
ಉನ್ನತೀಕರಿಸಿದ ‘ವಿವೇಕ’ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನೆ
Friday, August 18th, 2017ಜ್ಞಾನ-ವಿಜ್ಞಾನ ಸಹಿತವಾದ ಶಿಕ್ಷಣದೊಡನೆ ಸಂಸ್ಕೃತಿ ಹಾಗೂ ತಂತ್ರಜ್ಞಾನವೂ ಸೇರಿಕೊಂಡಾಗ ಶಿಕ್ಷಣದಲ್ಲಿ ಪ್ರಗತಿ ಸಾಧ್ಯ. ತಂತ್ರಜ್ಞಾನದ ಬಳಕೆ ಇಂದಿನ ಶಿಕ್ಷಣದ ಅವಿಭಾಜ್ಯ ಅಂಗ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಟ್ಲ ಜಿಲ್ಲಾ ಪ್ರಮುಖ್ ಶ್ರೀ ನಾರಾಯಣ ಶೆಟ್ಟಿ ನುಡಿದರು. ಅವರು ದಿನಾಂಕ 18.08.2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉನ್ನತೀಕರಿಸಿದ “ವಿವೇಕ” ಗಣಕಯಂತ್ರ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗ ಮುಖ್ಯಸ್ಥ ಶ್ರೀ ಮಹೇಶ್ ಪ್ರಸನ್ನ ಮತ್ತು […]