QR Code Business Card
ಶಾಲೆಗೆ ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

ಶಾಲೆಗೆ ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

Monday, March 27th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 27-3-2017 ರಂದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ನೂತನ ಗಣಕಯಂತ್ರವನ್ನು ಸಂಸ್ಥೆಯ ಪೋಷಕರಾದ ಶ್ರೀ ಕೇಶವ್ ಮೂರ್ತಿ.ಡಿ ದಂಪತಿಗಳು, ಮಾನಸ ಕೈಮ್ಸ್ ಅಂಡ್ ಓಪ್ಕಿಕಲ್ಸ್, ಹೊಸ ತಂತ್ರಜ್ಞಾನದ ಗಣಕಯಂತ್ರವನ್ನು ಕಂಪ್ಯೂಟರ್ ಲ್ಯಾಬ್‌ಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ಮುರಳೀಧರ.ಕೆ, ಆಡಳಿತ ಮಂಡಳಿಯ ಖಜಾಂಜಿಯಾದ ಶ್ರೀ ಪ್ರಸನ್ನ ಕುಮಾರ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Friday, March 24th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 18-3-2017 ನೇ ಶನಿವಾರ ಇಲ್ಲಿನ 2016-17 ನೇ ಶೈಕ್ಷಣಿಕ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಭಟ್ ಅಮೈ ಹಾಗೂ ಸಂಚಾಲಕರಾದ ಮುರಳೀಧರ.ಕೆ ಮಕ್ಕಳಿಗೆ ಶುಭ ಹಾರೈಸಿದರು. 10 ನೇ ತರಗತಿ ವಿದ್ಯಾರ್ಥಿಗಳು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿ ಶಾಲಾ ಉಪನಾಯಕ ಕಿಶನ್ ಸ್ವಾಗತಿಸಿ, ಶಶಿರಾಜ್ ವಂದಿಸಿದರು. ಕುಮಾರಿ ಮೇಘ ಹಾಗೂ ಕುಮಾರಿ ದೀಪ ಕಾರ್ಯಕ್ರಮ ನಿರೂಪಿಸಿದರು. […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕಾದ ಶೈಕ್ಷಣಿಕ ಪರಿವೀಕ್ಷಕರು ಭೇಟಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಅಮೇರಿಕಾದ ಶೈಕ್ಷಣಿಕ ಪರಿವೀಕ್ಷಕರು ಭೇಟಿ

Wednesday, March 15th, 2017

ನಮ್ಮ ಶಾಲೆಗೆ ಅಮೇರಿಕದ ಸಂಶೋಧನಾತ್ಮಕ ಪರಿವೀಕ್ಷಕರ ತಂಡವು ಭೇಟಿ ನೀಡಿದ್ದು, ನಮ್ಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸ್ವಸ್ಥಿಕ್ ಪದ್ಮ ಸಂಶೋಧಿಸಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಲ್ಪಟ್ಟ “PLAMA” ಯೋಜನಾ ವಸ್ತುವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ISEF ಅಂತರಾಷ್ಟ್ರೀಯ ವೈಜ್ಞಾನಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈತನು IRIS ರಾಷ್ಟ್ರೀಯ ಮಟ್ಟದಲ್ಲಿ ಗ್ರಾಂಡ್ ಗೋಲ್ಡ್ ಅವಾರ್ಡ್ ಪಡೆದು ಪ್ರಶಂಸೆಗೆ ಪಾತ್ರನಾಗಿರುತ್ತಾನೆ. ಆ ಪ್ರಯುಕ್ತ ಪ್ರಾಥಮಿಕ ಹಂತದಲ್ಲಿ ಸಂಶೋಧನೆಯಲ್ಲಿ ಮಾಡಿದ ವರದಿಯನ್ನು ಚಿತ್ರೀಕರಿಸಿ ಮಾಹಿತಿ ಸಂಗ್ರಹಿಸುವ ಸಲುವಾಗಿ ಲಾರಾ ಮತ್ತು ಅವರ 5 ಮಂದಿಯ ಪರಿವೀಕ್ಷಕರ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂಧನೆ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಭಿನಂಧನೆ

Monday, March 13th, 2017

ದಿನಾಂಕ 13-3-2017 ರಂದು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಆಯೋಜಿಸಿದ ಶಿಕ್ಷಣದಲ್ಲಿ ನವೀನ ಪರಿಕಲ್ಪನೆಯ ಕುರಿತ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಎಸ್.ಎಸ್.ಎಲ್.ಸಿ. ಫಲಿಶಾಂಶದಲ್ಲಿ ಪ್ರಗತಿ ತರುವ ದೃಷ್ಟಿಯಿಂದ ಪುತ್ತೂರು ಶಿಕ್ಷಣ ಇಲಾಖೆಯ ಆರಂಭಿಸಿದ ಮಿಷನ್ 95+ ಯೋಜನೆಯನ್ನು ಮಂಡಿಸಿ, ನ್ಯಾಶನಲ್ ಕಾನ್ಪ್‌ರೆನ್ಸ್ ಆನ್ ಇನ್ನೋವೇಶನ್ಸ್ ಇನ್ ಎಜುಕೇಶನಲ್ ಅಡ್ಮಿನಿಸ್ಟ್ರೇಶನ್ ಆಂಡ್ ಪ್ರಸೆಂಟೇಶನ್ ಆಫ್ ಆವಾರ್ಡ್, ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವೆಡ್ಕರ್ ಅವರಿಂದ ಸ್ವೀಕರಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಜಿ.ಎಸ್.ಶಶಿಧರ್ ಅವರನ್ನು […]

ಶಾಲೆಗೆ ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

ಶಾಲೆಗೆ ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

Friday, March 3rd, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 3-3-2017 ರಂದು ಶ್ರೀ ಕೃಷ್ಣ ನಾರಾಯಣ ಮುಳಿಯ ಮತ್ತು ಶ್ರೀ ಕೃಷ್ಣ ಪ್ರಶಾಂತ್ ದಂಪತಿಗಳು ಹೊಸ ತಂತ್ರಜ್ಞಾನದ ಗಣಕಯಂತ್ರವನ್ನು ಕಂಪ್ಯೂಟರ್ ಲ್ಯಾಬ್‌ಗೆ ಕೊಡುಗೆಯಾಗಿ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಮಾತಾಡಿ ಸತ್ಯಕ್ಕೆ ಹರಿಶ್ಚಂದ್ರ ಮತ್ತು ದಾನಕ್ಕೆ ದಾನಶೂರ ಕರ್ಣ ಹೇಗೆ ಉಪಮೇಯಗಳಾಗಿ ಈ ಪ್ರಪಂಚದಲ್ಲಿ ಬೆಳಗುತ್ತಿದ್ದಾರೋ ಅದೇ ರೀತಿ ಮುಳಿಯ ಜುವೆಲ್ಸ್‌ನ ಕೃಷ್ಣ ನಾರಾಯಣ ಮುಳಿಯ ಮತ್ತು ಖುಷಿ ಐಸ್‌ಕ್ರೀಂನ […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತಾಲೂಕಿಗೆ ಪ್ರಥಮ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತಾಲೂಕಿಗೆ ಪ್ರಥಮ

Friday, March 3rd, 2017

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಮಲ್ಲೇಶ್ವರಂ ಬೆಂಗಳೂರು ಇವರು 2016-17 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಆಚಾರ್ ೫೦೦ ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 13 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಅವರಲ್ಲಿ ಪೂಜಾ.ಎಸ್(9ನೇ ತರಗತಿ)-484 ಅಂಕ, ಸುಹಾನ್ ರೈ.ಎನ್(9ನೇ ತರಗತಿ)- 474ಅಂಕ, ದೀಪಶ್ರೀ(9ನೇ ತರಗತಿ)-434 ಅಂಕ, ಶೈಲೇಶ್(9ನೇ ತರಗತಿ)-435 ಅಂಕ, […]

ರಿಲೇ ಸ್ಪರ್ಧೆಯಲ್ಲಿ ಹಿಮಾನಿ ಜಿ.  ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

ರಿಲೇ ಸ್ಪರ್ಧೆಯಲ್ಲಿ ಹಿಮಾನಿ ಜಿ. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

Friday, February 17th, 2017

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 9 ನೇ ತರಗತಿಯ ವಿದ್ಯಾರ್ಥಿನಿ ಹಿಮಾನಿ ಜಿ. (ಪದ್ಮನಾಭ ಗೌಡ ಹಾಗೂ ಕವಿತ ದಂಪತಿಯ ಪುತ್ರಿ) ಇವಳು ಫೆಬ್ರವರಿ 20 ರಿಂದ 23 ರ ವರೆಗೆ ಗುಜರಾತ್­ನ ವಡೋದರದಲ್ಲಿ ನಡೆಯುವ ಪ್ರೌಢಶಾಲಾ ವಿಭಾಗದ ಬಾಲಕರ ಬಾಲಕಿಯರ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, 4×100 ಮೀ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Media Reports

Media Reports

Wednesday, February 8th, 2017
ರಾಷ್ಟ್ರೀಯ ರೂಬೆಲ್ಲಾ ಮತ್ತು ದಡಾರ ಲಸಿಕಾ ಅಭಿಯಾನ ಉದ್ಘಾಟನೆ

ರಾಷ್ಟ್ರೀಯ ರೂಬೆಲ್ಲಾ ಮತ್ತು ದಡಾರ ಲಸಿಕಾ ಅಭಿಯಾನ ಉದ್ಘಾಟನೆ

Wednesday, February 8th, 2017

ದಿನಾಂಕ 7-2-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ರಾಷ್ಟ್ರೀಯ ರೂಬೆಲ್ಲಾ ಮತ್ತು ದಡಾರ ಲಸಿಕಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕಿ ಅನುರಾಧ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಸ್ವಯಂಸೇವಕರ ಸಹಕಾರದಿಂದ 2 ದಿನಗಳ ಕಾಲ ಲಸಿಕಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಮುಖ್ಯ […]

10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಹನ

10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಹನ

Friday, February 3rd, 2017

ಓದುವುದು, ಮನನಮಾಡುವುದು, ಪುನರಾವರ್ತನೆ, ಋಣಾತ್ಮಕ ಚಿಂತನೆಗಳನ್ನು ದೂರಮಾಡುವುದು ಜೀವನದಲ್ಲಿ ಮತ್ತು ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಪೂರಕ ಅಂಶಗಳಾಗಿವೆ ಎಂದು ಪುತ್ತೂರಿನ ಖ್ಯಾತ ಕೌನ್ಸೆಲ್ಲರ್ ಹಾಗೂ ನರ-ಮಾನಸಿಕ ತಜ್ಞ ಡಾ| ಗಣೇಶ್ ಪ್ರಸಾದ್ ಮುದ್ರಜೆ ಹೇಳಿದರು. ಅವರು ದಿನಾಂಕ 3-2-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವಾರು ವಿಷಯಗಳಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡರು. ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ […]