QR Code Business Card
ಸಭಾನಿರ್ವಹಣೆ ಕಾರ್ಯಾಗಾರ

ಸಭಾನಿರ್ವಹಣೆ ಕಾರ್ಯಾಗಾರ

Tuesday, September 20th, 2016

ದಿನಾಂಕ 20-9-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರ್‍ಯಾಕ್ಟ್ ಕ್ಲಬ್‌ನ ಆಶ್ರಯದಲ್ಲಿ ಸಭಾನಿರ್ವಹಣೆಯ ಬಗ್ಗೆ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ರೋಟರಿ ಕ್ಲಬ್‌ನ ಮಾಜಿ ಜಿಲ್ಲಾ ಕಾರ್ಯದರ್ಶಿಗಳಾದ ರೋ.ಡಾ.ಸೂರ್ಯನಾರಾಯಣ ಅವರು ಮಕ್ಕಳು ಸಭಾನಿರ್ವಹಣೆ ಹೇಗೆ ಮಾಡಬೇಕು, ಅದರ ಜವಾಬ್ದಾರಿ ಯಾರು ವಹಿಸಬೇಕು, ಸಭೆಯಲ್ಲಿ ಶಿಸ್ತು ಕಾಪಾಡುವುದು ಹೇಗೆ, ಯಾವ ರೀತಿ ಇಂಟರ್‍ಯಾಕ್ಟ್ ಕ್ಲಬ್ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ಸುಧನ್ವ ಶ್ಯಾಂ ಸಭೆಯನ್ನು ನಿರ್ವಹಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ವಿಸ್ಮಯ್, ರೋಟರಿ […]

ಜಿಲ್ಲಾ ಮಟ್ಟದ ಈಜು ಸ್ಪರ್ಧೆ : ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಜಿಲ್ಲಾ ಮಟ್ಟದ ಈಜು ಸ್ಪರ್ಧೆ : ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Tuesday, September 20th, 2016

ದಿನಾಂಕ 20-9-2016 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ಮಂಗಳ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 2 ಚಿನ್ನ, 7 ಬೆಳ್ಳಿ, 13 ಕಂಚಿನ ಪದಕ ಗಳಿಸಿ 4 ವಿದ್ಯಾರ್ಥಿಗಳು ಮುಂದೆ ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಈಜು ಸ್ಪರ್ಧೆಗೆ ಅಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದ ಬಾಲಕರಲ್ಲಿ ನೂತನ್.ಬಿ 4×100 ದ್ವಿತೀಯ, 100 ಮೀ ಬಟರ್ ಪ್ಲೈನಲ್ಲಿ ತೃತೀಯ, 4×100 ಮೀ ಮಿಡ್ಲ್ ರಿಲೇಯಲ್ಲಿ ದ್ವಿತೀಯ, ಧ್ಯಾನದೀಪ್ 4×100 ಮೀ ಫ್ರೀಸ್ಟೈಲ್ ರಿಲೇ ದ್ವಿತೀಯ, 4×100  ಮೀ ಮಿಡ್ಲ್ ರಿಲೇಯಲ್ಲಿ […]

ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ

ಇಂಟರ್‍ಯಾಕ್ಟ್ ಕ್ಲಬ್ ಉದ್ಘಾಟನೆ

Saturday, September 17th, 2016

ದಿನಾಂಕ 15-09-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ಇಂಟರ್‍ಯಾಕ್ಟ್ ಕ್ಲಬ್‌ನ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ರೋಟರಿ ಪೂರ್ವದ ಅಧ್ಯಕ್ಷ ರೋ| ಮುರಳಿಶ್ಯಾಂ ಮಾತನಾಡಿ ಮಕ್ಕಳಲ್ಲಿರುವ ಸುತ್ತ ಪ್ರತಿಭೆಯನ್ನು ಹೊರತರಲು ಮತ್ತು ವ್ಯಕ್ತಿತ್ವದ ನಿರ್ಮಾಣಕ್ಕೆ ಇಂಟರ್‍ಯಾಕ್ಟ್ ಕ್ಲಬ್ ಅವಶ್ಯಕವೆಂದು ನುಡಿದರು. ಮುಖ್ಯ ಅತಿಥಿಯಾಗಿ ಶಾಲೆಯ ಶಿಕ್ಷಕರಾದ ರಾಧಾಕೃಷ್ಣ ರೈ ಅವರು ಇಂತಹ ಕ್ಲಬ್‌ನ ಮುಖಾಂತರ ಮಕ್ಕಳು ಸಮಾಜಮುಖಿಗಳಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಲು ಸೂಕ್ತವಾದುದು ಎಂದು ನುಡಿದರು. ಶಾಲೆಯ ಇಂಟರ್‍ಯಾಕ್ಟ್ ಕ್ಲಬ್‌ನ […]

ಬಾಲಕಿಯರ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ - ಹಲವು ಪ್ರಶಸ್ತಿ

ಬಾಲಕಿಯರ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ – ಹಲವು ಪ್ರಶಸ್ತಿ

Saturday, September 17th, 2016

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ತಾಲೂಕು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆ, ಪೆರಿಂಜೆ, ಉಜಿರೆ ಇಲ್ಲಿ 10-09-2016 ರಂದು ನಡೆದ ಬಾಲಕಿಯರ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು – ಶುಭಶ್ರೀ- 7ನೇ ತರಗತಿ, ಶಶಾಂಕ್ ಭಟ್-9ನೇ ತರಗತಿ, ಶಶಾಂಕ್.ಎಸ್.ಎಲ್-10ನೇ ತರಗತಿ, ಶ್ರೀದೇವಿ ಕೋಟೆ-9ನೇ ತರಗತಿ, ಸಾತ್ವಿಕ್ ಶಿವಾನಂದ್-7ನೇ ತರಗತಿ. ಇವರು ಮಂದೆ ತಾ.19-06-2016 ರಂದು […]

ಪುಟ್ಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಪುಟ್ಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Monday, September 12th, 2016

ದಿನಾಂಕ 10-9-2016 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಂತ ಜೋಸೆಫರ ಪ.ಪೂರ್ವ ಕಾಲೇಜು, ಬಜ್ಪೆ ಇಲ್ಲಿ ನಡೆದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರ ತಂಡ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಕೊಡಗಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯ ಅಗತ್ಯ  - ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯ ಅಗತ್ಯ  – ಡಾ.ಪ್ರಭಾಕರ್ ಭಟ್ ಕಲ್ಲಡ್ಕ

Saturday, September 10th, 2016

ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಿ ಅದಕ್ಕೆ ಬರೆಹದ ಲೇಪನವನ್ನು ನೀಡಿ ಹೆಚ್ಚು ಓದುವ ಮೂಲಕ ಸೃಜನಾತ್ಮಕತೆಯನ್ನು ಬೆಳೆಸಬಹುದು. ಸೃಜನಾತ್ಮಕ ಬರೆವಣಿಗೆ ಎಂದರೆ ಏನು ಎಂಬುದು ಉತ್ತರವಿಲ್ಲದ ಪ್ರಶ್ನೆ. ಚೌಕಟ್ಟಿನ ಹೊರಗೆ ಬಂದು ಯೋಚನೆಮಾಡಿದಾಗ ಅಲ್ಲಿ ಸೃಜನಾತ್ಮಕತೆ ಚಿಗುರೊಡೆಯುತ್ತದೆ ಎಂದು ಹೇಳುತ್ತಾ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಸಿ.ಎಸ್. ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುವಿಚಾರ ಸಾಹಿತ್ಯ ಸಂಘದ ಆಶ್ರಯದಲ್ಲಿ ದಿನಾಂಕ 10-09-2016 ರ ಶನಿವಾರದಂದು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬರೆವಣಿಗೆಯಲ್ಲಿ ಸೃಜನಶೀಲತೆ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ವಿಶೇಷ ವಿಜ್ಞಾನ ಕಾರ್ಯಾಗಾರ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ವಿಶೇಷ ವಿಜ್ಞಾನ ಕಾರ್ಯಾಗಾರ

Saturday, September 10th, 2016

ಭಾರತ ಸರಕಾರ ಸಂಸ್ಕೃತಿ ಮಂತ್ರಾಲಯ, ವಿದ್ಯಾಭಾರತಿ ಸಂಸ್ಕೃತಿ ಶಿಕ್ಷಾ ಸಂಸ್ಥಾನ್, ಕುರುಕ್ಷೇತ್ರ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ ಸಹಯೋಗದಲ್ಲಿ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯ ಕೊಡುಗೆಗಳು ಎಂಬ ವಿಷಯದಲ್ಲಿ ’ಒಂದು ದಿನದ ವಿಶೇಷ ಕಾರ್ಯಾಗಾರ’ ದಿನಾಂಕ 10-9-2016 ನೇ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು. ಭಾರತ ಸರಕಾರ ರಕ್ಷಣ ಮಂತ್ರಾಲಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಡಾ.ಜಯಪ್ರಕಾಶ್ ರಾವ್.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ವೈಜ್ಞಾನಿಕ ತಂತ್ರಜ್ಞಾನ ನಾಗಲೋಟದಲ್ಲಿ ಓಡುತ್ತಿದೆ ಹಾಗಾಗಿ ವಿಜ್ಞಾನಿಗಳು ಕೂಡಾ ಅದೇ […]

ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯ ಕೊಡುಗೆಗಳು - ಸೆ. 10 ರಂದು ಒಂದು ದಿನದ ವಿಶೇಷ ಕಾರ್ಯಾಗಾರ

ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಭಾರತೀಯ ಕೊಡುಗೆಗಳು – ಸೆ. 10 ರಂದು ಒಂದು ದಿನದ ವಿಶೇಷ ಕಾರ್ಯಾಗಾರ

Thursday, September 8th, 2016
ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳು

ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳು

Monday, August 29th, 2016

ವಿದ್ಯಾಭಾರತಿ ಕರ್ನಾಟಕ ಆಯೋಜಿಸಿರುವ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ಶಿಶುವರ್ಗ: ಪ್ರಣಾಮ್ ಎಂ. ವೈ, (ವಿಜ್ಞಾನ ಮಾದರಿ), ಆತ್ಮೀಯ ಎಮ್ ಕಶ್ಯಪ್, ಪಂಕಜ್ ಭಟ್, ಧನುಷ್‌ರಾಂ (ವಿಜ್ಞಾನ ರಸಪ್ರಶ್ನೆ), ವಿಂಧ್ಯಾ ಕಾರಂತ್ (ವಿಜ್ಞಾನ ಪ್ರಯೋಗ), ಶುಭನ್, ಶಮಂತ್, ಕರಣ್ ಭಟ್ (ವೇದಿಕ್ ಗಣಿತ) ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ತನ್ವಿ ಶೆಣೈ (ವಿಜ್ಞಾನ ಮಾದರಿ) ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಪ್ರಜ್ಞಾ ವಿ.ಬಿ (ವಿಜ್ಞಾನ […]

ಶಟಲ್ ಬ್ಯಾಡ್ಮಿಂಟನ್- ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಟಲ್ ಬ್ಯಾಡ್ಮಿಂಟನ್- ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Saturday, August 27th, 2016

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 26-08-2016 ರಂದು ಸುದಾನ ಸ್ಪೋಟ್ಸ್‌ಕ್ಲಬ್, ಸಾಮೆತಡ್ಕ ಇಲ್ಲಿ ಜರುಗಿದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದೆ. ನಮ್ಮ ಶಾಲಾ 3 ವಿದ್ಯಾರ್ಥಿಗಳು ಅಭಿಷೇಕ್ ಬಿ.ಎಂ(10ನೇ ತರಗತಿ), ನಿತಿನ್ ಎಂ(10ನೇ ತರಗತಿ), ಅಭಿರಾಮ್.ಯು(8ನೇ […]