ಮಧುಮೇಹ ಮುಕ್ತ ಭಾರತ ಆಂದೋಲನ – ಯೋಗ ಶಿಬಿರ
Saturday, June 27th, 2015ಮಧುಮೇಹ ಮುಕ್ತ ಭಾರತ ಆಂದೋಲನ – ಯೋಗ ಶಿಬಿರವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಮಧುಮೇಹ ಮುಕ್ತ ಭಾರತ ಆಂದೋಲನ – ಯೋಗ ಶಿಬಿರವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 20-6-2015 ನೇ ಶನಿವಾರದಂದು ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಯೋಗ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಜೊತೆಗೆ ಸಭಾ ಕಾರ್ಯಕ್ರಮ ಹಾಗೂ ಯೋಗ ಪ್ರಾತ್ಯಕ್ಷಿಕೆಯ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಗಿರೀಶ್ ಮಳಿ, ನ್ಯಾಯವಾದಿ, ಪುತ್ತೂರು ಇವರು ಇಂದಿನ ದಿನಗಳಲ್ಲಿ ಯೋಗದ ಮಹತ್ವ ಹಾಗೂ ಔಚಿತ್ಯತೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ […]
2014-15 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 13-06-2015 ನೇ ಶನಿವಾರ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಅಭಿನಂದನಾ ಸಭೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ವಂದನಾಶಂಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸತತ ಪ್ರಯತ್ನ, ಅರ್ಪಣಾ ಮನೋಭಾವದಿಂದ ಅಭ್ಯಾಸ ಮಾಡಿದರೆ ಗೆಲುವು ಖಂಡಿತ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳು ಮತ್ತು ಪೋಷಕರು ತಮ್ಮ […]
APPEARED FOR THE EXAMINATION: 200 PASSED IN THE EXAMINATION: 197 DISTINCTION : 118 I CLASS : 71 II CLASS : 07 III CLASS : 01
ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೃಂದದವರು ದಿನಾಂಕ 17-04-2015 ರಂದು ಭಜನಾಸೇವೆ ನಡೆಸಿಕೊಟ್ಟರು. ಬೆಳಿಗ್ಗೆ 7.30 ರಿಂದ 9 ರವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಸೇವೆಯಲ್ಲಿ ಶಾಲಾ ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ, ಸಹಶಿಕ್ಷಕರುಗಳಾದ ಶ್ರೀ ವೆಂಕಟೇಶ್ ಪ್ರಸಾದ್, ಶ್ರೀಮತಿ ಆಶಾ.ಕೆ, ಶ್ರೀಮತಿ ಭಾರತಿ.ಎಸ್.ಎ, ಶ್ರೀಮತಿ ಮಮತಾ.ಆರ್, ಶ್ರೀಮತಿ ನಮಿತ, ಶ್ರೀಮತಿ ರತ್ನಮಾಲಾ, ಕು| ಸತ್ಯಲಕ್ಷ್ಮಿ, ಕು| ರೇಷ್ಮಾ, ಶ್ರೀಮತಿ ಜ್ಯೋತಿ ದಿವಾಕರ್, ಶ್ರೀಮತಿ […]
ಪ್ರಕೃತಿಯ ಮೇಲೆ ಬೀಳುವ ಅಸಮರ್ಪಕ ಒತ್ತಡ ಮಾನವ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ವಿನಿಯೋಗ ಸಾರ್ವತ್ರಿಕ ಪ್ರಗತಿಯನ್ನು ಸಮತೋಲನಗೊಳಿಸುತ್ತದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಅವರು ದಿನಾಂಕ 11-04-2015 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಾ ಮಾತನಾಡುತ್ತಿದ್ದರು. ದೇಶದ ಪ್ರಗತಿಯ ವಿಚಾರ ಬಂದಾಗ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ದೇಶದ ರಕ್ಷಣಾ ಕಾರ್ಯದಲ್ಲಿ ಅನವರತ ಶ್ರಮಿಸುವ ಸೈನಿಕರು ನಮಗೆ ಪ್ರಾತಃಸ್ಮರಣೀಯರು […]
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ರೋಟರ್‍ಯಾಕ್ಟ್ ಕ್ಲಬ್ ಸಿಟಿ ಪುತ್ತೂರು ಇವರು ತಾ. 24-03-2015 ರಂದು ಶಾಲೆಗೆ ಆಗಮಿಸಿ ಸುಜ್ಞಾನ ಪುಸ್ತಕ ಸಪ್ತಾಹಕ್ಕೆ ಹಲವು ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ನೀಡಿದರು. ರೊಟೇರಿಯನ್ ಸುರೇಂದ್ರ ಕಿಣಿ, ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಸಿಟಿ ಇವರು ಮಾತನಾಡುತ್ತಾ ಸಾರ್ವಜನಿಕ ಸಂಸ್ಥೆಗಳಿಗೆ ಮತ್ತು ಶಾಲೆಗಳಿಗೆ ಸಾಮಾನ್ಯವಾಗಿ ಬೇಕಾಗುವ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ನಮ್ಮದು. ಆ ಸದುದ್ದೇಶದಿಂದ ವಿವೇಕಾನಂದದ ಗ್ರಂಥಾಲಯಕ್ಕೆ ಪುಸ್ತಕ ನೀಡಿದ್ದು, ಸಾರ್ವಜನಿಕರಿಗೆ ಅದರ ಸದುಪಯೋಗವಾಗಬೇಕೆಂಬುದು ನಮ್ಮ ಸದಾಶಯ ಎಂದು […]
ಪುತ್ತೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ಅಮಿತ್ ಕುಮಾರ್ ಎಂ, 2014-15 ನೇ ಸಾಲಿನ ರಾಜ್ಯ ಮಟ್ಟದ ಎನ್.ಟಿ.ಎಸ್.ಇ. ಪರೀಕ್ಷೆಯಲ್ಲಿ 44 ನೇ ರ್‍ಯಾಂಕ್ ಪಡೆದಿರುತ್ತಾನೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನವೆಂಬರ್ 2014 ರಲ್ಲಿ ನಡೆದ ಈ ಪರೀಕ್ಷೆಯಲ್ಲಿ ಒಟ್ಟು 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಮಂಗಳೂರು ನಗರ ಹೊರತು ಪಡಿಸಿ ಉತ್ತೀರ್ಣರಾದ ಏಕೈಕ ವಿದ್ಯಾರ್ಥಿಯಾಗಿದ್ದಾನೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (NTSE) ಬೆಂಗಳೂರು ನಡೆಸುವ ಈ ಪರೀಕ್ಷೆಯಲ್ಲಿ […]