ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Tuesday, June 21st, 2016ಯೋಗ, ಪ್ರಾಣಾಯಾಮಗಳು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡುತ್ತವೆ. ಸೂಕ್ತ ಮಾರ್ಗದರ್ಶನದ ಜೊತೆಗೆ ಯೋಗಾಭ್ಯಾಸ ಮಾಡಿದಾಗ ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ದೃಢತೆಯನ್ನು ಪಡೆಯಬಹುದು ಎಂದು ಶ್ರೀ ಸತ್ಯಸಾಯಿ ಸೇವಾದಳದ ಸಂಯೋಜಕಿ ಶ್ರೀಮತಿ ಕಾಂಚನಮಾಲಾ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ’ವಿಶ್ವಯೋಗ ದಿನ’ದ ಅಪರಾಹ್ನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ ಇವರು ಸಭಾಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ವೆಂಕಟೇಶ ಪ್ರಸಾದ್ ಪ್ರಾರ್ಥಿಸಿದರು. ಶ್ರೀ ರಾಜಶೇಖರ್ ಸ್ವಾಗತಿಸಿ, ಶ್ರೀಮತಿ ಆಶಾ […]