QR Code Business Card
ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ

ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ

Thursday, November 3rd, 2016

ಶ್ರೀ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್(ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ‘ಜ್ಞಾನ ಗಂಗಾ’ , ‘ಜ್ಞಾನ ಸುಧಾ’ ನೈತಿಕ ಮೌಲ್ಯಧಾರಿತ ಮಕ್ಕಳನ್ನಾಧರಿಸಿದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಸಭಾಂಗಣದಲ್ಲಿ 3-11-2016 ರಂದು ನಡೆಯಿತು. ವೆಂಕಟೇಶ್ ಭಟ್ ಅಮೈ ಅಧ್ಯಕ್ಷರು ವಿವೇಕನಾಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು, ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ […]

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ - ಕ್ಷೇತ್ರಿಯ ಮಟ್ಟಕ್ಕೆ ಅಯ್ಕೆ

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಕ್ಷೇತ್ರಿಯ ಮಟ್ಟಕ್ಕೆ ಅಯ್ಕೆ

Wednesday, October 26th, 2016

ವಿದ್ಯಾಭಾರತಿ ಕರ್ನಾಟಕ ಹಾಗೂ ರಾಷ್ಟ್ರೋತ್ಥಾನ ವಿದ್ಯಾಮಂದಿರ್ ಧಾರವಾಡ ಇಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಕ್ಷೇತ್ರಿಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ. ಬಾಲ ವರ್ಗ ವಿಭಾಗದ ಬಾಲಕರಲ್ಲಿ ಫಿರ್‍ಕಟ್ ಎಸ್ ಪಾಸ್ಹ 100 ಮೀ, 400 ಮೀ, 80 ಮೀ ಹರ್ಡಲ್ಸ್ , 4×100 ಮೀ ರಿಲೇ ಯಲ್ಲಿ ಪ್ರಥಮ, ವಡ್ರಬಾಕ್ ಚಕ್ರ ಎಸೆತ ತೃತೀಯ, ಅಂಕಿತ್ ರೈ 4×100 ಮೀ ಪ್ರಥಮ, ಶೂಶಾನ್ ಬಪ್ಪಳಿಗೆ 4×100 ಮೀ ಪ್ರಥಮ, ಕೆರ್ಮಿ 4×100 ಮೀ […]

ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆ

ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆ

Wednesday, October 26th, 2016

ದಿನಾಂಕ 20-10-2016 ರಿಂದ 22-10-2016 ರವರೆಗೆ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರ (ಕರ್ನಾಟಕ, ಆಂದ್ರಪ್ರದೇಶ ಮತ್ತು ತೆಲಂಗಾಣಗಳನ್ನೊಳಗೊಂಡ) ಮಟ್ಟದ ಮೂರು ದಿನಗಳ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ವಸ್ತಿಕ್ ಪದ್ಮ ಮತ್ತು ಧ್ಯಾನ್(10ನೇ ತರಗತಿ) ಇವರು ವೇಸ್ಟ್ ಮೆನೇಜ್‌ಮೆಂಟ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಯಶಸ್ವಿ ಶೆಟ್ಟಿ, 6ನೇ ತರಗತಿ ಇವರು ವಿಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರು ಮುಂದಿನ ತಿಂಗಳು 18 ರಿಂದ 22 ರವರೆಗೆ ಜಾರ್ಖಂಡ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ […]

ಇನ್ಸೆಫ್[INSEF]-ವಿಜ್ಞಾನ ಮೇಳ 2016ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಆಯ್ಕೆ

ಇನ್ಸೆಫ್[INSEF]-ವಿಜ್ಞಾನ ಮೇಳ 2016ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಆಯ್ಕೆ

Monday, October 24th, 2016

Science Society of India ನಡೆಸುತ್ತಿರುವ ಇನ್ಸೆಫ್[INSEF]- ವಿಜ್ಞಾನ ಮೇಳಕ್ಕೆ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳ 8 ಪ್ರಾಜೆಕ್ಟ್ ಆಯ್ಕೆಯಾಗಿರುತ್ತದೆ. ಸನೋಜ-6ನೇ ತರಗತಿ, ಸುಶಾಂತ್.ಎನ್.ಜಿ-8ನೇ ತರಗತಿ, ಶಮಂತ್ ರೈ.ಕೆ-10ನೇ ತರಗತಿ, ಧನುಷ್.ಪಿ.ಆರ್-10ನೇ ತರಗತಿ, ತುಷಾರ್ ಗೋಪಾಲ್-10ನೇ ತರಗತಿ, ರಾಕೇಶ್‌ಕೃಷ್ಣ-7ನೇ ತರಗತಿ ಇವರು ಆಯ್ಕೆಯಾಗಿದ್ದು, ಇವರು ಶ್ರೀ ರಾಮಕೃಷ್ಣಪ್ರೌಢ ಶಾಲೆಯಲ್ಲಿ ನವೆಂಬರ್ 5ರಂದು ನಡೆಯಲಿರುವ ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ವಿಭಾಗೀಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ಼್‌ಯಲ್ಲಿ ತೃತೀಯ ಸ್ಥಾನ

ವಿಭಾಗೀಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ಼್‌ಯಲ್ಲಿ ತೃತೀಯ ಸ್ಥಾನ

Saturday, October 22nd, 2016

ಸಾರ್ವಜನಿಕ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 20.10.2016ರಂದು ವಿಭಾಗೀಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ಼್ 2016 ಸ್ಪರ್ಧೆಯು ಕರ್ನಾಟಕ ಕಲಾ ಮಂದಿರ, ಮೈಸೂರು ಇಲ್ಲಿ ನಡೆಯಿತು. ಇದರಲ್ಲಿ ಪದವಿ ಪೂರ್ವ ಕಾಲೇಜುಗಳ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ ಒಟ್ಟಾಗಿ 250 ತಂಡಗಳು ಭಾಗವಹಿಸಿದ್ದು, ಅದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ವರುಣ್.ಕೆ(ಅರವಿಂದ ಭಟ್.ಕೆ.ಎಂ ಮತ್ತು ಶುಭಪ್ರಭ, ಮರೀಲ್, ಪುತ್ತೂರು, ಇವರ ಪುತ್ರ) ಮತ್ತು ತೇಜಾ.ಎಸ್.ಎಸ್(ಡಾ.ಶೈಲೇಂದ್ರ ಮತ್ತು […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ Engiconnect 2016 ವಿಜ್ಞಾನ ಮೇಳದಲ್ಲಿ ಹಲವು ಪ್ರಶಸ್ತಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ Engiconnect 2016 ವಿಜ್ಞಾನ ಮೇಳದಲ್ಲಿ ಹಲವು ಪ್ರಶಸ್ತಿ

Wednesday, October 19th, 2016

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ Engiconnect 2016 ವಿಜ್ಞಾನ ಮೇಳದಲ್ಲಿ ಹಲವು ಪ್ರಶಸ್ತಿ ಎನ್.ಐ.ಟಿ.ಕೆ ಸುರತ್ಕಲ್ ಇಲ್ಲಿ ನಡೆದ Engiconnect-2016 ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 30 ವಿದ್ಯಾರ್ಥಿಗಳು 16 ತಂಡಗಳಾಗಿ ಭಾಗವಹಿಸಿದ್ದು, ಇದರಲ್ಲಿ 5 ತಂಡಗಳು ಪ್ರಶಸ್ತಿ ಗಳಿಸಿರುತ್ತಾರೆ. ಸ್ವಸ್ತಿಕ್ ಪದ್ಮ ಮತ್ತು ಶಮಂತ್ ರೈ 10ನೇ ತರಗತಿ ತಂಡ ಪ್ರಥಮ ಸ್ಥಾನ, ರಾಕೇಶ್‌ಕೃಷ್ಣ, 6ನೇ ತರಗತಿ ಪ್ರಥಮ ಸ್ಥಾನ, ಚಿನ್ಮಯ, ಶ್ರೀತೇಜಾ ಶೆಟ್ಟಿ, ಪ್ರಣವ್ ಹೆಬ್ಬಾರ್, 6ನೇ […]

ದೆಹಲಿ 2016ರ ರಾಷ್ಟ್ರಮಟ್ಟದ ಐರಿಸ್ ನ್ಯಾಶನಲ್ ಫೇರ್‌ಗೆ ಆಯ್ಕೆ

ದೆಹಲಿ 2016ರ ರಾಷ್ಟ್ರಮಟ್ಟದ ಐರಿಸ್ ನ್ಯಾಶನಲ್ ಫೇರ್‌ಗೆ ಆಯ್ಕೆ

Tuesday, October 18th, 2016

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಟೆಲ್ ಕಂಪೆನಿಯ ಸಹಯೋಗದೊಂದಿಗೆ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ 2016ರ ರಾಷ್ಟ್ರಮಟ್ಟದ ಐರಿಸ್ ನ್ಯಾಶನಲ್ ಫೇರ್‌ನಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಪ್ಲಾಮ- ಅನಾಲಿಸಿಸ್ ಎಂಡ್ ಡೆವಲಪ್ ಮೆಂಟ್ ಆಫ್ ಇಕೊ ಫ್ರೆಂಡ್‌ಲೀ ಮೆಟೀರಿಯಲ್ ಫ್ರಂ ವೇಸ್ಟ್ ಎಲ್.ಡಿ.ಪಿ.ಇ ಪ್ಲಾಸ್ಟಿಕ್ ಎಂಡ್ ಸ್ಯಾಂಡ್ ಎಂಬ ಪ್ರಾಜೆಕ್ಟ್ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಉಪಯೋಗಿಸುವಲ್ಲಿ ಹೊಸ ಪ್ರಯೋಗವನ್ನು ಮಾಡಿ […]

ಸರಸ್ವತಿ ಹವನ, ಶಾರದಾಪೂಜೆ, ಅಕ್ಷರಾಭ್ಯಾಸ ಕಾರ್ಯಕ್ರಮ

ಸರಸ್ವತಿ ಹವನ, ಶಾರದಾಪೂಜೆ, ಅಕ್ಷರಾಭ್ಯಾಸ ಕಾರ್ಯಕ್ರಮ

Saturday, October 8th, 2016

ಪುರೋಹಿತ ಶ್ರೀ ಕಾರ್ತಿಕ್ ಕಾಟುಕುಕ್ಕೆ ಮತ್ತು ಬಳಗ ಸರಸ್ವತಿ ಹವನ, ಶಾರದಾಪೂಜೆ, ಅಕ್ಷರಾಭ್ಯಾಸ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು 80 ಕ್ಕೂ ಪುಟಾಣೆಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ವೆಂಕಟೇಶ್ವರ ಅಮೈ ಪೂಜಾ ಕರ್ತೃತ್ವ ನಿರ್ವಹಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕ ವೃಂದದವರಿಂದ ವಿಶೇಷ ಭಜನಾ ಕಾರ್ಯಕ್ರಮ ನೆರವೇರಿತು. ಸರ್ವರಿಗೂ […]

ವಿದ್ಯಾಭಾರತಿ ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ-2016 ರಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ವಿದ್ಯಾಭಾರತಿ ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳ-2016 ರಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Thursday, October 6th, 2016

ಮೈಸೂರು ಶ್ರೀ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯಲ್ಲಿ ದಿನಾಂಕ ಅಕ್ಟೋಬರ್ 2, 3, ಮತ್ತು 4 ರಂದು ನಡೆದ ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ ಪ್ರಾಂತೀಯ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಸ್ತಿಕ್ ಪದ್ಮ ಮತ್ತು ಧ್ಯಾನ್ ವಿಜ್ಞಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನ, ಅನಘಾ ಕೆ. ಗಣಿತ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಮತ್ತು ಯಶಸ್ವಿ ಶೆಟ್ಟಿ ವಿಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿ, ಅಕ್ಟೋಬರ್ 20, 21, 22 ರಂದು ನಡೆಯಲಿರುವ ದಕ್ಷಿಣ ವಲಯ […]

ಅಖಿಲ ಭಾರತೀಯ ವಿದ್ಯಾಭಾರತಿಯ ರಾಷ್ಟೀಯ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ

ಅಖಿಲ ಭಾರತೀಯ ವಿದ್ಯಾಭಾರತಿಯ ರಾಷ್ಟೀಯ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ

Tuesday, October 4th, 2016

ಅಖಿಲ ಭಾರತೀಯ ವಿದ್ಯಾಭಾರತಿಯ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟವು ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ದಿನಾಂಕ 9 ರಿಂದ 11 ಸೆಪ್ಟೆಂಬರ್ ವರೆಗೆ ನಡೆದಿದ್ದು 14 ವರ್ಷದೊಳಗಿನ ೮ನೇ ತರಗತಿಯ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ಮತ್ತು ಆದರ್ಶ್ ( ಹಿರಿಯ ವಿದ್ಯಾರ್ಥಿ) ತರಬೇತು ನೀಡಿರುತ್ತಾರೆ. ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು, ಚೇತನ್( ಚನಿಯಪ್ಪ ಪೂಜಾರಿ, ವಿಶಾಲಾಕ್ಷಿ ದಂಪತಿಗಳ ಪುತ್ರ), ತನುಜ್. ಕೆ ( ಚೆನ್ನಪ್ಪಗೌಡ, ಪೂರ್ಣಿಮದಂಪತಿಗಳ […]