QR Code Business Card
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

Thursday, August 21st, 2014

ದ.ಕ.ಜಿ.ಪಂ.ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ಮತ್ತು ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಪುತ್ತೂರು, ಇದರ ಆಶ್ರಯದಲ್ಲಿ ದಿನಾಂಕ 20-08-2014 ರಂದು ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀದೇವಿ ಕೋಟೆ (7ನೇ ತರಗತಿ) ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ತೃತೀಯ ಸ್ಥಾನ, ಶಶಾಂಕ್.ಎಸ್.ಎಲ್. (8ನೇ ತರಗತಿ) ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪಂಚಮ ಸ್ಥಾನ, ಕವನ.ಬಿ.ಎಸ್ (10ನೇ ತರಗತಿ) ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪಂಚಮ ಸ್ಥಾನ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

Friday, August 15th, 2014

ಪುತ್ತೂರು: ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶ್ರೀ ಪಿ.ಎನ್.ರಾಜಗೋಪಾಲ್, ನಿವೃತ್ತ ಸೇನಾಧಿಕಾರಿ ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡುತ್ತಾ ಭಾರತದ ಸೇನೆಯು ವಿಶ್ವದ ಸೇನೆಯ ಹಂತದಲ್ಲಿ ಮೂರನೇ ಸ್ಥಾನದಲ್ಲಿದ್ದು ಭಾರತ ಮಾತೆಯ ರಕ್ಷಣೆಗೆ ಸದಾ ಸಿದ್ಧವಾಗಿದೆ ಎಂದರು. ಶಾಂತಿಪ್ರಿಯಾ ಭಾರತ ಸ್ವಾತಂತ್ರ್ಯ ನಂತರ ಭಾರೀ ಶಸ್ತ್ರಾಸ್ತ್ರವನ್ನು ಎತ್ತಿ ಹೊರಡಬೇಕಾಯಿತು. ಭಾರತ ಶಾಂತಿಪ್ರಿಯ ದೇಶವಾದರೂ ಶತ್ರು ದೇಶದವರು ಕಾಲು ಕೆರೆದು ಯುದ್ಧಕ್ಕೆ ಬಂದಾಗ ಸಮರ್ಥ ಪ್ರತ್ಯುತ್ತರ ನೀಡಿದೆ. ಶ್ರೀ ನರೇಂದ್ರ ಮೋದಿ ಅಂತಹ ವಜ್ರದ ಶಕ್ತಿಯನ್ನು […]

ಇಂಗ್ಲೀಷ್ ಕಾರ್ಯಾಗಾರ

ಇಂಗ್ಲೀಷ್ ಕಾರ್ಯಾಗಾರ

Saturday, August 9th, 2014

ದಿನಾಂಕ. 9-8-2014 ರ ಶನಿವಾರ ನಮ್ಮ ಶಾಲೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರವಿನಾರಾಯಣ ಚಕ್ರಕೋಡಿಯವರು ಭಾಗವಹಿಸಿದರು. ಇವರು ಇಂಗ್ಲೀಷ್ ಪಠ್ಯಪುಸ್ತಕದಲ್ಲಿ ಬರುವ ವ್ಯಾಕರಣಾಂಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶ್ರೀಯುತ ಚೇತನ್, ಶಿಕ್ಷಕರಾದ ಶ್ರೀ ರಾಧಾಕೃಷ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಾಗಾರದಲ್ಲಿ ಶಿಕ್ಷಕರು ಹಾಗೂ ಶಿಕ್ಷಕಿಯರು ವ್ಯಾಕರಣಾಂಶಗಳಲ್ಲಿನ ಎಡರು-ತೊಡರುಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.

ಜಿಲ್ಲಾಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಜಿಲ್ಲಾಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Saturday, August 9th, 2014

ವಿದ್ಯಾಭಾರತಿ ದಕ್ಷಿಣಕನ್ನಡ ಜಿಲ್ಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಕಿಶೋರವರ್ಗದ ಬಾಲಕರ ಹಾಗೂ ಬಾಲಕಿಯರ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ. ಬಾಲಕರ ವಿಭಾಗದ ನಿತಿನ್ ಕೆ.ಆರ್, ಶಶಾಂಕ್ ಜೆ.ಎಮ್, ಶೌನಕ್ ಡಿ. ರೈ ಹಾಗೂ ಬಾಲಕಿಯರ ವಿಭಾಗದಲ್ಲಿ ದೇವಿ ಮುರಳೀಕೃಷ್ಣ, ಪೂಜಾ ಪಿ.P, ಪ್ರತೀಕ್ಷಾ ಪ್ರಭು ಭಾಗವಹಿಸಿರುತ್ತಾರೆ.

ದಕ್ಷಿಣಭಾರತ ಕ್ಷೇತ್ರಿಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ

ದಕ್ಷಿಣಭಾರತ ಕ್ಷೇತ್ರಿಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ

Saturday, August 9th, 2014

ವಿದ್ಯಾಭಾರತಿ ಕರ್ನಾಟಕ, ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆ ಸೇಡಂ, ಗುಲ್ಬರ್ಗಾ ಜಿಲ್ಲೆ ಇಲ್ಲಿ ನಡೆದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಾಲವರ್ಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಆಗಸ್ಟ್ 16, 17 ರಂದು ಕೇರಳದ ತ್ರಿಶೂರ್‌ನಲ್ಲಿ ನಡೆಯಲಿರುವ ದಕ್ಷಿಣಭಾರತ ಕ್ಷೇತ್ರಿಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಪಂಚಮಿ ಸರ್ಪಂಗಳ, ಶ್ರೀದೇವಿ ಕೋಟೆ, ಶಮಾ ಕೆ. ಶುಭಶ್ರೀ ಕೆ., ಜಿ.ಜೆ. ಚಿತ್ತಾರ ಹಿರಿಂಜ ಭಾಗವಹಿಸುತ್ತಾರೆ. ಅಲ್ಲದೆ ಕಿಶೋರವರ್ಗದ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ರಾಜ್ಯಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ

ರಾಜ್ಯಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ

Saturday, August 9th, 2014

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಿಶೋರವರ್ಗ ಬಾಲಕಿಯರ ಮತ್ತು ಬಾಲವರ್ಗ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಗುಲ್ಬರ್ಗಾದ ಸೇಡಂನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ. ಅಲ್ಲದೆ ಕಿಶೋರ ವರ್ಗದ ಬಾಲಕರು ಮತ್ತು ಬಾಲವರ್ಗ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ. ಕಿಶೋರವರ್ಗದ ಬಾಲಕಿಯರಲ್ಲಿ ಕವನ ಬಿ.ಎಸ್, ಅಕ್ಷತಾ ಶೆಟ್ಟಿ, ದೀಕ್ಷಾ ಎ.ಎಸ್, ಶಿವಾನಿ ಬಂಗೇರ, ನಿರೀಕ್ಷಾ ಜೆ.ಕೆ ಹಾಗೂ ಬಾಲವರ್ಗದ […]

ಸ್ವಸ್ಥ ಸಮಾಜಕ್ಕೆ ಅವಿಭಕ್ತ ಕುಟುಂಬ ಪೂರಕ - ಮಹೇಶ್ ಬಲ್ಲಾಳ್

ಸ್ವಸ್ಥ ಸಮಾಜಕ್ಕೆ ಅವಿಭಕ್ತ ಕುಟುಂಬ ಪೂರಕ – ಮಹೇಶ್ ಬಲ್ಲಾಳ್

Saturday, August 9th, 2014

ದಿನಾಂಕ. 4-8-2014 ರ ಸೋಮವಾರ ನಮ್ಮ ಶಾಲೆಯ ಸಭಾಂಗಣದಲ್ಲಿ ೪ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಅವಿಭಕ್ತ ಕುಟುಂಬ ಮತ್ತು ವಿಭಕ್ತ ಕುಟುಂಬದ ಬಗೆಗಿನ ಪಾಠಕ್ಕೆ ಸಂಬಂಧಪಟ್ಟ ಕಾರ್ಯಾಗಾರದಲ್ಲಿ ವಿಟ್ಲ ಅರಮನೆಯ ಸದಸ್ಯರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಆದ ಶ್ರೀಯುತ ಮಹೇಶ್ ಬಲ್ಲಾಳರು ಇಂದಿನ ಸುಸ್ಥಿರ ಸಮಾಜಕ್ಕೆ ಅವಿಭಕ್ತ ಕುಟುಂಬ ಪೂರಕವೆಂದು ನುಡಿದರು. ತಮ್ಮ ಮನೆಯಲ್ಲಿ 96 ಮಂದಿ ಸದಸ್ಯರಿದ್ದು ಇಂದಿಗೂ ಒಟ್ಟಾಗಿ ಇದ್ದು ಹಬ್ಬಹರಿದಿನಗಳಂದು ಎಲ್ಲರೂ ಸಂತೋಷದಿಂದ ಆಚರಿಸುತ್ತೇವೆ. ಮುಖ್ಯ ಅತಿಥಿಯಾಗಿ ಶಾಲಾ ದೈಹಿಕ […]

ಪೋಷಕರ ಸಭೆ

ಪೋಷಕರ ಸಭೆ

Saturday, August 9th, 2014

ದಿನಾಂಕ. 24-7-2014 ರ ಶುಕ್ರವಾರ ನಮ್ಮ ಶಾಲೆಯಲ್ಲಿ ೩ನೇ ತರಗತಿಯ ಪೋಷಕರ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ವಹಿಸಿ, ಮಾತನಾಡುತ್ತಾ ಮಕ್ಕಳಲ್ಲಿ ಕನಸನ್ನು ಬಿತ್ತುವ ಕೆಲಸವಾಗಬೇಕಾಗಿದೆ, ಆ ಮೂಲಕ ಮಗುವಿನಲ್ಲಿ ಸ್ಪರ್ಧೆ, ಪರೀಕ್ಷೆಯ ಭಯವನ್ನು ಮಕ್ಕಳಲ್ಲಿ ಕನಸನ್ನು ವಿಕಸನಗೊಳಿಸುವ ಶಿಕ್ಷಣ ಅಗತ್ಯವಿದೆ ಎಂದು ನುಡಿದರು. ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವರ್ಗ ಪ್ರಮುಖರಾದ ಶ್ರೀಮತಿ ಭಾರತಿ.ಜಿ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು 3 […]

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Monday, July 21st, 2014

ದಿನಾಂಕ 12-7-2014 ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಶ್ರೀ ವೇದವ್ಯಾಸ, ನಿವೃತ್ತ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ಮಾತನಾಡುತ್ತಾ ಹಾತೆಯು ಬೆಳಕನ್ನು ಕಂಡಾಗ ಆಕರ್ಷಿತವಾಗುವಂತೆ ಗುರುವನ್ನು ಕಂಡಾಗ ಶಿಷ್ಯನು ಆಕರ್ಷಿತನಾಗುತ್ತಾನೆ. ನಮ್ಮಲ್ಲಿ ಇರುವ ಶಕ್ತಿ ಪ್ರಕಟವಾಗಬೇಕಾದರೆ ಗುರುವಿನ ಅವಶ್ಯಕತೆ ಇದೆ. ಗುರು ಎಲ್ಲರ ಅಂತರಾತ್ಮದಲ್ಲಿರುತ್ತಾನೆ. ಗುರುವಿನಿಂದ ನಾವು ವಿಶ್ವದ ಮಹಾನ್ ಶಕ್ತಿಯಾಗಬಹುದು ಎಂದರು. ಶ್ರೀಮತಿ ಶೋಭಾ ಕೊಳತ್ತಾಯ, ಆಡಳಿತ ಮಂಡಳಿ ಸದಸ್ಯರು, ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯಗುರುಗಳಾದ […]

4ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

4ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Monday, July 21st, 2014

ದಿನಾಂಕ. 11-7-2014 ರ ಶುಕ್ರವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿಯ ಪೋಷಕರ ಸಭೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ವಹಿಸಿ, ಮಾತನಾಡುತ್ತಾ ಮಕ್ಕಳಿಗೆ ಜ್ಞಾನವನ್ನು ತುರುಕುವುದಲ್ಲ ಅವರಲ್ಲಿರುವ ಜ್ಞಾನವನ್ನು ಹೊರತೆಗೆಯುವ ಪ್ರಯತ್ನ ಅಗತ್ಯ, ಮಾತ್ರವಲ್ಲ ಜೀವನವನ್ನು ಅನುಭವಿಸಿ ತಿಳಿಯದೆ ಇದ್ದರೆ ಅಂತಹ ಶಿಕ್ಷಣ ವ್ಯರ್ಥವೆಂದು ನುಡಿದರು. ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಇವರು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ವರ್ಗ ಪ್ರಮುಖರಾದ ಶ್ರೀಮತಿ ಭಾರತಿ.ಜಿ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು. […]