QR Code Business Card
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂಜೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂಜೆ

Monday, August 3rd, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ಗುರುಪೂಜೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಾಯಿ ಶ್ರೀ ಪದ್ಮ ವಿದ್ಯಾರ್ಥಿನಿ ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರು ನಗರ ಪುತ್ತೂರು ಗುರುಪೂಜೆಯ ಮಹತ್ವ ವಿವರಿಸುತ್ತಾ, ಪ್ರಪಂಚದ ಸೃಷ್ಠಿಕರ್ತನಿಂದ ಹಿಡಿದು ಆಧ್ಯಾತ್ಮದವರೆಗಿನ ಎಲ್ಲ ವಿಚಾರಗಳನ್ನು ಮಾರ್ಗದರ್ಶನ ಮಾಡುವವನೇ ಗುರು. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಲು ತತ್ವಜ್ಞಾನವೆಂಬ ಬೆಳಕನ್ನು ನೀಡುವವನೇ ಗುರು ಎಂದು ನುಡಿದರು. ರವಿ ಮುಂಗ್ಲಿಮನೆ ಅಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘ ಮಾತನಾಡಿ, ಭೇದ ಭಾವವಿಲ್ಲದೆ ಜಾತಿ, ಧರ್ಮಕ್ಕೂ ಮಿಗಿಲಾಗಿ ಶಿಷ್ಯನಿಗೆ ವಿದ್ಯಾದಾನ ಮಾಡುವವನೇ […]

ಅನುಭವಕ್ಕೆ ಮಿಗಿಲಾದ ಗುರು ಇನ್ನೊಂದಿಲ್ಲ - ಶ್ರೀ ನಾರಾಯಣ ಭಟ್ ರಾಮಕುಂಜ

ಅನುಭವಕ್ಕೆ ಮಿಗಿಲಾದ ಗುರು ಇನ್ನೊಂದಿಲ್ಲ – ಶ್ರೀ ನಾರಾಯಣ ಭಟ್ ರಾಮಕುಂಜ

Monday, August 3rd, 2015

ನಾಳಿನ ಕನಸನ್ನು ನನಸಾಗಿಸಲು ನಾವು ಇಂದೇ ಪ್ರಯತ್ನಿಸಬೇಕು. ಆಡಿದ್ದನ್ನು ಕಾರ್ಯರೂಪದಲ್ಲಿ ಜಾರಿಗೊಳಿಸಿ, ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶರಾಗಿ ಬಾಳಬೇಕು. ಅನುಭವವೇ ಶ್ರೇಷ್ಠವಾದ ಗುರು ಎಂದು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಭಟ್ ತಿಳಿಸಿದರು. ಮಕ್ಕಳಿಗೆ ಕಲಿಕಾ ವಾತಾವರಣವನ್ನು ಪೋಷಕರು ಮನೆಯಲ್ಲಿಯೇ ನಿರ್ಮಿಸಬೇಕು. ಮಗುವಿನ ಉನ್ನತಿಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮಗುವಿನ ಆತ್ಮವಿಶ್ವಾಸಕ್ಕೆ ಹಾನಿಯಾಗುವ ಯಾವುದೇ ಕಾರ್ಯವನ್ನು ಪೋಷಕರು ಮಾಡಬಾರದು. ಮಾತ್ರವಲ್ಲ ಅತಿಯಾದ ಆತ್ಮವಿಶ್ವಾಸವೂ ಅಪಾಯಕಾರಿ. ಶಿಕ್ಷಣದ ಜೊತೆಗೆ ಸಂಸ್ಕಾರವೂ ಮಕ್ಕಳ ಅಭಿವೃದ್ಧಿಗೆ ಪೂರಕ ಎಂದು […]

6ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆ

6ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆ

Saturday, August 1st, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ 6ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ಅಗಸ್ಟ್ 1 ರಂದು ನಡೆಯಿತು. ನಯನಾ.ಪಿ.ರೈ, ದೈಹಿಕ ಶಿಕ್ಷಣ ಶಿಕ್ಷಕಿ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತಿಂಗಳಾಡಿ ಇವರು ಮಾತನಾಡಿ ಮಗುವಿನ ಹೊಸ ಬದಲಾವಣೆಗೆ ಶಾಲೆ ಪೂರಕ ವಾತಾವರಣ ಕಲ್ಪಿಸುತ್ತದೆ. ನಮ್ಮ ಮಕ್ಕಳಿಗೆ ಹೊಸ ಅವಕಾಶವನ್ನು ಕಲ್ಪಿಸಿ, ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವುದು ಪೋಷಕರ ಕರ್ತವ್ಯವಾಗಬೇಕೆಂದು ಹೇಳಿದರು. ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು ಇವರು ಶಾಲಾ ನಿಯಮಗಳು ಧ್ಯೇಯಗಳನ್ನು […]

ನಕ್ಷತ್ರವಾದ ದಿವ್ಯಚೇತನ 'ಕಲಾಂ'

ನಕ್ಷತ್ರವಾದ ದಿವ್ಯಚೇತನ ‘ಕಲಾಂ’

Friday, July 31st, 2015

ಅಖಂಡ ಭಾರತ ಮೆಚ್ಚಿದ ಅಬ್ದುಲ್ ಕಲಾಂ ನಿಮಗಿದೋ ಮಿಡಿಯುವ ಹೃದಯಗಳಿಂದ ಸಲಾಂ ಏನೆಂದು ಕರೆಯಲಿ ನಿನ್ನ ಓ ಅಗಾಧ ಚೇತನ ರಾಷ್ಟ್ರಪತಿಯೋ, ವಿಜ್ಞಾನಿಯೋ, ಶಿಕ್ಷಕನೋ, ಲೇಖಕನೇ……! ಜನಮನದಲ್ಲಿ ನೀ ಮೂಡಿಸಿದ ಛಾಪು ಇತಿಹಾಸದುದ್ದಕ್ಕೂ ನೆಲೆಯಾಯಿತು ಅಜರಾಮರ ವಿಜ್ಞಾನ ಲೋಕದಲಿ ಅದ್ಭುತ ಸಾಧನೆಗೈದೆ ರಾಷ್ಟ್ರಪತಿ ಸದನವನು ಜನತೆಯೆದುರು ತೆರೆದೆ ಅಗ್ನಿಯ ರೆಕ್ಕೆಯಲಿ ಆತ್ಮಚರಿತ್ರೆಯ ಬರೆದೆ ವೈಜ್ಞಾನಿಕ ಸಾಧನೆಗೆ ಕ್ಷಿಪಣಿಗಳ ಜನಕನಾದೆ ಜ್ಞಾನ ತಂತ್ರಜ್ಞಾನಗಳನು ವಿಜ್ಞಾನದೊಂದಿಗೆ ಬೆಸೆದು ದೇಶದ ಘನತೆಯನು ಉತ್ತುಂಗಕ್ಕೇರಿಸಿದೆ ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರು ನೀನಾದೆ ನಿರಂತರ ಪ್ರಶ್ನೆಗಳನು […]

9 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

9 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Thursday, July 30th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ 9 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ಜುಲೈ 29 ರಂದು ನಡೆಯಿತು. ಶ್ರೀ ಪ್ರಶಾಂತ್, ಗಣಿತ ಉಪನ್ಯಾಸಕರು ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜು, ಪುತ್ತೂರು, ಇವರು ಮಾತನಾಡಿ ಹೆತ್ತವರು ಶಿಕ್ಷಕರು, ಆಡಳಿತ ಮಂಡಳಿ, ಮಕ್ಕಳು ಇವು ನಾಲ್ಕು ಶಿಕ್ಷಣ ವ್ಯವಸ್ಥೆಯ ಆಧಾರ ಸ್ತಂಭಗಳು. ಮಕ್ಕಳ ಬೆಳವಣಿಗೆ ಹೆತ್ತವರ ಮನೋಭಾವನೆ ಬದಲಾವಣೆ ಅಗತ್ಯ ಪ್ರೌಢ ಹಂತದಲ್ಲಿ ಮಕ್ಕಳನ್ನು ಸುಲಭವಾಗಿ ತಿದ್ದಿ-ತೀಡಿ ಪರಿಪಕ್ವ ಮಾಡಬಹುದು ಎಂದರು. ಸತೀಶ್ ಕುಮಾರ್ […]

ಆಂಗ್ಲ ಮಾಧ್ಯಮ ಶಾಲೆಯಲ್ಲಿ  BASE ಸಂಸ್ಥೆಯಿಂದ I.I.T. ತರಬೇತಿಯ ಉದ್ಟಾಟನೆ

ಆಂಗ್ಲ ಮಾಧ್ಯಮ ಶಾಲೆಯಲ್ಲಿ BASE ಸಂಸ್ಥೆಯಿಂದ I.I.T. ತರಬೇತಿಯ ಉದ್ಟಾಟನೆ

Tuesday, July 28th, 2015

ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಪಥಮವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ  BASE ಸಂಸ್ಥೆಯಿಂದ I.I.T. ತರಬೇತಿಯ ಉದ್ಟಾಟನೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ “Base” Bangalore ನ ಸಂಸ್ಥೆಯಿಂದ I.I.T. course  Pre-foundation  ತರಬೇತಿಯ ಉದ್ಘಾಟನಾ ಸಮಾರಂಭ ಜುಲೈ 27 ರಂದು ನಡೆಯಿತು. ದೇಶದಲ್ಲಿರುವ ಪ್ರತಿಷ್ಟಿತ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವ ಒಂದು ತರಬೇತಿಯಾಗಿದೆ. ಸೀತಾರಾಮ ಕೇವಳ, ಪ್ರಾಂಶುಪಾಲರು, ವಿದ್ಯಾರಶ್ಮಿ ಸಮೂಹ ಸಂಸ್ಥೆ ಸವಣೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನದ ಪ್ರತಿಕ್ಷಣ, ಪ್ರತಿ ನಿಮಿಷ, ಪ್ರತಿ […]

BASE ಸಂಸ್ಥೆಯಿಂದ I.I.T. ತರಬೇತಿ ಕಾರ್ಯಾಗಾರ

BASE ಸಂಸ್ಥೆಯಿಂದ I.I.T. ತರಬೇತಿ ಕಾರ್ಯಾಗಾರ

Saturday, July 25th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ BASE Bangalore ನ ಸಂಸ್ಥೆಯಿಂದ ಕಾರ್ಯಾಗಾರವು ಜುಲೈ 24 ರಂದು ಪ್ರಾರಂಭಗೊಂಡಿತು. BASE ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚಿತ್ಕಲಾ, ಕು. ಪವಿತ್ರ ಜಯರಾಂ, ಕು. ನಿವೇದಿತಾ ಹಾಗೂ ಶ್ರೀ ಗೌತಮ್ ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಸುಲೇಖ ವರದರಾಜ್ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ರೈ ಸಭಿಕರನ್ನು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. BASE ನ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಶಿಕ್ಷಕಿ […]

8 ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆ

8 ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆ

Saturday, July 25th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ 8 ನೇ ತರಗತಿ ವಿದ್ಯಾರ್ಥಿಗಳ ಮೊದಲ ಅವಧಿಯ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ಜುಲೈ 25 ರಂದು ನಡೆಯಿತು. ಡಾ| ಶೋಭಿತಾ, ಉಪನ್ಯಾಸಕರು ವಿವೇಕಾನಂದ ಬಿ.ಎಡ್.ಕಾಲೇಜು ಪುತ್ತೂರು, ಮಾತನಾಡಿ ಸಮಾಜದಲ್ಲಿ ಅರ್ಥಪೂರ್ಣ ಬದುಕಿಗೆ ಪ್ರೀತಿಯೆ ಮುಖ್ಯ. ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಆದರ್ಶಪ್ರಾಯರಾದಾಗ ನಿಜವಾದ ಶಿಕ್ಷಣ ದೊರೆಯಲು ಸಾಧ್ಯ ಎಂದರು. ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರವಿ ಮುಂಗ್ಲಿಮನೆ, ಅಧ್ಯಕ್ಷರು ಶಿಕ್ಷಕ – ರಕ್ಷಕ ಸಂಘ, […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಕಾರ್ಗಿಲ್ ವಿಜಯೋತ್ಸವದ ದಿನ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಕಾರ್ಗಿಲ್ ವಿಜಯೋತ್ಸವದ ದಿನ

Saturday, July 25th, 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಜುಲೈ 25 ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಬಿ.ವಿ. ಸೂರ್ಯನಾರಾಯಣ ಆಂಗ್ಲ ಭಾಷಾ ಉಪನ್ಯಾಸಕರು, ಸ.ಪ.ಪೂ.ಕಾಲೇಜು ಪುತ್ತೂರು ಇವರು ಮಾತನಡುತ್ತಾ, ಕಾರ್ಗಿಲ್ ಎಂದರೆ ಕೋಟೆಯ ಕೇಂದ್ರ ಸ್ಥಾನ ಎಂದರ್ಥ. ನಾವು ಬೇರೆ ಬೇರೆ ಕಾರಣಗಳಿಗೆ ಕಣ್ಣೀರು ಸುರಿಸುತ್ತೇವೆ. ಆದ್ದರಿಂದ ಇವತ್ತು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದ ನಮ್ಮವರಿಗೆ ಒಂದು ದಿನವಾದರೂ ಅಶ್ರುತರ್ಪಣ ಅರ್ಪಿಸುವುದು ಸೂಕ್ತ ಎಂದರು. ರಾಧಾಕೃಷ್ಣ ರೈ, ಹಿರಿಯ ಶಿಕ್ಷಕರು, ವಿವೇಕಾನಂದ ಆಂಗ್ಲ ಮಾಧ್ಯಮ […]

ವಿವೇಕಾನಂದ ಆಂಗ್ಲ ಮಾಧ್ಯಮದ ಗೈಡ್ಸ್ ಅಂತರಾಷ್ಟ್ರೀಯ ಜಾಂಬೋರಿಗೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮದ ಗೈಡ್ಸ್ ಅಂತರಾಷ್ಟ್ರೀಯ ಜಾಂಬೋರಿಗೆ ಆಯ್ಕೆ

Wednesday, July 22nd, 2015

ಜಪಾನಿನ ಶಿರಾರಹಮದಲ್ಲಿ ಜುಲೈ 28 ರಿಂದ ಆಗೋಸ್ಟ್ 10 ರ ತನಕ ನಡೆಯಲಿರುವ 23 ನೇ ಅಂತರಾಷ್ಟ್ರೀಯ ಜಾಂಬೋರಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ನಿವೇದಿತಾ ಗೈಡ್ಸ್ ಕಂಪೆನಿಯ ಕು| ಅಕ್ಷತಾ ಶೆಟ್ಟಿ.ಬಿ ಮತ್ತು ಕು| ದೀಕ್ಷಾ ಪಾರ್ವತಿ ಪಾಲ್ಗೊಳ್ಳಲಿದ್ದಾರೆ.