QR Code Business Card
ಮಹಾಭಾರತ ಪರೀಕ್ಷೆಯಲ್ಲಿ ಪ್ರತೀಕ್ಷಾಳಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ

ಮಹಾಭಾರತ ಪರೀಕ್ಷೆಯಲ್ಲಿ ಪ್ರತೀಕ್ಷಾಳಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನ

Thursday, March 18th, 2021

ಭಾರತೀಯತೆಯನ್ನು ಭಾವೀ ಪೀಳಿಗೆಯ ಮನದಾಳದಲ್ಲಿ ಬೇರೂರಿಸುವ ಮಹಾನ್‌ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥಾಪನೆಯಾಗಿರುವ ಭಾರತಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇದರ ವತಿಯಿಂದ ಪ್ರತಿ ವರ್ಷ 9ನೇ ತರಗತಿಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಹಾಭಾರತ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷ 2019-20 ರಲ್ಲಿ ನಡೆದ ಈ ಪರೀಕ್ಷೆಯಲ್ಲಿ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ ಎ.ಕೆ. 98 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ಈಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉದ್ಯೋಗಿ ಆನಂದ ಗೌಡ […]

10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯಳಿಗೆ NTSE ಪರೀಕ್ಷೆಯಲ್ಲಿ 20 ನೇ ರ್‍ಯಾಂಕ್

10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯಳಿಗೆ NTSE ಪರೀಕ್ಷೆಯಲ್ಲಿ 20 ನೇ ರ್‍ಯಾಂಕ್

Wednesday, March 10th, 2021

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ ) ವತಿಯಿಂದ 25-01-2021 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಸಲ್ಪಟ್ಟ ರಾಜ್ಯಮಟ್ಟದ N.T.S.E. ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ 10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ. (ಚೇತನ ಸ್ಟುಡಿಯೋದ ಅಶೋಕ ಕುಂಬ್ಳೆ ಹಾಗೂ ಆಶ್ರಯ ಕೋಚಿಂಗ್ ಸೆಂಟರ್ ನ ಮಾಲಕಿ ಶೋಭಾ ದಂಪತಿಗಳ ಪುತ್ರಿ) ರಾಜ್ಯಮಟ್ಟದಲ್ಲಿ 20ನೇ ರ್‍ಯಾಂಕ್ ಪಡೆದುಕೊಂಡಿರುತ್ತಾರೆ. ರಾಷ್ಟ್ರಮಟ್ಟದ ಎರಡನೇ ಹಂತದ ಪರೀಕ್ಷೆಗೆ ಅರ್ಹತೆಯನ್ನು ಪಡೆದಿರುತ್ತಾಳೆ. ರಾಜ್ಯಾದ್ಯಂತ […]

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ಕಾರ್ಯಗಾರ ಆರಂಭ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ಕಾರ್ಯಗಾರ ಆರಂಭ

Monday, March 8th, 2021

ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಒಂದು ವಾರಗಳ ಕಾಲ ನಡೆಯಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ ರೋಬೋಟಿಕ್ ಕಾರ್ಯಗಾರ ದೀಪ ಬೆಳಗುವುದರೊಂದಿಗೆ ಆರಂಭಗೊಂಡಿತು. ಶಾಲೆಯಲ್ಲಿ ಸ್ಥಾಪಿತಗೊಂಡ ಕೇಂದ್ರ ಸರಕಾರದ ಮಹತ್ವಾಕಾಕ್ಷೆಯ ಯೋಜನೆಯಾದ ಅಟಲ್ ಟಿಂಕರಿಂಗ್ ಲ್ಯಾಬ್ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ ಪ್ರಸನ್ನ ಅವರು ಮಾತನಾಡಿ ಇಲೆಕ್ಟ್ರಿಕಲ್ ಸೈನ್ಸ್‌ನಿಂದ ಇಲೆಕ್ಟ್ರಾನಿಕ್ಸ್ ಮುಂದೆ ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹಾಗೂ […]

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನ್ಮಾನ

Friday, March 5th, 2021

ಮಗುವಿನ ಪ್ರತಿಭೆಯನ್ನು ಸಮಾಜ ಗುರುತಿಸಿ, ಗೌರವಿಸಿದಾಗ ಪೋಷಕರು ನಿಜವಾದ ಆನಂದವನ್ನು ಅನುಭವಿಸುತ್ತಾರೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 2019-20 ನೇ ಸಾಲಿನಲ್ಲಿ ಶಿಕ್ಷಣ, ಕ್ರೀಡೆ, ವಿಜ್ಞಾನ, ಸ್ಕೌಟ್ಸ್ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡುತ್ತಿದ್ದರು. ಶಾಲಾ ಹಂತದಲ್ಲಿ ಮಗುವಿನ ನೈಜ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವ ಗುರುಗಳೂ ಕೂಡ ಅಭಿನಂದನೆಗೆ ಅರ್ಹರು ಎಂದು ಅವರು ಹೇಳಿದರು. […]

ಯುವವಿಜ್ಞಾನಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಕು| ಯಶಸ್ವಿ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

ಯುವವಿಜ್ಞಾನಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಕು| ಯಶಸ್ವಿ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

Tuesday, February 23rd, 2021

ಪುತ್ತೂರು: ಕರ್ನಾಟಕ ರಾಜ್ಯವಿಜ್ಞಾನ ಪರಿಷತ್, ದಕ್ಷಿಣಕನ್ನಡ ಜಿಲ್ಲಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಸಹಯೋಗದೊಂದಿಗೆ ಶಿವರಾಮ ಕಾರಂತ ಪ್ರೌಢ ಶಾಲೆಯ ಪುತ್ತೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ 2020 ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ಕು. ಯಶಸ್ವಿ ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ರಾಜ್ಯಮಟ್ಟದ ಸ್ಪರ್ಧೆಯು ಬೆಂಗಳೂರಿನಲ್ಲಿ ನಡೆಯಲಿರುವುದು. ಚಂದನ ವಾಹಿನಿಯ ’ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಭಾಗವಹಿಸುವ […]

ಸಾಮೂಹಿಕ ಸೂರ್ಯನಮಸ್ಕಾರ

ಸಾಮೂಹಿಕ ಸೂರ್ಯನಮಸ್ಕಾರ

Tuesday, February 23rd, 2021

ಕ್ರೀಡಾ ಭಾರತಿ ಪುತ್ತೂರು ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು ವಿವೇಕನಗರ ತೆಂಕಿಲ ಪುತ್ತೂರು ಇದರ ಸಹಯೋಗದಲ್ಲಿ ದಿನಾಂಕ 19-02-2021 ರಂದು ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ್‌ ಅವರು ಮಾತನಾಡಿ ಸೂರ್ಯ ನಮಸ್ಕಾರ ಮಾಡುವುದರಿಂದ ಆಗುವ ಪ್ರಯೋಜನ ಮತ್ತು ರಥಸಪ್ತಮಿಯ ವಿಶೇಷತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ […]

N.C.C. ಘಟಕದ ಆರಂಭ

N.C.C. ಘಟಕದ ಆರಂಭ

Wednesday, February 10th, 2021

N.C.C. ಯ ಮಡಿಕೇರಿ ವಿಭಾಗದ ಮುಖ್ಯಸ್ಥರಾದ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮಾನ್ ನೇತೃತ್ವದಲ್ಲಿ ಲೆ.ಕರ್ನಲ್ ನವದೀಪ್ ಬೇಡಿಯವರನ್ನೊಳಗೊಂಡ ತಂಡ ದಿನಾಂಕ 08.02.2021 ರಂದು ಶಾಲೆಗೆ ಭೇಟಿ ನೀಡಿತು. ಭೌತಿಕ ವ್ಯವಸ್ಥೆಗಳನ್ನು ಪರಿಶೀಲಿಸಿ, ಆಡಳಿತ ಮಂಡಳಿ, ಶಾಲಾ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರ್ನಲ್ ಚೇತನ್ ಧಿಮಾನ್ ಅವರು ಈ ಶೈಕ್ಷಣಿಕ ವರ್ಷದಿಂದಲ್ಲೇ N.C.C ಘಟಕವನ್ನು ಆರಂಭಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. ಭೇಟಿಯ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ […]

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರಿಗೆ ಶಾಲೆಯಲ್ಲಿ ಸನ್ಮಾನ

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರಿಗೆ ಶಾಲೆಯಲ್ಲಿ ಸನ್ಮಾನ

Friday, January 29th, 2021

ದಿನಾಂಕ 27-1-2021 ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರಿಗೆ ಸನ್ಮಾನ  ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಪ್ರಶಸ್ತಿ ಪುರಸ್ಕೃತ ರಾಕೇಶ್‌ಕೃಷ್ಣರನ್ನು ಸನ್ಮಾನಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಮಾತನಾಡಿ, ಇನ್ನೂ ಇದರಲ್ಲೇ ಸಾಧನೆ ಮಾಡಿದರೆ ದೇಶದ ಹಿತ ಕಾಪಾಡುವುದರ ಜೊತೆಗೆ ಜಗತ್ತಿನ ಹಿತ ಕಾಪಾಡಬಹುದು. ಇದು ದೇಶದ ಘನತೆಯನ್ನು ಹೆಚ್ಚಿಸುತ್ತದೆ. ರಾಕೇಶ್‌ಕೃಷ್ಣನ ಸಾಧನೆಗೆ ಬೀಜ ಬಿತ್ತಿದ್ದು ವಿವೇಕಾನಂದ ಸಂಸ್ಥೆ, ಇಲ್ಲಿನ […]

72ನೇ ಗಣರಾಜ್ಯೋತ್ಸವ

72ನೇ ಗಣರಾಜ್ಯೋತ್ಸವ

Wednesday, January 27th, 2021

ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ದೇಶಕ್ಕೆ ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿದಾಗ ಅವರ ಜನ್ಮ ಸಾರ್ಥಕವೆನಿಸುತ್ತದೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ವಸಂತ ಕುಂಟ್ಯಾನ ಹೇಳಿದರು. ಅವರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪದವಿಪೂರ್ವ ಕಾಲೇಜು ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ನಾಲ್ಕೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಸ್ಕೌಟ್  : ನಿಶ್ಚಲ್ ಕೆ ಜೆ Best Performer of Yuva Fit Bit

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಸ್ಕೌಟ್  : ನಿಶ್ಚಲ್ ಕೆ ಜೆ Best Performer of Yuva Fit Bit

Monday, January 25th, 2021

ಭಾರತ ಸ್ಕೌಟ್ & ಗೈಡ್ಸ್ ಸಂಸ್ಥೆಯು ನಮ್ಮ ದೇಶದ ಎಲ್ಲಾ ಸ್ಕೌಟ್ & ಗೈಡ್ಸ್‌ಗಳಿಗೆ ಕೊವಿಡ್ – 19 ಸಂದರ್ಭದಲ್ಲಿ ಮಕ್ಕಳನ್ನು ಚುರುಕುಗೊಳಿಸುವ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನಮ್ಮ ದೇಶ ಕಂಡ ಅಪ್ರತಿಮ ಯುವ ನೇತಾರರಾದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲಾಗಿರುವಾಗ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಯುವಾನ ಸ್ಕೌಟ್ ಚಟುವಟಿಕೆಯಲ್ಲಿ ಯುವ ಟ್ಯಾಲೆಂಟ್ ಹಬ್ 7 ದಿನಗಳ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ೧೦ನೇ ತರಗತಿಯ ರಾಜ್ಯ ಪುರಸ್ಕಾರ ಸ್ಕೌಟ್ ವಿದ್ಯಾರ್ಥಿ […]