
ಬೆಂಗಳೂರಿನಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಪ್ರಶಸ್ತಿ
Monday, July 18th, 2016ಸಾರ್ವಜನಿಕ ಶಿಕ್ಷಣ ಇಲಾಖೆ ನೆಲಮಂಗಲ, ಜ್ಞಾನಗಂಗಾ ಯೋಗಸಂಸ್ಥೆ (ರಿ.), ಚೈತನ್ಯ ಯೋಗ ಕೇಂದ್ರ(ರಿ.) ಪವಾಡ ಶ್ರೀ ಬಸವಣ್ಣ ದೇವರ ಮಠ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ೯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಶ್ರವಣ ಕುಮಾರ್, ಶ್ರೀನಿಧಿ, ಚೈತ್ರೇಶ್, ಭವೀಶ್, ಪಾಲಿಕ್, ನಿಶ್ಚಲ್ ಮತ್ತು ವಿದ್ಯಾರ್ಥಿನಿಯರಾದ ಮೌಲ್ಯ, ಹಿಮಾನಿ, ಕೀರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.