QR Code Business Card
ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Thursday, August 13th, 2015

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಬಾಲಕ/ಬಾಲಕಿಯರ ಈಜು ತಂಡ ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ಸ್ಪರ್ಧೆಯ ತಂಡದಲ್ಲಿ ಪ್ರಥಮ್.ಕೆ, ರತನ್ ಕುಮಾರ್, ನೂತನ್.ಬಿ, ಧ್ಯಾನ್‌ದೀಪ್, ಆದಿತ್ಯ.ಬಿ ಶೆಟ್ಟಿ, ಶೀಲ್ಪಾ.ಪಿ.ಯು, ಶ್ರೇಯ.ಪಿ.ಯು, ಶ್ರೀ ಲಕ್ಷ್ಮೀ ಶೆಟ್ಟಿ, ಕೌಶಲ್.ಎಸ್.ವೈ, ಅಮೃತ್, ಪ್ರಜ್ವಲ್ ಸಾಯ ಭಾಗವಹಿಸಿದ್ದರು. ರಾಜಕುಮಾರ್.ಕೆ ಇವರನ್ನು ತರಬೇತುಗೊಳಿಸಿದ್ದರೆಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ

ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ

Thursday, August 13th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳ ತ್ರೋಬಾಲ್ ತಂಡವು ಕಡಬದ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಸಾಗರ್, ಚೇತನ್, ಗಗನ್ ದೀಪ್, ರವಿತ್, ತೇಜಸ್ ಕುಮಾರ್, ಸುನಾದ್, ಸಂಜನ್.ಜಿ.ಎಸ್, ವೈಶಾಖ್ ಕೃಷ್ಣ, ನಿರ್ಮಲ್.ಜಿ.ಪಿ, ವೃಶಾಂಕ್.ಎಮ್.ಹೊಳ್ಳ, ನಿತಿನ್.ಕೆ.ಪಿ ಭಾಗವಹಿಸಿದ್ದರು ಇವರಿಗೆ ಶಾಲಾ ದೈಹಿಕ ಶಿಕ್ಷಕ ಭಾಸ್ಕರ ಗೌಡ ತರಬೇತುದಾರರಾಗಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Adolescon 2015 -ಮಕ್ಕಳ ಯೂತ್ ಮೇಳ ಉದ್ಘಾಟನೆ

Adolescon 2015 -ಮಕ್ಕಳ ಯೂತ್ ಮೇಳ ಉದ್ಘಾಟನೆ

Thursday, August 13th, 2015

ವಿವೇಕಾನಂದ ವಿದ್ಯಾಸಂಸ್ಥೆಗಳು, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 13-08-2015 ನೇ ಗುರುವಾರದಂದು Adolescon 2015 – ಮಕ್ಕಳ ಯೂತ್ ಮೇಳ ದರ್ಶನ್ ಕಲಾ ಮಂದಿರದ ಸಭಾಭವನದಲ್ಲಿ ನಡೆಯಿತು. ಡಾ.ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದೇಹ ಬೆಳೆಯುತ್ತಿದ್ದಂತೆ ಮನಸ್ಸು ಬೆಳೆಯುತ್ತದೆ. ಸಮಾಜವನ್ನು ಸುಧಾರಣೆ ಮಾಡುವ ಮಕ್ಕಳಿಗೆ ಎಲ್ಲಾ ರೀತಿಯ ಬೆಳಕನ್ನು ಚೆಲ್ಲುವ ಕೆಲಸವನ್ನು ಹೆತ್ತವರು ಶಿಕ್ಷಕರು ಮಾಡಬೇಕು. ತಿಳಿದಿರುವ ವಿಷಯವನ್ನು ತಿಳಿಯದವನಿಗೆ ತಿಳಿದವನು ತಿಳಿಸುವುದೇ ಆರೋಗ್ಯ. ಇದುವೇ […]

ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ - ದ್ವಿತೀಯ ಸ್ಥಾನ

ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟ – ದ್ವಿತೀಯ ಸ್ಥಾನ

Tuesday, August 11th, 2015

ದಿನಾಂಕ 11-08-2015 ರಂದು ಸುದಾನ ಬ್ಯಾಡ್‌ಮಿಂಟನ್ ಕ್ರೀಡಾಂಗಣದಲ್ಲಿ ಸ.ಹಿ.ಪ್ರಾ. ಶಾಲೆ, ಭಕ್ತಕೊಡಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ವತಿಯಿಂದ ಸುದಾನ ಸ್ಪೋಟ್ಸ್ ಕ್ಲಬ್, ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲಾ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ತಂಡವನ್ನು ಅಭಿರಾಮ್, ಶುಶಾನ್, ಶಿಶಿರ್ ವಾಗ್ಲೆ, ಸಾತ್ವಿಕ್ ಮತ್ತು ಆಶಿಶ್ ಮಲ್ಲಾರ್ ಪ್ರತಿನಿಧಿಸಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮದ ಶಟಲ್ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮದ ಶಟಲ್ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Friday, August 7th, 2015

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸುದಾನ ಸ್ಪೋರ್ಟ್ಸ್ ಕ್ಲಬ್ ಸಾಮೆತಡ್ಕ ಇಲ್ಲಿ ದಿನಾಂಕ 07-08-2015 ರಂದು ನಡೆದ ಪ್ರಾಥಮಿಕ ಶಾಲಾ ಬಾಲಕರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಗಳಿಸುವುದರೊಂದಿಗೆ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ. ತಂಡವನ್ನು ಅಭಿರಾಮ್ ಯು, ಸುಶಾನ್, ಶಿಶಿರ್ ವಾಗ್ಲೆ, ಸಾತ್ವಿಕ್ ಮತ್ತು ಆಶಿಶ್ ಮಲ್ಲಾರ್ ಪ್ರತಿನಿಧಿಸಿದ್ದರು.

ವಿವೇಕಾನಂದ ಆಂಗ್ಲ ಮಾಧ್ಯಮದ ದೇವಿ ಮುರಳಿಕೃಷ್ಣ ಜಿಲ್ಲಾ ಮಟ್ಟದಲ್ಲಿ ಪ್ರಥಮ

ವಿವೇಕಾನಂದ ಆಂಗ್ಲ ಮಾಧ್ಯಮದ ದೇವಿ ಮುರಳಿಕೃಷ್ಣ ಜಿಲ್ಲಾ ಮಟ್ಟದಲ್ಲಿ ಪ್ರಥಮ

Friday, August 7th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿನ 10 ನೇ ತರಗತಿ ವಿದ್ಯಾರ್ಥಿನಿ ದೇವಿ ಮುರಳಿಕೃಷ್ಣ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ‘Harnessing of light’ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಮತ್ತು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇವಳಿಗೆ ಶಿಕ್ಷಕಿ ಸಿಂಧು ಮತ್ತು ಶಾರದ ಶೆಟ್ಟಿ ಮಾರ್ಗದರ್ಶನ ನೀಡಿದ್ದಾರೆಂದು ಶಾಲಾ ಮುಖ್ಯಗುರುಗಳ ಪ್ರಕಟಣೆ ತಿಳಿಸಿದೆ.

ಗುರುಪೂಜೆ

ಗುರುಪೂಜೆ

Thursday, August 6th, 2015

ನಾವು ಹಲವಾರು ಹಬ್ಬ ಹರಿದಿನಗಳನ್ನು ಆಚರಿಸುತ್ತೇವೆ. ಅವುಗಳಲ್ಲಿ ಗುರುಪೂರ್ಣಿಮೆಯು ಒಂದು ವಿಶಿಷ್ಟವಾದ ಹಬ್ಬ. ಅಂಧಕಾರ ಎಂದರೆ ಕತ್ತಲು ಇದನ್ನು ಹೋಗಲಾಡಿಸುವವನು ಗುರು. ಅಂಥಹಾ ಗುರುವನ್ನು ವರ್ಷದಲ್ಲಿ ಒಮ್ಮೆ ಪೂಜಿಸುವ ದಿನವೇ ಗುರು ಪೂರ್ಣಿಮೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ವೀಣಾಸರಸ್ವತಿ ಅವರು ಶಾಲೆಯಲ್ಲಿ ಆಚರಿಸಿದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಈ ಮಾತನ್ನು ಹೇಳಿದರು. ವೇದಿಕೆಯಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.

Youth Mela & School Programme on 13-08-2015

Youth Mela & School Programme on 13-08-2015

Thursday, August 6th, 2015
ಶಿಕ್ಷಣದ ಪರಿಣಾಮಕಾರಿ ಅನುಷ್ಠಾನಕ್ಕೆ ಪಾಲಕರ ಸಹಕಾರ ಅಗತ್ಯ - ಸತೀಶ್ ಕುಮಾರ್ ರೈ

ಶಿಕ್ಷಣದ ಪರಿಣಾಮಕಾರಿ ಅನುಷ್ಠಾನಕ್ಕೆ ಪಾಲಕರ ಸಹಕಾರ ಅಗತ್ಯ – ಸತೀಶ್ ಕುಮಾರ್ ರೈ

Wednesday, August 5th, 2015

ದೈನಂದಿನ ಜೀವನದಲ್ಲಿ ಬೇಕಾಗುವ ಶಿಕ್ಷಣವನ್ನು ಶಾಲಾ ಹಂತದಲ್ಲಿ ನೀಡುವುದು ನಮ್ಮ ಜವಾಬ್ದಾರಿ. ಆದರೆ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಪೋಷಕರ ಸಹಕಾರ ಅಗತ್ಯ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಇವರು ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯು ಶಾಲಾ ಸಭಾಂಗಣದಲ್ಲಿ ಅಗಸ್ಟ್ 5 ರಂದು ನಡೆಯಿತು. ಶಿಕ್ಷಕ – ರಕ್ಷಕ ಸಂಘ ಅಧ್ಯಕ್ಷ ರವಿ ಮುಂಗ್ಲಿಮನೆ ಸಾಂಧಾರ್ಭಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ […]

ಯಶಸ್ವಿ ವಿದ್ಯಾರ್ಥಿ ವಿಚಾರ ಸಂಕಿರಣ

ಯಶಸ್ವಿ ವಿದ್ಯಾರ್ಥಿ ವಿಚಾರ ಸಂಕಿರಣ

Tuesday, August 4th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಜಗನ್ನಾಥ್ ನಾಡಿಗೇರ ಅವರಿಂದ ಯಶಸ್ವಿ ವಿದ್ಯಾರ್ಥಿಯಾಗುವುದು ಹೇಗೆ ಎಂಬ ವಿಚಾರ ಸಂಕಿರಣ ಶಾಲಾ ಸಭಾಂಗಣದಲ್ಲಿ ಆಗಸ್ಟ್ 4 ರಂದು ನಡೆಯಿತು. ಜಗನ್ನಾಥ್ ನಾಡಿಗೇರ, ದಾವಣಗೆರೆ ಇವರು ವಿಚಾರ ಸಂಕಿರಣ ನಡೆಸಿಕೊಟ್ಟು, ನೀರನ್ನು ಕುಡಿಯಲು ಇಷ್ಟಪಡುವ 100 ಕುದುರೆಗಳನ್ನು ಒಬ್ಬನಿಂದ ಕುಡಿಸಬಹುದು. ಆದರೆ ನೀರನ್ನು ಕುಡಿಯಲು ಇಷ್ಟಪಡದ ಒಂದು ಕುದುರೆಯನ್ನು 100 ಜನರಿಂದ ನೀರು ಕುಡಿಸಲು ಅಸಾಧ್ಯ. ಆದುದರಿಂದ ನಮ್ಮ ಮನಸ್ಸನ್ನು ಹತೋಟಿಯಲ್ಲಿಡುವುದು ಮತ್ತು ಏಕಾಗ್ರತೆಯಿಂದ ಇಡುವುದು ಕಲಿಕೆಗೆ ಪೂರಕ ಎಂದರು. ಕೆ. […]