QR Code Business Card
ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, August 16th, 2016

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆ, ವಿನೋಬಾನಗರ, ಜಾಲ್ಸೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಿಶೋರ ವರ್ಗ ಬಾಲಕಿಯರ ವಿಭಾಗದಲ್ಲಿ ಶಮಾ.ಕೆ, ಶ್ರೀದೇವಿ ಕೋಟೆ, ಸಂಜನಾರಾಜ್.ಕೆ, ಪಂಚಮಿ ಸರ್ಪಂಗಳ, ಪ್ರಣಮ್ಯ.ಬಿ ಹಾಗೂ ಬಾಲ ವರ್ಗ ಬಾಲಕರ ವಿಭಾಗದಲ್ಲಿ ಅಂಕಿತ್.ಕೆ.ಎಲ್, ಎಂ.ಶ್ರೀರಾಮ ಭಟ್, ಸಾತ್ವಿಕ್ ಶಿವಾನಂದ.ಪಿ.ಎಸ್, ಶ್ರೇಯಸ್ ಹೇರಳೆ, ಕ್ಷಿತಿಜ್.ಎಚ್.ಎಸ್ -ಪ್ರಥಮ ಸ್ಥಾನ, ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ದೀಪ್ತಿ […]

70 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

70 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

Monday, August 15th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಮತ್ತು ವಿವೇಕಾನಂದ ಬಿ.ಎಡ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 70  ನೇ ಸ್ವಾತಂತ್ರ್ಯ ದಿನಾಚರಣೆಯು ಶಾಲಾ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಭಾರತೀಯ ವಾಯುಸೇನೆಯ ನಿವೃತ್ತ ಸೈನ್ಯಾಧಿಕಾರಿ ಶ್ರೀ ಶಿವರಾಂ ಭಟ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಸಮವಸ್ತ್ರವೇ ಸೈನ್ಯದ ಶಿಸ್ತಿನ ಭಾಗ, ಈ ದೇದ ಮಣ್ಣು ಪವಿತ್ರವಾದುದು. ಹಿಂದೆ ಭಗತ್ ಸಿಂಗ್ ಮಹಾತ್ಮಾ ಗಾಂಧಿಜೀಯಂಥವರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಪ್ರೀತಿಸಿ, ಗೌರವಿಸಿ, ಉಳಿಸುವುದು […]

Freedom Run - Yaad Karo Kurbani

Freedom Run – Yaad Karo Kurbani

Saturday, August 13th, 2016

On the eve of 70 years of India Independence Vivekananda English Medium School has organised the program Freedom Run – Yaad Karo Kurbani.

ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Thursday, August 11th, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಭಕ್ತಕೋಡಿ, ಇದರ ಆಶ್ರಯದಲ್ಲಿ ದಿನಾಂಕ 11-8-2016 ರಂದು ನಡೆದ ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. 14 ರ ವಯೋಮಾನದ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ದೀಪ್ತಿಲಕ್ಶ್ಮೀ -ಪ್ರಥಮ, ಶುಭಶ್ರೀ- ದ್ವಿತೀಯ, ಬಾಲಕರ ವಿಭಾಗದಲ್ಲಿ ಸಾತ್ವಿಕ್ ಶಿವಾನಂದ- ದ್ವಿತೀಯ, ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ನಿಸರ್ಗ ಪ್ರಥಮ ಸ್ಥಾನ, 17 ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಶಶಾಂಕ್.ಎಸ್.ಎಲ್-ಪ್ರಥಮ, ಶಶಾಂಕ್ ಭಟ್.ಜಿ.ಎಸ್-ದ್ವಿತೀಯ, […]

9ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

9ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Wednesday, August 3rd, 2016

ದಿನಾಂಕ 3-8-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪ್ರೋ.ವಿ.ಜಿ.ಭಟ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾತಾಡಿ ಶಾಲೆಯ ಕುರಿತಾಗಿ ಪೋಷಕರು ಅಭಿಮಾನ, ಗೌರವ ಮೂಡಿಸಿಕೊಂಡಾಗ ಮಕ್ಕಳಲ್ಲೂ ಶಾಲೆಯ ಬಗ್ಗೆ ಅಭಿಮಾನ ಮೂಡುತ್ತದೆ. ಒಮ್ಮೆ ಕೈ ತಪ್ಪಿದ ಮಗು ಪುನಃ ಕೈಸೇರುವುದು ಕಷ್ಟ ಸಾಧ್ಯ. ಮಕ್ಕಳ ಮಾನಸಿಕ ಸ್ಥೈರ್ಯ ತಿಳಿದುಕೊಂಡು, ಅದರಂತೆ ನಡೆದುಕೊಳ್ಳುವುದು ಪೋಷಕರಾದ ನಮ್ಮ ಆದ್ಯ ಕರ್ತವ್ಯ ಎಂದರು. ಶಾಲಾ ಮುಖ್ಯೋಪಾಧ್ಯಾಯರು ಸತೀಶ್ […]

8ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

8ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Tuesday, August 2nd, 2016

ದಿನಾಂಕ 02-08-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಮಾತಾಡಿ ಶಿಕ್ಷಣವೆಂದರೆ ಒಂದು ಮುಷ್ಠಿಯಂತೆ. ಸರಕಾರ, ಆಡಳಿತ ಮಂಡಳಿ, ಶಿಕ್ಷಕವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಐದು ಬೆರಳುಗಳಂತೆ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಶಿಕ್ಷಣದ ಮಟ್ಟ ಉನ್ನತವಾಗುತ್ತದೆ ಎಂದರು. ನಾವು ಮಕ್ಕಳಿಗೆ ನಡವಳಿಕೆಗಳನ್ನು ಕಲಿಸಿಕೊಟ್ಟು, ಭಾವನಾತ್ಮಕ ಸಂಬಂಧಗಳನ್ನು ಬೆಳಸುವ ಶಿಕ್ಷಣ ಇಂದಿನ ಅಗತ್ಯ ಎಂದರು. ಶಾಲಾ ಆಡಳಿತ […]

ಪೂರ್ವ ಪ್ರಾಥಮಿಕ ವಿಭಾಗದ ಪೋಷಕರ ಮಾಹಿತಿ ಕಾರ್ಯಾಗಾರ

ಪೂರ್ವ ಪ್ರಾಥಮಿಕ ವಿಭಾಗದ ಪೋಷಕರ ಮಾಹಿತಿ ಕಾರ್ಯಾಗಾರ

Monday, August 1st, 2016

ದಿನಾಂಕ 31-07-2016 ರ ರವಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಪೋಷಕರಿಗಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಶಿಶುಮಂದಿರದ ಆಡಳಿತ ಮಂಡಳಿ ಅಧ್ಯಕ್ಷೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯೆ ಡಾ.ಸುಧಾ ರಾವ್ ಮಾತನಾಡಿ ಆವೆಮಣ್ಣಿನ ಮುದ್ದೆಯಂತೆ ಇರುವ ಮಗುವನ್ನು ಮೂರ್ತಿ ರೂಪಕ್ಕಿಳಿಸುವ ಶಿಕ್ಷಣದ ಜೊತೆಗೆ ಮಗುವಿನಲ್ಲಿ ಸಂಸ್ಕಾರವನ್ನು ಮೂಡಿಸುವುದು ಇಂದಿನ ಶಿಕ್ಷಣದ ಮೂಲವಾಗಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕ ಶ್ರೀ ರವೀಂದ್ರ ಪಿ. ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರಾರ್ಥನೆಯ […]

ಕಾರ್ಗಿಲ್ ವಿಜಯ ದಿನಾಚರಣೆ

ಕಾರ್ಗಿಲ್ ವಿಜಯ ದಿನಾಚರಣೆ

Tuesday, July 26th, 2016

ದಿನಾಂಕ 26-07-2016 ನೇ ಮಂಗಳವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಆಚರಿಸಲಾಯಿತು. ಪುತ್ತೂರಿನ ಖ್ಯಾತ ವಕೀಲರಾದ ಶ್ರೀ ಮಹೇಶ್ ಕಜೆ ಮಾತನಾಡಿ, ಧವಳ ಹಿಮದ ಗಿರಿಯ ಮೇಲೆ 1999 ರ 26 ರಂದು ಅರುಣ ಧ್ವಜವನ್ನು ಏರಿಸಿದ ದಿನ. ಹಿಮ ಪರ್ವತದ ಕಂದಕಗಳಲ್ಲಿ ನಮ್ಮ 20,000 ಯೋಧರು ಕಠಿಣ ಸೇವೆ ಸಲ್ಲಿಸಿದ್ದರು. ಅವುಗಳಲ್ಲಿ 527 ಯೋಧರು ನಮಗೋಸ್ಕರ ಪ್ರಾಣಾರ್ಪಣೆ ಮಾಡಿರುವ ದಿನವನ್ನು ನೆನಪಿಸುವುದು ನಮ್ಮ ಕರ್ತವ್ಯ ಎಂದರು. ಕಾರ್ಗಿಲ್ ವಿಜಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಂದೇ ಮಾತರಂ […]

3ನೇ ತರಗತಿ ಮಕ್ಕಳ ಪೋಷಕರ ಸಭೆ

3ನೇ ತರಗತಿ ಮಕ್ಕಳ ಪೋಷಕರ ಸಭೆ

Tuesday, July 19th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 19-07-2016 ರಂದು 3 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ವಕೀಲರಾದ ವಿನಾಯಕರಾಂ ಮುಖ್ಯ ಅತಿಥಿಯಾಗಿ ಆಗಮಿಸಿ ಮಗುವಿನ ಬಗೆಗೆ ಕನಸು ಕಾಣುವುದರ ಬದಲು ಮಗು ಕನಸು ಕಾಣಲು ಬಿಡಬೇಕು. ಮಕ್ಕಳು ವಿದ್ಯಾಭ್ಯಾಸ ಮಾಡಲು ಪೂರಕವಾದ ವಾತಾವರಣ, ಭೌತಿಕ ವ್ಯವಸ್ಥೆ, ಪರಿಸರ ಒದಗಿಸುವುದು ಪೋಷಕರ ಕರ್ತವ್ಯ, ಮಾನಸಿಕ ಸಮತೋಲನದಿಂದ ವಿದ್ಯಾರ್ಜನೆ ಸಾಧ್ಯ ಎಂದು ಹೇಳಿದರು. ಶಾಲಾ ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ […]

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Tuesday, July 19th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿ ದಿನಾಂಕ 19-07-2016 ರಂದು ಗುರುಪೂರ್ಣಿಮೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಮಾತಾಡಿ, ಲೌಕಿಕ ವಿದ್ಯೆಯನ್ನು ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಎಲ್ಲಾ ಗುರುಗಳನ್ನು ಆರಾಧಿಸುವ ಪರ್ವ ದಿನವೇ ಗುರುಪೂರ್ಣಿಮೆ. ವೇದ ವ್ಯಾಸರು ಮಹಾಭಾರತ,18 ಪುರಾಣಗಳು, ಬ್ರಹ್ಮಸೂತ್ರ, ಭಾಗವತ ಪುರಾಣಗಳನ್ನು ರಚಿಸಿ ಗುರುತತ್ವವನ್ನು ಲೋಕಕ್ಕೆ ಸಾರಿದರು ಮತ್ತು ಲೋಕದ ಗುರುವಾದರು ಎಂದು […]