QR Code Business Card
ರಾಕೇಶ್ ಕೃಷ್ಣ - ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಕೇಶ್ ಕೃಷ್ಣ – ರಾಷ್ಟ್ರಮಟ್ಟಕ್ಕೆ ಆಯ್ಕೆ

Saturday, November 26th, 2016
ಚೆನ್ನೈನಲ್ಲಿ ಅಖಿಲ ಭಾರತ ಯೋಗಾಸನ ಸ್ಪರ್ಧೆ - ಶಾಲೆಗೆ ಸಮಗ್ರ ಪ್ರಶಸ್ತಿ

ಚೆನ್ನೈನಲ್ಲಿ ಅಖಿಲ ಭಾರತ ಯೋಗಾಸನ ಸ್ಪರ್ಧೆ – ಶಾಲೆಗೆ ಸಮಗ್ರ ಪ್ರಶಸ್ತಿ

Saturday, November 26th, 2016

ಯೋಗ ಸಾಂಸ್ಕೃತಿಕ ಸಂಘ (ರಿ) (ಆಯುಷ್) ಹಾಗೂ ಅಖಿಲ ಭಾರತ ಯೋಗ ಫೆಡರೇಷನ್ (ರಿ) ಇವರ ಸಹಯೋಗದಲ್ಲಿ ದಿನಾಂಕ 13-11-2016 ರಂದು ತಮಿಳುನಾಡಿನ ಚೆನ್ನೈನಲ್ಲಿ ಅಖಿಲ ಭಾರತ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸದ್ರಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಈ ಕೆಳಕಂಡ ಮಕ್ಕಳು ಭಾಗವಹಿಸಿ ಅಖಿಲ ಭಾರತ ಶಾಲಾ ವಿಭಾಗದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಲ್ಲದೆ ಶಾಲೆಗೆ ಸಮಗ್ರ ಪ್ರಶಸ್ತಿ ತಂದಿರುತ್ತಾರೆ. ನಿಂತವರು: (ಎಡದಿಂದ ಬಲಕ್ಕೆ) 1) ಎ. ಶ್ರೀವಿಜ್ಞ, 7ನೇ ತರಗತಿ 2) ಅನುಜ್ಞ ಕೆ, […]

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ

Monday, November 14th, 2016

ದಿನಾಂಕ 14-11-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಶಾಲಾ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಶಿಕ್ಷಕಿಯಾದ ಮೋಹಿನಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ, ಶಿಕ್ಷಕಿ ಪುಷ್ಪಲತಾ, ಸಿಂಧು, ಮಮತಾ.ಆರ್, ಶಿಕ್ಷಕ ಪ್ರಶಾಂತ್, ರಾಮ ನಾಕ್, ರಾಧಾಕೃಷ್ಣ ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಮತ್ತು ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜ್ಞಾನ ಪ್ರದರ್ಶನಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

ವಿಜ್ಞಾನ ಪ್ರದರ್ಶನಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

Friday, November 11th, 2016

24 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಪರಿಷತ್ತು ಇವರ ವತಿಯಿಂದ ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್.ಡಿ.ಎಮ್.ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆದ ವಿಜ್ಞಾನ ಸಮಾವೇಶದಲ್ಲಿ ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಕು| ಕನ್ಯಾ ಶೆಟ್ಟಿ(ಸಚಿನ್ ಶೆಟ್ಟಿ ಮತ್ತು ರಶ್ಮಿ ಶೆಟ್ಟಿ ದಂಪತಿ ಪುತ್ರಿ), ಕು| ಖುಷಿ ಪುತ್ತೂರಾಯ ( ಡಾ| ಸುರೇಶ್ ಪುತ್ತೂರಾಯ ಮತ್ತು ಡಾ| ಆಶಾಜ್ಯೋತಿ ದಂಪತಿ ಪುತ್ರಿ), ರಾಕೇಶ್ ಕೃಷ್ಣ ( ರವಿಶಂಕರ್ ಮತ್ತು ಡಾ| ದುರ್ಗಾರತ್ನ ದಂಪತಿ […]

ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Friday, November 11th, 2016

ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇವರ ವತಿಯಿಂದ ಸೈಂಟ್ ವಿಕ್ಟರ್ಸ್ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ತಾಲೂಕುಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕು| ರೇಷ್ಮಾ.ಟಿ. ಪ್ರಾಥಮಿಕ ವಿಭಾಗದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶ್ರೀಮತಿ ಯಶೋಧಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಪ್ರೌಢಶಾಲಾ ವಿಭಾಗದ ವಿಜ್ಞಾನ ರಸಪ್ರಶ್ನೆಯಲ್ಲಿ ಶ್ರೀಮತಿ ಶಾರದಾ ಶೆಟ್ಟಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದ ವಿಜ್ಞಾನ ರಸಪ್ರಶ್ನೆಯಲ್ಲಿ ಕು| ಭಾಗ್ಯಶ್ರೀ […]

ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ ವಸ್ತುಪದರ್ಶನಕ್ಕೆ ಆಯ್ಕೆ

ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಜ್ಞಾನ ವಸ್ತುಪದರ್ಶನಕ್ಕೆ ಆಯ್ಕೆ

Friday, November 11th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ಎನ್.ಸಿ.ಇ.ಆರ್.ಟಿ ನವದೆಹಲಿ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ವಿಜ್ಞಾನ ವಸ್ತುಪ್ರದರ್ಶನವು ರಾಮಕೃಷ್ಣ ಶಾಲೆ, ಮಂಗಳೂರಿನಲ್ಲಿ ದಿನಾಂಕ 9-11-2016 ರಂದು ನಡೆಯಿತು. ನಮ್ಮ ಶಾಲೆಯ 5 ತಂಡಗಳು 5 ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಇದರಲ್ಲಿ 10 ನೇ ತರಗತಿಯ ಸ್ವಸ್ತಿಕ್ ಪದ್ಮ(ಶ್ರೀರಾಮ ಭಟ್ ಮತ್ತು ಮಲ್ಲಿಕಾ ಭಟ್, ಮುರ್ಗಜೆ) ಮತ್ತು ಶಮಂತ ರೈ(ಹರೀಶ್ ರೈ ಮತ್ತು ಕವಿತಾ.ಎಚ್.ರೈ, ಮುಡಿಪಿನಡ್ಕ)ಕೈಗಾರಿಕಾ ವಿಷಯದಲ್ಲಿ I-Plack ವಿನೂತನ ಸಂಶೋಧನೆಗೆ ಪ್ರಥಮ ಸ್ಥಾನ ಮತ್ತು 9 ನೇ ತರಗತಿಯ ವಿಕ್ರಮ ಆಳ್ವ(ಕೃಷ್ಣಪ್ರಸಾದ್ […]

ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Wednesday, November 9th, 2016

ದಿನಾಂಕ 5-11-2016 ನೇ ಶನಿವಾರ ಕೆನರಾ ತಾಂತ್ರಿಕ ಮಹಾವಿದ್ಯಾಲಯ, ಬೆಂಜನಪದವು ಇಲ್ಲಿ ನಡೆದ Thought.Pot- 2016 ವಿಜ್ಞಾನ ಸ್ಪರ್ಧೆಯಲ್ಲಿ ಭಾಹವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿಕ್ರಂ ಆಳ್ವ -9 ನೇ ತರಗತಿ, ಧ್ಯಾನ್.ಎಸ್.ರಾವ್-8 ನೇ ತರಗತಿ, ಆಕಾಶ್.ಪಿ-8 ನೇ ತರಗತಿ -ಪ್ರಥಮ ಸ್ಥಾನ ಹಾಗೂ ಕೊಲಾಜ್ ತಯಾರಿಕಾ ಸ್ಪರ್ಧೆಯಲ್ಲಿ ಧನೀಶ್- 9 ನೇತರಗತಿ, ಹರ್ಷಿತ್-9 ನೇ ತರಗತಿ, ಧನುಷ್-9 ನೇ ತರಗತಿ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು […]

ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Wednesday, November 9th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇಲ್ಲಿ ನವೆಂಬರ್ 4 ಮತ್ತು 5 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ವಿಭಾಗದ ಬಾಲಕರು ದ್ವಿತೀಯ ತಂಡಪ್ರಶಸ್ತಿ, ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕರು ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದ ಬಾಲಕರಲ್ಲಿ ವಡ್ರಬಾಕ್ ಗುಂಡು […]

ಧರ್ಮಸ್ಥಳ ಶಾಂತಿವನ ಟ್ರಸ್ಟ್(ರಿ.) ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಶಾಲಾ ಮಕ್ಕಳಿಗೆ ಬಹುಮಾನ

ಧರ್ಮಸ್ಥಳ ಶಾಂತಿವನ ಟ್ರಸ್ಟ್(ರಿ.) ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಶಾಲಾ ಮಕ್ಕಳಿಗೆ ಬಹುಮಾನ

Monday, November 7th, 2016

ಧರ್ಮಸ್ಥಳ ಶಾಂತಿವನ ಟ್ರಸ್ಟ್(ರಿ.), ಸಾರ್ವಜನಿಕ ಶಿಕ್ಷಣ ಇಲಾಖೆ, ಪುತ್ತೂರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರ ಜಂಟಿ ಆಶ್ರಯದಲ್ಲಿ ಜ್ಞಾನ ಗಂಗಾ/ಜ್ಞಾನ ಸುಧಾ ನೈತಿಕ ಮೌಲ್ಯಧಾರಿತ ಪುಸ್ತಕ ಆಧಾರದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿ ಅನ್ವಿತಾ.ಬಿ.ಎ ದ್ವಿತೀಯ ಸ್ಥಾನ, 7ನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯಲಕ್ಷ್ಮಿ ದ್ವಿತೀಯ ಸ್ಥಾನ, ಹಾಗೂ ಪ್ರೌಢ ವಿಭಾಗದಲ್ಲಿ 8ನೇ ತರಗತಿಯ ಸಿಂಚನಲಕ್ಷ್ಮಿ ಭಾಷಣ ಸ್ಪರ್ಧೆಯಲ್ಲಿ […]

ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ತಂಡಗಳ ಒಂದು ದಿನದ ಚಾರಣ

ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ತಂಡಗಳ ಒಂದು ದಿನದ ಚಾರಣ

Monday, November 7th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ವಿವೇಕಾನಂದ ಸ್ಕೌಟ್ಸ್ ಮತ್ತು ನಿವೇದಿತಾ ಗೈಡ್ಸ್ ತಂಡಗಳ ಒಂದು ದಿನದ ಚಾರಣವು ಕಲ್ಮಡ್ಕ ಗ್ರಾಮದ ಚಾಮಡ್ಕದಲ್ಲಿ ನವೆಂಬರ್ 6 ರಂದು ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್ ವಿಭಾಗದ ಕಾರ್ಯದರ್ಶಿ ಮುರಳಿಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಚಾರಣವು ಒಂದು ರೀತಿಯ ಅಧ್ಯಯನವಿದ್ದಂತೆ. ನಗರ ವಾಸಿಗಳಾದ ಕೆಲವರು ಹಳ್ಳಿಯ ಕೃಷಿ ಚಟುವಟಿಕೆ, ಭಾರತೀಯ ಸಂಸ್ಕೃತಿ, ಹಳ್ಳಿಯ ಸೊಗಡನ್ನು ಮತ್ತು ಪರಿಸರದ ಅಧ್ಯಯನವನ್ನು ಇಂದು ಮಾಡಲು ಈ ಚಾರಣ ಸಹಕಾರಿ ಎಂದರು. ಕಲ್ಮಡ್ಕ ಕೃಷಿಪತ್ತಿನ […]