74ನೇ ಸ್ವಾತಂತ್ರ್ಯದಿನಾಚರಣೆಯನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಎ.ವಿ.ನಾರಾಯಣರವರು ನೆರವೇರಿಸಿದರು. ನಂತರ ಮಾತನಾಡಿದ ಅವರು ’ಕೋವಿಡ್-19 ರ ಈ ಸಂದರ್ಭದಲ್ಲಿ ಅತ್ಯಂತ ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಆದರೂ ದೇಶದ ಪ್ರಗತಿಯಲ್ಲಿ ನಾವೆಲ್ಲರೂ ಕೈಜೋಡಿಸುವುದು ಅನಿವಾರ್ಯವಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ನಮ್ಮ ದೇಶ ಮುಂದುವರಿಯಲು ನಾವೆಲ್ಲರೂ ಸರಕಾರಕ್ಕೆ ಸಹಕಾರವನ್ನು ನೀಡಬೇಕು. 1720, 1820, 1920 ನೇ ಇಸವಿಗಳಲ್ಲಿ ಇದೇ ರೀತಿಯ […]
ಒಟ್ಟು ಹಾಜರಾದ ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು: 238 600+: 25 ವಿಶಿಷ್ಟ ಶ್ರೇಣಿ: 99 ಒಟ್ಟು ವಿಶಿಷ್ಟ ಶ್ರೇಣಿ : 25+99= 124 ಪ್ರಥಮ ಶ್ರೇಣಿ: 99 ದ್ವಿತೀಯ ಶ್ರೇಣಿ : 15 ಫಲಿತಾಂಶ – 96%
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ತೆಂಕಿಲ ಪುತ್ತೂರು ಇವುಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್‌ನ ಅಧ್ಯಕ್ಷರಾದ ಪ್ರೋ. ಎ.ವಿ ನಾರಾಯಣರವರು ಮಾತನಾಡಿ ಯೋಗ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಿಂದೆ ಸಾಮೂಹಿಕ ಯೋಗ ದಿನಾಚರಣೆಯನ್ನು ಮಾಡುತ್ತಿದ್ದೆವು. ಆದರೆ ಪ್ರಸ್ತುತ COVID-19 ರ ಪರಿಣಾಮವಾಗಿ ಮನೆಗಳಲ್ಲಿ ಆಚರಿಸಬೇಕೆಂದು ಶ್ರೀಯುತ ನರೇಂದ್ರ ಮೋದಿಜಿಯವರು ಕರೆ ನೀಡಿದ್ದಾರೆ. […]
ದಿನಾಂಕ 14-2-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಇಸ್ಕಾನ್ ಕೃಷ್ಣ ಪ್ರಜ್ಞಾ ಪರೀಕ್ಷೆ ಮತ್ತು ಗೋಲೋಕ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ಇಸ್ಕಾನ್ “ಅಕ್ಷರ ಪಾತ್ರ” ಯೋಜನೆಯ ಮಂಗಳೂರು ವಿಭಾಗದ ಅಧ್ಯಕ್ಷರಾದ ಶ್ರೀ ಕಾರುಣ್ಯ ಸಾಗರದಾಸರು’ ನಮ್ಮ ಸುತ್ತುಮುತ್ತಲಿನ ವಾತಾವರಣದಲ್ಲಿ ನಾವು ಭಗವಂತನನ್ನು ಕಾಣಬೇಕು. ಆಗ ಜೀವನದ ಅಂತಿಮ ಲಕ್ಷ್ಯವಾದ ಮೋಕ್ಷವನ್ನು ಹೊಂದಲು ಸಾಧ್ಯ ಎಂದು ಹೇಳಿದರು.’ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿವೇಕಾನಂದಆಂಗ್ಲ ಮಾಧ್ಯಮ […]
ಪುತ್ತೂರು: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ನವದೆಹಲಿ ಮತ್ತು ಡಿ.ಎಸ್.ಇ.ಆರ್.ಟಿ. ಬೆಂಗಳೂರು ಆಶ್ರಯದಲ್ಲಿ ನಡೆದ ಪ್ರಥಮ ಹಂತದ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್.ಟಿ.ಎಸ್.ಇ) ಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಚೈತನ್ಯ ಎಸ್. ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದು, ಮೇ ತಿಂಗಳಲ್ಲಿ ನಡೆಯಲಿರುವ ದ್ವಿತೀಯ ಹಂತದ ರಾಷ್ಟ್ರ ಮಟ್ಟದ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಇವರು ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್.ರವರ ಸುಪುತ್ರಿ.
2019 ನೇ ನವೆಂಬರ್ 30 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅನ್ವೇಷಣ ರಾಜ್ಯ ಮಟ್ಟದ ಆಗ್ರಿಟಿಂಕರಿಂಗ್ ಫೆಸ್ಟ್‌ನಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಪ್ರಾಯೋಜಕತ್ವಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಸಂವಾದ ಕಾರ್ಯಕ್ರಮ ಫೆಬ್ರವರಿ 6 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಜರುಗಿತು. ಈ ಸಂವಾದ ಕಾರ್ಯಕ್ರಮದಲ್ಲಿ ಲಘು ಉದ್ಯೋಗ ಭಾರತಿ ವತಿಯಿಂದ ಬೆಂಗಳೂರಿನ ಉದ್ಯಮಿಗಳಾದ ಶ್ರೀ ಕೆ ನಾರಾಯಣ ಪ್ರಸನ್ನ, ಶ್ರೀ ನಾಗರಾಜ್ ಮೇಲ್ಕೋಟೆ, ಶ್ರೀ ಗಿರೀಶ್ ವಿ. ಗುಮಾಸ್ತೆ ಹಾಗೂ […]
ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ಮೇಳಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 5 ಪ್ರಾಜೆಕ್ಟ್‌ಗಳು ಭಾಗವಹಿಸಲು ಅರ್ಹತೆ ಪಡೆದು ದಿನಾಂಕ 29 ಮತ್ತು 30 ರಂದು ಪಿಲಿಕುಳ ನಿಸರ್ಗಧಾಮ ಮಂಗಳೂರು ಇಲ್ಲಿ ಪ್ರದರ್ಶನ ನೀಡಿರುತ್ತಾರೆ. ಇದರಲ್ಲಿ 8ನೇ ತರಗತಿಯ ತಮನ್. ಎಸ್. ಎನ್ ಇವರ ನೀರನ್ನು ಹೀರಿಕೊಳ್ಳುವ ಇಂಟರ್ಲಾಕ್ ಪ್ರಾಜೆಕ್ಟ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದು ಮಂಡ್ಯ ಜಿಲ್ಲೆಯಲ್ಲಿ ದಿನಾಂಕ 14 ಮತ್ತು 15 ರಂದು ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿಕೊಂಡಿದ್ದಾರೆ. 8ನೇ ತರಗತಿಯ ಚಿರಾಗ್ ಎಮ್. […]
ದಿನಾಂಕ 1-2-2020 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ರಥಸಪ್ತಮಿ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಏಕಕಾಲದಲ್ಲಿ ಸಾವಿರ ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯ ನಮಸ್ಕಾರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಖಜಾಂಚಿಯಾಗಿರುವ ಶ್ರೀ ಪ್ರಸನ್ನ ಕುಮಾರ್ ವಹಿಸಿದರು, ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಶಾಲಾ ಶಿಕ್ಷಕರಾದ ಶ್ರೀ ಅಭಿಲಾಷ್ ಆಳ್ವಾರವರು ಭಾಗವಹಿಸಿ ರಥಸಪ್ತಮಿಯ ಬಗ್ಗೆ ಮಾಹಿತಿ ನೀಡಿ, ಸೂರ್ಯ ನಮಸ್ಕಾರ ಮಾಡುವುದರಿಂದ ವಿವೇಕ ಜಾಗೃತಗೊಳ್ಳುತ್ತದೆ, ವಿವೇಕದಿಂದ ಆನಂದ ಸಿಗುವುದು ಎಂದು ಈ ಮೂಲಕ ಸೂರ್ಯ […]
ದಿನಾಂಕ 26-1-2020 ನೇ ರವಿವಾರ, ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ 71 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳು, ನರೇಂದ್ರ ಪದವಿಪೂರ್ವಕಾಲೇಜು, ವಿವೇಕಾನಂದ ಬಿ.ಎಡ್. ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಸೇನಾಧಿಕಾರಿ ಕರ್ನಲ್ ಡಿ. ಜಿ. ಭಟ್ ಇವರು ನೆರವೇರಿಸಿ, ಮಾತನಾಡಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಕೆ. ಎಸ್. ಆರ್. ಪಿ. ಕಮಾಂಡೆಂಟ್ ಶ್ರೀ ರಾಮದಾಸ್ ಆಗಮಿಸಿ, ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಸಂದೇಶವನ್ನು ಸಾರಿದರು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ […]