.ಟಿ ನವದೆಹಲಿ ಇವರ ಸಹಯೋಗದಲ್ಲಿ ದಿನಾಂಕ 4-1-2017 ರಿಂದ 9-1-2017 ರವರೆಗೆ ಪಾಂಡಿಚೇರಿಯಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ [ವಿಜ್ಞಾನ ಮಾದರಿ] ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಮಂತ ರೈ (ಹರೀಶ್ ರೈ ಮತ್ತು ಕವಿತಾ.ಎಚ್.ರೈ, ಬಡಗನ್ನೂರು, ಇವರ ಸುಪುತ್ರ) ’ಹಸಿರು ಕಾರ್ಖಾನೆ’ ಎಂಬ ಮಾದರಿಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ಪ್ರೌಢ ಶಾಲಾ ವಿಭಾಗದ ರಾಮಾಯಣ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ರ್‍ಯಾಂಕ್

ಪ್ರೌಢ ಶಾಲಾ ವಿಭಾಗದ ರಾಮಾಯಣ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ರ್‍ಯಾಂಕ್

Monday, January 23rd, 2017

’ಭಾರತ ಸಂಸ್ಕೃತಿ ಪ್ರತಿಷ್ಠಾನ’ ಬೆಂಗಳೂರು ಇವರು ನಡೆಸಿದ ಪ್ರೌಢ ಶಾಲಾ ರಾಮಾಯಣ -ಮಹಾಭಾರತ ಪರೀಕ್ಷೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿಭಾಗದ ರಾಮಾಯಣ ಪರೀಕ್ಷೆಯಲ್ಲಿ ಶಿವಾನಿ.ರೈ.ಕೆ, 8 ನೇ ತರಗತಿ 97 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ತೃತೀಯ ರ್‍ಯಾಂಕ್ ಗಳಿಸಿ ಎಪ್ರಿಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಲಿದ್ದಾಳೆ. ಈಕೆ ಪುಣಚದ ಕೆ.ರಾಧಾಕೃಷ್ಣ ರೈ-ಪ್ರೇಮಾವತಿ ಆರ್ ರೈ ಇವರ ಪುತ್ರಿ. ಹಾಗೆಯೇ 8 ನೇ ತರಗತಿ ಅನಘಾ ರಾವ್ ರಾಮಾಯಣ ಪರೀಕ್ಷೆಯಲ್ಲಿ 95 ಅಂಕಗಳನ್ನು ಪಡೆದು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆದು […]

ಆಂಗ್ಲ ಭಾಷಾ ಕಾರ್ಯಾಗಾರ

ಆಂಗ್ಲ ಭಾಷಾ ಕಾರ್ಯಾಗಾರ

Monday, January 23rd, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿನ ಶಿಕ್ಷಕರಿಗಾಗಿ ಆಂಗ್ಲ ಭಾಷಾ ಸಂವಹನ ಕಲೆ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ದಿನಾಂಕ 21-1-2017 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಮಂಗಳಾ ಉಪಾಧ್ಯಾಯ, ನಿವೃತ್ತ ಮುಖ್ಯ ಶಿಕ್ಷಕರು ಮುಂಬಯಿ ಇವರು ಆಂಗ್ಲ ಭಾಷೆಯಲ್ಲಿ ಸಂಹವನ ಮಾಡುವ ಕಲೆ ಮತ್ತು ಆಂಗ್ಲ ಭಾಷಾ ಬೋಧನೆ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು. ಸಭಾಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಅಮೈ, ಇವರು ಮಾತನಾಡಿ ಸಮಯದ ಮಹತ್ವದ ಬಗ್ಗೆ […]