ಪುತ್ತೂರು: ನ. 30 ಧರ್ಮಪ್ರಜ್ಞಾ ಆಧ್ಯಾತ್ಮಿಕ ಕೇಂದ್ರದ ವತಿಯಿಂದ ನಡೆಸಿದ ಇಸ್ಕಾನ್ ಸಂಸ್ಥೆಯ ರಾಜ್ಯ ಮಟ್ಟದ ಗೋಲೋಕ ಚಿತ್ರಕಲಾ ಸ್ಪರ್ಧೆಯು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಶಾಲೆಯ 350 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಂಯೋಜಕ ಶ್ರೀ ಉಲ್ಲಾಸಣ್ಣ, ಶಿಕ್ಷಕಿ ಶ್ರೀಮತಿ ಸಾಯಿಗೀತಾ.ಎಸ್.ರಾವ್ ಮತ್ತು ಸಂಸ್ಥೆಯ ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು.
ಇಲ್ಲಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದ ವರ್ಗೀಕರಣ ಶಿಬಿರವು ದಿನಾಂಕ 22-11-2013 ರಂದು ನಡೆಯಿತು. ಶಿಬಿರದ ಉದ್ಘಾಟನೆಯನ್ನು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್ ನೆರವೇರಿಸಿ ರಕ್ತದಾನದ ಬಗ್ಗೆ ವಿದ್ಯಾರ್ಥಿಗಳು ಹೊಂದಿರಬೇಕಾದ ಕಾಳಜಿಯನ್ನು ತಿಳಿಸಿಕೊಟ್ಟರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|.ಕೆ.ಎಂ.ಕೃಷ್ಣ ಭಟ್ ವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಕ್ತದಾನದ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಡುವುದು ಅವಶ್ಯಕವಾಗಿದೆ, […]
ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಸಾಮಾಜಿಕ ಸಹಬಾಳ್ವೆಯನ್ನು ಬೆಳೆಸುವ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಗೋಸ್ತು, ಸಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜನಿಸಿರುವ ಮಕ್ಕಳ ಸಾಮೂಹಿಕ ಹುಟ್ಟುಹಬ್ಬವನ್ನು ದಿನಾಂಕ 01-11-2013ರಂದು ಆಚರಿಸಲಾಯಿತು. ಹೆತ್ತವರ ಸಮ್ಮುಖದಲ್ಲಿ ಮಕ್ಕಳಿಗೆ ದೀಪಾರತಿ, ತಿಲಕಧಾರಣೆ, ಹಾಗೂ ದೇವರಿಗೆ ಪುಷ್ಪಾರ್ಚನೆ, ವಿಧಿಯುಕ್ತವಾಗಿ ನೆರವೇರಿತು. ಮಕ್ಕಳು ತಮ್ಮ ಹೆತ್ತವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಮುಖ್ಯ ಅತಿಥಿಯಾದ ಶ್ರೀ ರಾಜಾರಾಮ ನೆಲ್ಲಿತ್ತಾಯರು ಮಾತನಾಡಿ ಮಕ್ಕಳಿಗೆ ಸಂಸ್ಕಾರವನ್ನು ತಿಳಿಸಿಕೊಡುವುದರಲ್ಲಿ ಶಾಲೆ ಮತ್ತು ಹೆತ್ತವರು ಅತ್ಯಂತ ಮುಖ್ಯಪಾತ್ರರು ಎಂದು […]
ದಿನಾಂಕ 09.11.2013ರಂದು ಶಾಂತಿವನ ಟ್ರಸ್ಟ್ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ,ಪುತ್ತೂರು ಇದರ ಸಹಯೋಗದೊಂದಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಸಭಾಂಗಣದಲ್ಲಿ ನೈತಿಕ ಶಿಕ್ಷಣ ಮತ್ತು ಯೋಗ ಶಿಕ್ಷಣದ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಡಾ.ಕೆ.ಎಂ.ಕೃಷ್ಣ ಭಟ್ ವಹಿಸಿ, ಶಿಕ್ಷಣ ಮತ್ತು ಯೋಗ ಮಾನಸಿಕ ಪ್ರಬುದ್ಧತೆಗೆ ಒಂದಕ್ಕೊಂದು ಪೂರಕ ವಿಚಾರ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಜಿ.ಎಸ್.ಶಶಿಧರ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ […]
ಪುತ್ತೂರು: ಅ.೩೦, ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ, ಪುತ್ತೂರು ಇದರ ಪ್ರೇರಣಾ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಶಾಲಾ ಆವರಣದಲ್ಲಿ ನಡೆಯಿತು. ಶ್ರೀ ಬಲರಾಮ ಆಚಾರ್ಯ ಜಿ.ಎಲ್, ಅಧ್ಯಕ್ಷರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡುತ್ತಾ ಜ್ಞಾನ , ವಿಜ್ಞಾನ, ತಂತ್ರಜ್ಞಾನ ಇವತ್ತಿನ ಅವಶ್ಯಕತೆಗಳಾಗಿವೆ. ಇವುಗಳನ್ನು ಸಂಪಾದಿಸಲು ಪ್ರಯೋಗಾಲಯಗಳು ಅವಶ್ಯಕ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಖ್ಯಾತ ಕೃಷಿ ವಿಜ್ಞಾನಿ ಶ್ರೀ ಶಂಕರ ಭಟ್ ಬದನಾಜೆ ಪ್ರತಿಯೊಬ್ಬ ಅಧ್ಯಾಪಕ ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದಾಗ ವಿದ್ಯಾರ್ಥಿಗಳ ಮನೋಕೌಶಲ್ಯಗಳು […]
ಭಾರತೀಯ ಮೂಲ ರಕ್ಷಣಾ ಕಲೆಯಾದ ಕರಾಟೆ ವಿದ್ಯಾರ್ಥಿಜೀವನದ ಅವಿಭಾಜ್ಯ ಅಂಗ. ಕರಾಟೆಯಿಂದ ಸ್ವರಕ್ಷಣೆ ಸಾಧ್ಯ. ಎಲ್ಲರೂ ಈ ಕಲೆಯನ್ನು ಕಲಿಯಬೆಕು ಎಂದು ವಿವೇಕಾನಂದ ತಾಂತ್ರಿಕ ವಿದ್ಯಾಲಯದ ನಿರ್ದೇಶಕರಾದ ಶ್ರೀ ಸೇಡಿಯಾಪು ಜನಾರ್ದನ ಭಟ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾದ ದ.ಕ.ಜಿ.ಪ. ಸದಸ್ಯೆ ಶ್ರೀಮತಿ ಮೀನಾಕ್ಷಿ ಮಂಜುನಾಥ್ ಮಾತನಾಡುತ್ತಾ ಕರಾಟೆ ನಮ್ಮ ಜೀವನದಲ್ಲಿ ಕತ್ತಲೆಯಲ್ಲಿ ಟಾರ್ಚ್ ಇದ್ದಂತೆ ಮುಂಜಾಗ್ರತೆಗೆ ಸಹಕಾರಿ ಎಂದು ಹೇಳಿದರು. ಶಾಲಾ ಆಡಳಿತ […]
ದಿನಾಂಕ 24.08.2013 ರಂದು ನಮ್ಮ ಶಾಲೆಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು. ರಕ್ಷಾಬಂಧನದ ಮಹತ್ವದ ಬಗ್ಗೆ ಕಾಂಚನಾ ಸುಬ್ರಹ್ಮಣ್ಯ ಭಟ್ ಮಾತಾಡಿದರು. ವ್ಯಕ್ತಿಗಳು ಸಂಸ್ಕಾರವಂತರಾಗಬೇಕು, ಹಿಂದು ಜೀವನ ಮೌಲ್ಯಗಳಿಗೆ ಅನುಗುಣವಾಗಿ ಬಾಳುವ ಸಜ್ಜನರಾಗಬೇಕು ದೇಶಹಿತಕ್ಕೆ ಆದ್ಯತೆಕೊಟ್ಟು ಜೀವನ ನಡೆಸುವ ದೇಶಭಕ್ತರಾಗಬೇಕು, ಮೇಲು ಕೀಲು, ಅಸ್ಪೃಶ್ಯತೆಗಳಂತಹ ವಿಕೃತಿಗಳನ್ನು ಹೋಗಲಾಡಿಸಬೇಕು ಸಮಾಜದ ಕೊರತೆಗಳನ್ನು ನೀಗಿಸಲು ದೀನ -ದು:ಖಿತರ ಸೇವೆಗೆ ಸಮರ್ಪಿತರಾದ ರಾಷ್ಟ್ರಸೇವಕರಾಗಬೇಕು, ಜಾತಿ-ಮತ-ಪಂಥ-ಪಕ್ಷಗಳ ಮೇರೆ ಮೀರಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಹರಿಕಾರರಾಗಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾಗಿರುವ […]
ಪುತ್ತೂರು:ಅಗೋಸ್ತು 15 :ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇಶ ಸೇವೆ ಮಾಡಲು ಸೈನಿಕನಾಗಬೇಕೆಂಬುದು ಸುಳ್ಳು, ದೇಶದ ಮೇಲೆ ಅಭಿಮಾನ ಹೊಂದಿರುವ ನಾವೆಲ್ಲರೂ ಸೈನಿಕರೇ ಆಗಿರುವುದರಿಂದ ದೇಶ ಕಾಯುವ, ರಕ್ಷಿಸುವ ಕಾಯಕ ಮಾಡಬೇಕು ಎಂದು ನಿವೃತ್ತ ಸೈನಿಕರಾದ ಶ್ರೀ ರಮಾನಾಥ ರೈ ವಿಟ್ಲ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ ಕೃಷ್ಣ ಭಟ್, ಸಂಚಾಲಕ ಶ್ರೀ ರವೀಂದ್ರ.ಪಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ […]