QR Code Business Card
ವಿವೇಕಾನಂದ ವಿದ್ಯಾವರ್ಧಕ ಸಂಘ - ಕೋಟಿ ವೃಕ್ಷ ಆಂದೋಲನ

ವಿವೇಕಾನಂದ ವಿದ್ಯಾವರ್ಧಕ ಸಂಘ – ಕೋಟಿ ವೃಕ್ಷ ಆಂದೋಲನ

Friday, June 23rd, 2017

ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು, ಸಮರ್ಥ ಭಾರತ ಪುತ್ತೂರು ಘಟಕ ಇವರ ವತಿಯಿಂದ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಕೊಲ, ಬಡಗನ್ನೂರು ಇಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಗಜಾನನ ವಿದ್ಯಾಸಂಸ್ಥೆಗಳು, ಈಶ್ವರಮಂಗಲ ಇದರ ಉಪಾಧ್ಯಕ್ಷ ಹಾಗೂ ಕೋಟಿ ಚೆನ್ನಯ ಸಂವರ್ಧನಾ ಪ್ರತಿಷ್ಠಾನದ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ದೀಪಬೆಳಗಿಸಿ, ಸಸಿ ವಿತರಣೆ ಮಾಡುವ ಮೂಲಕ ಚಾಲನೆಗೊಳಿಸಿದರು. ಅತಿಥಿಗಳಾಗಿ ಆಗಮಿಸಿದ ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲಾ ನಿವೃತ್ತ ಶಿಕ್ಷಕ ರಘುನಾಥ […]

ವಿಶ್ವಯೋಗ ದಿನಾಚರಣೆ

ವಿಶ್ವಯೋಗ ದಿನಾಚರಣೆ

Wednesday, June 21st, 2017

ದಿನಾಂಕ 21-6-2017 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಮನುಷ್ಯನಾಗಿ ಬದುಕಲು ಯೋಗ ಬೇಕು. ಮನುಷ್ಯನಲ್ಲಿರುವ ಮೃಗೀಯ ಭಾವನೆಗಳು ದೂರವಾಗಬೇಕಾದರೆ ಯೋಗಬೇಕು. ಮನಸ್ಸು ಮತ್ತು ಶರೀರದ ಸಂಯೋಗವೇ ಯೋಗ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಪತಂಜಲಿ ಮುನಿಗಳು ಅಷ್ಟಾಂಗಯೋಗವನ್ನು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ವೃದ್ಧಿಸಬೇಕಾದರೆ ಯೋಗ ಅತ್ಯಗತ್ಯ. ವರ್ಷದ ದೀರ್ಘ ದಿನವಾದ ಜೂನ್ 21 ರಂದು ಆಚರಿಸುವ ಯೋಗ ಎಲ್ಲರ ಜೀವನದಲ್ಲಿ ಉತ್ತಮ ಸುಯೋಗವನ್ನು ತರಲಿ ಎಂದು ಮೈತ್ರೇಯಿ ಗುರುಕುಲದ ಆಚಾರ್ಯರಾದ ಉಮೇಶ ಹೆಗಡೆಯವರು ವಿವೇಕಾನಂದ […]

ಶಾಲೆಗೆ ಹೊಸ ಶಾಲಾ ವಾಹನ ಸೇರ್ಪಡೆ

ಶಾಲೆಗೆ ಹೊಸ ಶಾಲಾ ವಾಹನ ಸೇರ್ಪಡೆ

Wednesday, May 31st, 2017

ದಿನಾಂಕ 29-05-2017 ರಂದು ಪೆರ್ನೆ-ಕಡಂಬು-ಹಾರಕೆರೆ-ಬೇರಿಕೆ-ಸೇಡಿಯಾಪು-ಕೆಮ್ಮಾಯಿ-ವಿಷ್ಟು ಮಂಟಪ- ಮಾರ್ಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹೊಸ ಶಾಲಾ ವಾಹನವನ್ನು ಪ್ರಾರಂಭಿಸಲಾಯಿತು. ಶ್ರೀ ಕೃಷ್ಣ ನಾಯ್ಕ್ ಹೊಸ ಶಾಲಾ ವಾಹನ ವ್ಯವಸ್ಥೆಯನ್ನು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಶ್ರೀ ಮುರಳೀಧರ, ಆಡಳಿತ ಮಂಡಳಿ ಸದಸ್ಯ ಶ್ರೀ ಚಂದ್ರಶೇಖರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ಯಾಂಪಸ್ ಸೂಪರ್‌ವೈಸರ್ ಶ್ರೀ ಶ್ಯಾಮಪ್ರಸಾದ್.ಡಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸದಸ್ಯ ಶ್ರೀ ರವಿ ಮುಂಗ್ಲಿಮನೆ, ರಾಘವೇಂದ್ರ […]

ಐರಿಸ್ ವಿಜ್ಞಾನ ಶಿಬಿರಕ್ಕೆ ರಾಕೇಶಕೃಷ್ಣ ಆಯ್ಕೆ

ಐರಿಸ್ ವಿಜ್ಞಾನ ಶಿಬಿರಕ್ಕೆ ರಾಕೇಶಕೃಷ್ಣ ಆಯ್ಕೆ

Wednesday, May 24th, 2017

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಾಕೇಶ ಕೃಷ್ಣ ಅವರು ಆರನೇ ರಾಷ್ಟ್ರ ಮಟ್ಟದ ಇನ್‌ಸ್ಪಯರ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದರು. ಅವರನ್ನು ವಿಜ್ಞಾನ ಕ್ಷೇತ್ರದ ಈ ಸಾಧನೆಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಭಿನಂದಿಸಿದ್ದಾರೆ. ಈಗ ಅವರು IRIS(Iniative for Resource & Innovation in Science)ನ ವತಿಯಿಂದ ಇದೇ ಮೇ೨೫ ಮತ್ತು ೨೬ರಂದು ಚೆನೈನಲ್ಲಿ ನಡೆಯುವ ವಿಜ್ಞಾನ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಯನ್ನು ಮಾಡಿ ವಿಜ್ಞಾನ ಶಿಬಿರಕ್ಕೆ […]

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Monday, May 15th, 2017

ದಿನಾಂಕ 15-5-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2017 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಕ್ಕೂ ಅಧಿಕ ಅಂಕ ಗಳಿಸಿದ 35 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಕ್ಕಳನ್ನು ಶಾಲು ಹೊದಿಸಿ ಸನ್ಮಾನಿಸಿ, ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಪೋಷಕರು ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶ್ರೀಮತಿ ಸಾಯಿಗೀತಾ ವಂದಿಸಿ, ಶ್ರೀಮತಿ […]

ಸ್ವಸ್ತಿಕ್ ಪದ್ಮ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಸ್ವಸ್ತಿಕ್ ಪದ್ಮ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Thursday, May 11th, 2017

INTEL ನ IRIS ರಾಷ್ಟ್ರ ಮಟ್ಟದ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಮೇ 14 ರಿಂದ 23 ರ ವರೆಗೆ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ISEF ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುತ್ತಿದ್ದಾರೆ. ಇವರು ನಿರುಪಯುಕ್ತ, ತ್ಯಾಜ್ಯ ಪ್ಲಾಸ್ಟಿಕ್ ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ ಅನೇಕ ವಿಧದ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಎಂಬ ಪ್ರಯೋಗಬದ್ಧ ಸಂಶೋಧನೆಯನ್ನು ಮಾಡಿರುತ್ತಾರೆ ಹಾಗೂ ಈ ಸಂಶೋಧನೆಗೆ ASM(American Standard Materials) ಅವಾರ್ಡ್ ಪಡೆದ ಭಾರತದ […]

ಪ್ರೌಢಶಾಲಾ ರಾಮಾಯಣ ಪರೀಕ್ಷೆಯಲ್ಲಿ  ಶಿವಾನಿ ರೈಗೆ ರಜತ ಪದಕ

ಪ್ರೌಢಶಾಲಾ ರಾಮಾಯಣ ಪರೀಕ್ಷೆಯಲ್ಲಿ ಶಿವಾನಿ ರೈಗೆ ರಜತ ಪದಕ

Friday, May 5th, 2017

ಭಾರತ ಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಇವರು ನಡೆಸಿದ ಪ್ರೌಢಶಾಲಾ ರಾಮಾಯಣ ಪರೀಕ್ಷೆಯಲ್ಲಿ 97 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಿವಾನಿ.ರೈ.ಕೆ, 8ನೇ ತರಗತಿ-ಇವಳು ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಜತ ಪದಕದೊಂದಿಗೆ ಸನ್ಮಾನಿತಳಾಗಿರುತ್ತಾಳೆ. ಈಕೆ ಪುಣಚದ ಶ್ರೀ ರಾಧಾಕೃಷ್ಣ ರೈ ಹಾಗೂ ಪ್ರೇಮಾವತಿ ರೈ ಇವರ ಪುತ್ರಿ. ಶಾಲಾ ಸಂಯೋಜಕರಾದ ಶ್ರೀಮತಿ ಮಧುರಾ ಜೋಶಿ ಹಾಗೂ ಶ್ರೀಮತಿ ಸೌಮ್ಯಲತಾ ಇವಳಿಗೆ ಮಾರ್ಗದರ್ಶನ ನೀಡಿರುತ್ತಾರೆ.

ಸವಿ ಸಮ್ಮಿಲನ

ಸವಿ ಸಮ್ಮಿಲನ

Tuesday, April 11th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಇಲ್ಲಿ ಸುಮಾರು 29 ವರ್ಷಗಳಿಂದ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಾರಾಯಣ ಪೂಜಾರಿ ಮೇರಡ್ಕ ಇವರು ’ಸವಿ ಸಮ್ಮಿಲನ’ ವಿಶೇಷ ದಂಪತಿಗಳಿಗೆ ಕೊಡಮಾಡುವ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಎಪ್ರಿಲ್ 2 ರಂದು ಬಂಟ್ವಾಳದ ಕಜೆಕಾರು ಗ್ರಾಮದ ಅಂಬಟೆಮಾರು ಚಂದ್ರಾವತಿ ಮತ್ತು ಗಂಗಾಧರ ಪೂಜಾರಿ ದಂಪತಿಗಳ 37 ನೇ ವರ್ಷದ ವೈವಾಹಿಕ ಸಂಭ್ರಮದಂದು 42 ವಿವಿಧ ಜಾತಿ, ಧರ್ಮಿಯರಿಗೆ ಹಮ್ಮಿಕೊಂಡ ಈ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ನಳಿನಿ ನಾರಾಯಣ ಮೇರಡ್ಕ ದಂಪತಿಗಳು ಈ ಸನ್ಮಾನ ಸ್ವೀಕರಿಸಿದ್ದಾರೆ. […]

ಉತ್ತಮ ಆರೋಗ್ಯಕ್ಕೆ ಯೋಗ ಪೂರಕ - ಶ್ರೀ ರಾಜೇಶ್ ಆಚಾರ್ಯ

ಉತ್ತಮ ಆರೋಗ್ಯಕ್ಕೆ ಯೋಗ ಪೂರಕ – ಶ್ರೀ ರಾಜೇಶ್ ಆಚಾರ್ಯ

Monday, April 3rd, 2017

ಮನುಷ್ಯನ ಸರ್ವತೋಮುಖ ಬೆಳೆವಣಿಗೆಗೆ ಆರೋಗ್ಯಕರ ಶರೀರ ಅಗತ್ಯ. ಆರೋಗ್ಯಕರ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಯೋಗಭ್ಯಾಸ ಪೂರಕ ಎಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಎಸ್-ವ್ಯಾಸ ಬೆಂಗಳೂರು ಇದರ ಸಂಯೋಜಕ ಶ್ರೀ ರಾಜೇಶ್ ಆಚಾರ್ಯ ಹೇಳಿದರು. ಅವರು ದಿನಾಂಕ 3-4-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಮತ್ತು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಎಸ್-ವ್ಯಾಸ, ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪದಲ್ಲಿ ಸಂಯೋಜಿಸಲಾಗಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಉದ್ಧೇಶಿಸಿ […]

ಜೆ.ಸಿ.ಐ. ವತಿಯಿಂದ ಕಾರ್ಯಾಗಾರ

ಜೆ.ಸಿ.ಐ. ವತಿಯಿಂದ ಕಾರ್ಯಾಗಾರ

Saturday, April 1st, 2017

ದಿನಾಂಕ 1-4-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಮತ್ತು ಜೆ.ಸಿ.ಐ, ಪುತ್ತೂರು ಆಶ್ರಯದಲ್ಲಿ 9 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ ದರ್ಶನ್ ಕಲಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಭಾರತೀಯ ರಾಷ್ಟ್ರೀಯ ಜೆ.ಸಿ.ಐ. ತರಬೇತುದಾರರಾದ ಸಂತೋಷ್ ಕುಮಾರ್ ಮತ್ತು ಪ್ರಮೋದ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಆಂಗ್ಲ ಮಾಧ್ಯಮ ಶಾಲಾ ಹಳೇ ವಿದ್ಯಾರ್ಥಿನಿ ದೀಕ್ಷಾ ಪಾರ್ವತಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. […]