QR Code Business Card
ಶೈಕ್ಷಣಿಕ ಕಾರ್ಯಾಗಾರ

ಶೈಕ್ಷಣಿಕ ಕಾರ್ಯಾಗಾರ

Monday, December 7th, 2015

ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ನಾಲ್ಕು ಸ್ಥಂಭಗಳು. ಭಿನ್ನ ಭಿನ್ನ ಸಾಮರ್ಥ್ಯಗಳ ವಿದ್ಯಾರ್ಥಿಗಳೊಂದಿಗೆ ಪೋಷಕರು ಯಾವ ರೀತಿ ತಮ್ಮನ್ನು ತೊಡಗಿಸಿಕೊಳ್ಳಬೇಕು? ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರೂ ಜವಾಬ್ದಾರರು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರೊ.ವಿ.ಜಿ.ಭಟ್ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಹತ್ತನೇ ತರಗತಿಯ ಮಕ್ಕಳ ಹಾಗೂ ಪೋಷಕರ ಶೈಕ್ಷಣಿಕ ಕಾರ್ಯಾಗಾರದ ಅಧ್ಯಕ್ಷರಾಗಿ ಮಾತನಾಡುತ್ತಿದ್ದರು. ಕಾರ್ಯಾಗಾರದಲ್ಲಿ ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲ ಶ್ರೀ ಪುಷ್ಪರಾಜ್ […]

ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ

Friday, December 4th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ 2015-16 ನೇ ಸಾಲಿನ ಪ್ರತಿಭಾ ಪುರಸ್ಕಾರದಲ್ಲಿ 1 ನೇ ತರಗತಿಯಿಂದ 4 ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಮಿ ಕಲಾ ಮಂದಿರದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಪ್ರಿಯದರ್ಶಿನಿ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಅತಿಥಿಯಾಗಿ ಆಗಮಮಿಸಿ, ಮುಗ್ಧ ಮಕ್ಕಳ ಭಾವನೆಗೆ ಬಣ್ಣ ಹಚ್ಚುವ ಕೆಲಸವಾಗಬೇಕು. ಪ್ರತಿಯೊಂದು ಆತ್ಮದಲ್ಲಿ ದೇವರಿರುವಂತೆ ಪ್ರತಿಭೆಯು ಇರುವುದು. ಆ ನಿಟ್ಟಿನಲ್ಲಿ ಪ್ರತಿಭೆಯನ್ನು ಗುರುತಿಸುವಲ್ಲಿ ಪ್ರತಿಭಾ ದಿನಾಚರಣೆಯು ಉತ್ತಮ ಕಾರ್ಯಕ್ರಮ ಎಂದರು. ವಿವೇಕಾನಂದ ವಿದ್ಯಾ ಸಂಸ್ಥೆಗಳು ತೆಂಕಿಲ, ಇದರ ಖಜಾಂಜಿ ಅಚ್ಯುತ […]

ಪೂರ್ವ ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರ ದಿನ

ಪೂರ್ವ ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರ ದಿನ

Wednesday, December 2nd, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ 2015-16 ನೇ ಸಾಲಿನ ಪೂರ್ವ ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರದ ಉದ್ಘಾಟನಾ ಕಾರ್ಯಕ್ರಮವು ಸ್ವಾಮಿ ಕಲಾ ಮಂದಿರದ ಸಭಾ ಭವನದಲ್ಲಿ ಡಿಸೆಂಬರ್ 2 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾ ಸಂಸ್ಥೆಗಳ ಸದಸ್ಯರಾದ ರೂಪಲೇಖಾ ಮಾತನಾಡಿ, ಮಗು ಕೇಂದ್ರಿತ ಶಿಕ್ಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಾಗಬೇಕು. ಮಗುವಿನ ಆಸಕ್ತಿಯ ವಿಷಯವನ್ನು ಅರಿತುಕೊಂಡು ಶಿಕ್ಷಣ ನೀಡುವುದು ಹೆತ್ತವರ ಆದ್ಯ ಕರ್ತವ್ಯವಾಗಬೇಕು ಎಂದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಯೋಜಕರಾದ ರಘುರಾಜ್ […]

ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಪ್ರಶಸ್ತಿ

ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಪ್ರಶಸ್ತಿ

Tuesday, December 1st, 2015

ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ಮೂವರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ. ಬಾಲವರ್ಗದಲ್ಲಿ 7ನೇ ತರಗತಿಯ ಧ್ಯಾನ್ (ಶ್ರೀನಾಥ್ ಮತ್ತು ಶಾಂತಿ ಪುತ್ತೂರು, ಇವರ ಪುತ್ರ) ಮತ್ತು ವಿಕ್ರಂ ಆಳ್ವ (ಕೃಷ್ಣ ಪ್ರಸಾದ್ ಆಳ್ವ ಚೆಲ್ಯಡ್ಕ, ಇವರ ಪುತ್ರ) ಇವರು ಜಂಟಿಯಾಗಿ ಮಂಡಿಸಿದ ನವಚಾಲಿತ ಮಾದರಿಗೆ ಪ್ರಥಮ ಪ್ರಶಸ್ತಿ ಹಾಗೂ ನಗದು ಬಹುಮಾನ ದೊರೆತಿದೆ. ಕಿಶೋರ ವರ್ಗದಲ್ಲಿ 9ನೇ ತರಗತಿ ನಿಶ್ಚಿತ್ ರೈ (ವೇಣುಗೋಪಾಲ […]

2015-16 ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

2015-16 ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ

Thursday, November 26th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ 2015-16 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ನವೆಂಬರ್ 25  ರಂದು ಶಾಲಾ ಕ್ರೀಡಾಂಗಣದಲ್ಲಿ ಉದ್ಘಾಟಿಸಲಾಯಿತು. ಜಿ.ಎಲ್. ಆಚಾರ್ಯ ಜ್ಯುವೆಲ್ಲರಿಯ ಸಹ ವ್ಯವಸ್ಥಾಪಕರಾದ ಸುದನ್ವ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಯೊಬ್ಬರು ಕ್ರೀಡಾ ಸ್ಫೂರ್ತಿಯಿಂದ ಮತ್ತು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದರು. ಭಾರತೀಯ ವಾಯುಸೇನೆಯ ಫ್ಲೈಯಿಂಗ್ ಅಧಿಕಾರಿಯಾಗಿರುವ ಶರತ್ ಬಿ.ಎಂ. ಮುಖ್ಯ ಅತಿಥಿಯಾಗಿ ಆಗಮಿಸಿ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುವುದು ಪ್ರಮುಖವಾದುದು. ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯ ಪಡೆದಿದ್ದು, ಕೆಲವರು ವೈದ್ಯರಾಗುತ್ತಾರೆ, ಇನ್ನು […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಆರಂಭ

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಆರಂಭ

Monday, November 23rd, 2015

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಇದರ ವತಿಯಿಂದ ನಡೆಸಲ್ಪಡುವ ಪ್ರೌಢ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯು ದಿನಾಂಕ 23-11-2015 ರಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಆರಂಭವಾಯಿತು. ಎರಡು ವಿಭಾಗಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾ, ತೆಂಕಿಲ, ಸುದಾನ ವಸತಿಯುತ ಶಾಲೆ ಪುತ್ತೂರು, ಬಾಲವಿಕಾಸ ಶಾಲೆ ಮಾಣಿ, ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ, ಸುಭೋದಯ ಪ್ರೌಢಶಾಲೆ ಪಾಣಾಜೆ, ಸರಕಾರಿ […]

ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳು ಆಯ್ಕೆ

ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳು ಆಯ್ಕೆ

Monday, November 23rd, 2015

Indian Science and Engineering Fair (INSEF) ಆಯೋಜಿಸುವ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ನಾಲ್ಕು ವೈಜ್ಞಾನಿಕ ಸಂಶೋಧನಾತ್ಮಕ ಪ್ರಬಂಧಗಳು ಆಯ್ಕೆಯಾಗಿವೆ. ಓಜಸ್ವಿ ಶರ್ಮ (8ನೇ) (ತಂದೆ: ಎ. ರಮೇಶ, ತಾಯಿ: ಬಿ. ಕೃಷ್ಣವೇಣಿ) ಮತ್ತು ಸನೋಜ (5ನೇ) (ತಂದೆ: ಎ. ರಮೇಶ, ತಾಯಿ: ಬಿ. ಕೃಷ್ಣವೇಣಿ) ತಯಾರಿಸಿರುವ Low cost solar water heater, ಧ್ಯಾನ್ ಎಸ್. ರಾವ್ (7ನೇ) (ತಂದೆ: ಶ್ರೀನಾಥ್ ರಾವ್ ಪಿ.ಎನ್, ತಾಯಿ: ಶಾಂತಿ […]

ಶಿಕ್ಷಕರಿಗೆ ತರಬೇತಿ

ಶಿಕ್ಷಕರಿಗೆ ತರಬೇತಿ

Friday, November 20th, 2015

ದಿನಾಂಕ 20-11-2015 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇದರ ಸಭಾಂಗಣದಲ್ಲಿ ವಿವೇಕಾನಂದ ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು. ಮಂಗಳೂರು ಜ್ಞಾನ ಆಕಾಡೆಮಿ ಅಭಿಜ್ಞಾ ಟ್ರಸ್ಟ್ ಇದರ ಪ್ರಸಾದ್ ಗುರೂಜಿ ಮತ್ತು ಭಾರತಿಪ್ರಸಾದ್ ಗುರೂಜಿ ತರಬೇತಿ ನಡೆಸಿಕೊಟ್ಟರು. ಪ್ರಸಾದ್ ಗುರೂಜಿ ತರಬೇತಿಯಲ್ಲಿ ಹಿಂದೂ ಧರ್ಮದ ಪರಿಕಲ್ಪನೆ, ಧಾರ್ಮಿಕ ವಿಚಾರ, ಯೋಗ, ಹಿಂದೂ ಆಹಾರ ಪದ್ಧತಿಯ ಬಗ್ಗೆ ವಿವರಿಸಿದರು. ನಾವು ಕಿವಿಯಲ್ಲಿ ಆಲಿಸಿದ ವಿಚಾರ ಹಾಗೂ ಅನುಭವವನ್ನು ಅರಿವಿನಲ್ಲಿರಿಸಿದ್ದೇ ನಿಜವಾದ ಸಾಧನೆ ಎಂದರು. […]

ವಿದ್ಯಾರ್ಥಿಗಳಿಗೆ ಭತ್ತಕೊಯ್ಲು ಪ್ರಾತ್ಯಕ್ಷಿಕೆ

ವಿದ್ಯಾರ್ಥಿಗಳಿಗೆ ಭತ್ತಕೊಯ್ಲು ಪ್ರಾತ್ಯಕ್ಷಿಕೆ

Friday, November 20th, 2015

ದಿನಾಂಕ 20-11-2015 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 9ನೇ ಮತ್ತು 10ನೇ ತರಗತಿಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕೃಷಿ-ಬೇಸಾಯ ಮತ್ತು ಭತ್ತ ಕಾಟಾವು ವಿಷಯವಾಗಿ ಒಂದು ದಿನದ ಪ್ರಾತ್ಯಕ್ಷಿಕೆಯು ಪುತೂರು ತಾಲೂಕು ಕಬಕದ ಕುಂಜಾರು ದೇವಸ್ಥಾನದ ಬಳಿಯ ಬಾಲಕೃಷ್ಣರ ಭತ್ತದ ಗದ್ದೆಯಲ್ಲಿ ನಡೆಯಿತು. ಸ್ವತಃ ಮಕ್ಕಳೆ ಭತ್ತದ ಗದ್ದೆಯಲ್ಲಿ ಕೊಯ್ಲು ಕಾರ್ಯದಲ್ಲಿ ಭಾಗವಹಿಸಿ ನೈತಿಕ ಶಿಕ್ಷಣ ಪಡೆದು ಸಂತೋಷಪಟ್ಟರು. ಶಾಲಾ ಶಿಕ್ಷಕರಾದ ಶ್ರೀ ಮಂಜುನಾಥ ಹಾಗೂ ಶ್ರೀಮತಿ ಅನುರಾಧ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದರು ಎಂದು ಶಾಲಾ ಪ್ರಕಟಣೆ […]

Invitation : Annual Sports Meet 2015-16

Invitation : Annual Sports Meet 2015-16

Thursday, November 19th, 2015