QR Code Business Card
ವಿದ್ಯಾರ್ಥಿ ನಾಯಕರ ಆಯ್ಕೆ

ವಿದ್ಯಾರ್ಥಿ ನಾಯಕರ ಆಯ್ಕೆ

Thursday, October 28th, 2021

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಮತದಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿ, 10 ನೇ ತರಗತಿಯ ಆತ್ಮೀಯ ಕಶ್ಯಪ್‌ನನ್ನು ವಿದ್ಯಾರ್ಥಿ ನಾಯಕನಾಗಿಯೂ, 10 ನೇ ತರಗತಿಯ ಕುಮಾರಿ ಇಂದುಶ್ರೀಯನ್ನು ಉಪನಾಯಕಿಯಾಗಿ ಆಯ್ಕೆ ಮಾಡಿದರು. ವಿರೋಧ ಪಕ್ಷದ ನಾಯಕನಾಗಿ 10 ನೇ ತರಗತಿಯ ಚಿನ್ಮಯಕೃಷ್ಣ ಹಾಗೂ ಉಪನಾಯಕನಾಗಿ ಅಭಯ್ ಎಸ್. ರಾವ್, ಕ್ರೀಡಾ ಕಾರ್ಯದರ್ಶಿಯಾಗಿ ಕು. ಅನಘಾ ಕೆ. ಎ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕು. ಮೇಘ ನಾಯಕ್‌ ಆಯ್ಕೆಗೊಂಡರು. […]

ಶಾರದಾ ಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜೆ

ಶಾರದಾ ಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜೆ

Tuesday, October 12th, 2021

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-10-2021, ಮಂಗಳವಾರ ವೇದಮೂರ್ತಿ ಶ್ರೀ ಕಾರ್ತಿಕ್ ಶಾಸ್ತ್ರಿ ಮತ್ತು ಬಳಗದವರು ಶಾರದಾಪೂಜೆ, ಅಕ್ಷರಾಭ್ಯಾಸ ಮತ್ತು ಶಾಲಾ ವಾಹನ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್ ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ನಂತರ ಶಾಲಾ ವಾಹನ ಪೂಜೆಯನ್ನು ನೆರವೇರಿಸಲಾಯಿತು. ನಂತರ ಸುಮಾರು 50 ಪುಟಾಣಿಗಳು ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಶುಭ ಮುಹೂರ್ತವಿರಿಸಿದರು. ಮಕ್ಕಳಿಗೆ ತಿಲಕ ಇಟ್ಟು ಆರತಿ […]

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

Saturday, October 2nd, 2021

ಗಾಂಧೀಜಿಯವರು ಸದಾಚಿರಂಜೀವಿಗಳು, ಪ್ರತಿವರ್ಷ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಚಿರಂಜೀವಿಯಾಗಿದ್ದಾರೆ. ವಿವೇಕಾನಂದರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡವರು ಗಾಂಧೀಜಿಯವರು ಮಾತ್ರ ಎಂದು ಹಿರಿಯ ಸಾಹಿತಿ, ಬರಹಗಾರ ಶ್ರೀ ಲಕ್ಷೀಶ ತೋಳ್ಪಾಡಿ ಹೇಳಿದರು. ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ ಜರುಗಿದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯ ಆಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಗಾಂಧೀಜಿಯವರು ಮಾನವನ ದುರ್ಬಲತೆ ಹೋಗಲಾಡಿಸಬೇಕಾದರೆ ಮನೋಬಲ ಗಟ್ಟಿಯಾಗಿರಬೇಕು, ಯಾವ ವ್ಯಕ್ತಿಗೆ ಇನ್ನೊಬ್ಬರ ನೋವು ಅರ್ಥ ಆಗ್ತದೆ ಅವನು ನಿಜವಾದ ವೈಭವ. ಗಾಂಧೀಜಿಗೆ […]

152 ನೇ ಗಾಂಧಿ ಜಯಂತಿ ಕಾರ್ಯಕ್ರಮ

152 ನೇ ಗಾಂಧಿ ಜಯಂತಿ ಕಾರ್ಯಕ್ರಮ

Saturday, October 2nd, 2021

ದಿನಾಂಕ 2-10-2021 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ 152 ನೇ ಗಾಂಧಿ ಜಯಂತಿ ಕಾರ್ಯಕ್ರಮ ಸರ್ವಧರ್ಮ ಪ್ರಾರ್ಥನೆಯೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ ರೈ, ಹಿರಿಯ ಗೈಡ್‌ ಕ್ಯಾಪ್ಟನ್ ಶ್ರೀಮತಿ ಆಶಾಲತಾ, ಗೈಡ್‌ ಕ್ಯಾಪ್ಟನ್ ಶ್ರೀಮತಿ ಅನುರಾಧ ಎ., ಸ್ಕೌಟ್ ಮಾಸ್ಟರ್ ಶ್ರೀ ಮಹೇಶ್ ವರ್ಮ, ಕಬ್ ಮಾಸ್ಟರ್­ಗಳಾದ ಶ್ರೀಮತಿ ಪುಷ್ಪಲತಾ, ಕುಮಾರಿ ರಮ್ಯಾ, ಸ್ಕೌಟ್‌ಗೈಡ್ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕ ವೃಂದದವರು […]

ಅಂತರಾಷ್ಟ್ರೀಯ ವಿಶ್ವಶಾಂತಿ ದಿನಾಚರಣೆ

ಅಂತರಾಷ್ಟ್ರೀಯ ವಿಶ್ವಶಾಂತಿ ದಿನಾಚರಣೆ

Wednesday, September 22nd, 2021

ದಿನಾಂಕ 22-9-2021 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ’ಅಂತರಾಷ್ಟ್ರೀಯ ವಿಶ್ವಶಾಂತಿ ದಿನಾಚರಣೆ’ಯನ್ನು ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರ ಬದುಕಿನಲ್ಲಿ ಭರವಸೆಯ ಆಶಾಕಿರಣ ತುಂಬುವ ಕಾರ್ಯ ನಮ್ಮದಾಗಬೇಕು ಎಂಬ ಆಶಯದೊಂದಿಗೆ ’ವಿಶ್ವ ರೋಸ್ ದಿನಾಚರಣೆ’ ಯನ್ನು ಜಂಟಿಯಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಗೈಡ್ ಶಿಕ್ಷಕಿ ಶ್ರೀಮತಿ ಅನುರಾಧಾ ಎ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಬ್ ಮಾಸ್ಟರ್ ಶ್ರೀಮತಿ ಪುಷ್ಪಲತಾ ಹಾಗೂ ಕುಮಾರಿ ರಮ್ಯಾ ರವರು ಉಪಸ್ಥಿತರಿದ್ದು, ಶ್ರೀಯುತ ಮಹೇಶ್ ವರ್ಮರವರು ಶಾಂತಿ ದಿನಾಚರಣೆಯ […]

ಕಲಾ ಕೃತಿಗಳ ಪ್ರದರ್ಶನ

ಕಲಾ ಕೃತಿಗಳ ಪ್ರದರ್ಶನ

Monday, September 13th, 2021

ಕೋವಿಡ್ 19 ನಿಂದ ಬಾಧಿತವಾಗಿರುವ ಶೈಕ್ಷಣಿಕ ಕ್ಷೇತ್ರದ ಚಟುವಟಿಕೆಗಳಿಗೆ ಸ್ಫೂರ್ತಿಯನ್ನು ತುಂಬುವ ಪ್ರಯತ್ನವಾಗಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ಚಿತ್ರಕಲಾ ಅಧ್ಯಾಪಕರ ತಂಡ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. 1 ನೇ ತರಗತಿಯಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳು ಚಿತ್ರಕಲೆ, ಕ್ಲೆ ಮಾಡಲಿಂಗ್, ಕ್ರಾಫ್ಟ್ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಯಾರಿಸಿರುವ ಮನಮೋಹಕ ಕಲಾ ಕೃತಿಗಳ ಪ್ರದರ್ಶನವನ್ನು ದಿನಾಂಕ 13-9-2021 ರಂದು ಏರ್ಪಡಿಸಲಾಯಿತು. ಶಾಲಾ ಮುಖ್ಯಗುರುಗಳು ಹಾಗೂ ಅಧ್ಯಾಪಕ […]

ವಿಭಾಗೀಯ ಮಟ್ಟದ ಗ್ರಾಮೀಣ ಐ. ಟಿ. ಕ್ವಿಜ್‌ಗೆ ಆಯ್ಕೆ

ವಿಭಾಗೀಯ ಮಟ್ಟದ ಗ್ರಾಮೀಣ ಐ. ಟಿ. ಕ್ವಿಜ್‌ಗೆ ಆಯ್ಕೆ

Tuesday, September 7th, 2021

ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು, ಇದರಸಹಯೋಗದಲ್ಲಿ ದಿನಾಂಕ 6-9-2021 ರಂದು ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ 2021‌ ಸ್ಪರ್ಧೆಯು ಮಂಗಳೂರಿನ ಕಪಿತಾನಿಯೋ ಪ್ರೌಢ ಶಾಲೆ, ಪಂಪ್‌ವೆಲ್‌ ಇಲ್ಲಿ ನಡೆಯಿತು. ಈ ಸ್ಪರ್ದೆಯಲ್ಲಿ ನಮ್ಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ನಿನಾದ್. ಜಿ. ರೈ (ಬನ್ನೂರು ನಿವಾಸಿ ಶ್ರೀ ಗಣೇಶ್.ರೈ ಮತ್ತು ನಂದಿತಾ.ಜಿ.ರೈ ಇವರ ಪುತ್ರ) ಮತ್ತು 8ನೇ ತರಗತಿಯ ಸಾಕ್ಷಿ ಕೃಷ್ಣ (ತೆಂಕಿಲ ನಿವಾಸಿ ಶ್ರೀ ಕೃಷ್ಣಪ್ಪ […]

75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

Sunday, August 15th, 2021

1857 ರಲ್ಲಿ ಮಂಗಲ್ ಪಾಂಡೆಯಿಂದ ಜ್ವಲಿಸಲ್ಪಟ್ಟ ಕ್ರಾಂತಿಯ ಕಿಡಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳ ಫಲವಾಗಿ ೯೦ವರ್ಷಗಳ ಬಳಿಕ ಸ್ವಾತಂತ್ರ್ಯ ಜ್ವಾಲೆಯಾಗಿ ಜಗತ್ತಿನಲ್ಲಿ ಪ್ರಜ್ವಲಿಸಿದ ಸ್ವಾತಂತ್ರ್ಯ ದೀವಿಗೆಯನ್ನು ಜತನದಿಂದ ಉಳಿಸಬೇಕು. ದೇಶಭಕ್ತರ, ಸೈನಿಕರ ಬಲಿದಾನವನ್ನು ಸದಾ ಸ್ಮರಿಸಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಸೈನಿಕರಾದ ಸುಬೇದಾರ ಸಂಜೀವರವರು ಹೇಳಿದರು. ಅವರು ದಿನಾಂಕ 15-8-2021 ನೇ ರವಿವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ […]

SSLC Toppers

SSLC Toppers

Tuesday, August 10th, 2021

2021 ನೇ ಜುಲೈನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 260 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ತೇರ್ಗಡೆಯಾಗಿರುತ್ತಾರೆ. ಶಾಲೆಯ ವಿದ್ಯಾರ್ಥಿನಿ ಕು. ಯಶ್ವಸಿ ಶೆಟ್ಟಿ.ಎಸ್ (ಶ್ರೀ ಯಶೋಧರ ಎಸ್ ಮತ್ತು ಶ್ರೀಮತಿ ರಶ್ಮಿ ಟಿ.ಎಂ ದಂಪತಿ ಸುಪುತ್ರಿ) ಮತ್ತು ಕು. ಮನಸ್ವಿ ಭಟ್.ಕೆ (ಶ್ರೀ ಕೇಶವರಾಮ. ಕೆ ಮತ್ತು ಶ್ರೀಮತಿ ಶೈಲಜ ಭಟ್‌ ದಂಪತಿ ಸುಪುತ್ರಿ) 623 ಅಂಕಗಳನ್ನು ಹಾಗೂ ಕು. ಆಶ್ರಯ ಪಿ. (ಶ್ರೀ ಅಶೋಕ್‌ ಕುಂಬ್ಳೆ ಮತ್ತು […]

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಶಾಲೆಯ 2 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಶಾಲೆಯ 2 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Monday, August 9th, 2021

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಜಂಟಿ ಆಯೋಗದಲ್ಲಿ ರಾಜ್ಯದಲ್ಲಿ 28 ನೇ ಮಕ್ಕಳ ವಿಜ್ಞಾನ ಸಮಾವೇಶವನ್ನು 10-17 ವರ್ಷ ವಯೋಮಾನದ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿತ್ತು. ಫಲಿತಾಂಶ ಕುರಿತಂತೆ ದಿನಾಂಕ 2-3, ಆಗಸ್ಟ್ 2021 ರಂದು ಕರ್ನಾಟಕ ವಿಜ್ಞಾನ ಪರಿಷತ್ತಿನಲ್ಲಿ ತಜ್ಞ ಮೌಲ್ಯಮಾಪಕರಿಂದ ಯೋಜನಾ ವರದಿಯನ್ನು ಆನ್‌ಲೈನ್ ಮೂಲಕ ಮೌಲ್ಯಮಾಪನ ಮಾಡಿಸಿ ರಾಷ್ಟ್ರಮಟ್ಟಕ್ಕೆ […]