QR Code Business Card
ರಾಷ್ಟ್ರ ಮಟ್ಟದ ಯುವಾನ ಸ್ಕೌಟ್ ನೇರ ಕಾರ್ಯಕ್ರಮಕ್ಕೆ ಆಯ್ಕೆ

ರಾಷ್ಟ್ರ ಮಟ್ಟದ ಯುವಾನ ಸ್ಕೌಟ್ ನೇರ ಕಾರ್ಯಕ್ರಮಕ್ಕೆ ಆಯ್ಕೆ

Tuesday, January 12th, 2021

ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಇದರ ವತಿಯಿಂದ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿರುವ ರಾಷ್ಟೀಯ ಯುವ ದಿನದ ಪ್ರಯುಕ್ತ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯವರು ನಡೆಸಿದ ಯುವಾನ ಸ್ಕೌಟ್ ಚಟುವಟಿಕೆಯಲ್ಲಿ ಯುವ ಟ್ಯಾಲೆಂಟ್ ಹಬ್ 7 ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಪುರಸ್ಕಾರ ಸ್ಕೌಟ್ ನಿಶ್ಚಲ್. ಕೆ. ಜೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಾನದ ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿರುತ್ತಾರೆ. ದಿನಾಂಕ 12-1-2021 ರಂದು ಸಂಜೆ 4 ರಿಂದ 6 ರವರೆಗೆ ನಡೆಯುವ […]

First place in the Essay competition on National Voter’s Day

First place in the Essay competition on National Voter’s Day

Monday, January 11th, 2021

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ 10 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ ಕು. ಯಶಸ್ವಿ ಶೆಟ್ಟಿ, ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಯಶೋಧರ ಶೆಟ್ಟಿ ಮತ್ತು ರಶ್ಮಿ ಶೆಟ್ಟಿ ದಂಪತಿ ಸುಪುತ್ರಿ. Our multi-talented student Kum. Yashaswi Shetty of X std of Vivekananda English Medium School, Tenkila, Puttur, has secured I […]

ಇನ್ಸ್ಪೈರ್ ಅವಾರ್ಡ್ ಮಾನಕ್ – ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇನ್ಸ್ಪೈರ್ ಅವಾರ್ಡ್ ಮಾನಕ್ – ಜಿಲ್ಲಾ ಮಟ್ಟಕ್ಕೆ ಆಯ್ಕೆ

Friday, January 8th, 2021

ಭಾರತ ಸರ್ಕಾರದ ರಾಷ್ಟ್ರೀಯ ನಾವೀನ್ಯತೆ ಪ್ರತಿಷ್ಠಾನ ಪ್ರವರ್ತಿತ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗದೊಂದಿಗೆ ನಡೆಸಲ್ಪಡುವ 2020-21 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಮಾನಕ್ ವಿಜ್ಞಾನ ಮೇಳಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಆದ್ಯ ಸುಲೋಚನ ಮುಳಿಯ ಇವರ “The integrated Railway Intact System ” ಪ್ರಾಜೆಕ್ಟ್ ಜಿಲ್ಲಾ ಮಟ್ಟದ ಸ್ಪರ್ದೆಗೆ ಆಯ್ಕೆಗೊಂಡಿದೆ. ಇವರಿಗೆ ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್ ಬಿ.ಸಿ. ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಯತಿನ್.ಬಿ.ಎಸ್‌

ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಯತಿನ್.ಬಿ.ಎಸ್‌

Thursday, December 17th, 2020

ಆರೆಂಜ್‌ ಗ್ಲೋಬಲ್ ಒಲಿಂಪಿಯಾಡ್ ದೆಹಲಿ ಇವರು 2019-20 ನೇ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಯತಿನ್ ಬಿ.ಎಸ್ ರಾಷ್ಟ್ರ ಮಟ್ಟದ ವಿಜ್ಞಾನ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದು ಪುತ್ತೂರಿಗೆ ಕೀರ್ತಿ ತಂದಿರುತ್ತಾನೆ. ಪ್ರಶಸ್ತಿಯು ಆರೆಂಜ್‌ ಗ್ಲೋಬಲ್ ಒಲಿಂಪಿಯಾಡ್ ಪ್ರವರ್ತಿಸಲ್ಪಟ್ಟ 40,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ. ಈತ ಕಡಬ ನಿವಾಸಿ ನಿವೃತ್ತ ಸೇನಾಧಿಕಾರಿ ಶ್ರೀ ಶೇಷಪ್ಪಗೌಡ ಮತ್ತು ಪುತ್ತೂರಿನ ಮಹಿಳಾ ಪೋಲಿಸಾಧಿಕಾರಿ […]

ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಶ್ರಯ ಪಿ. ಆಯ್ಕೆ

ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಶ್ರಯ ಪಿ. ಆಯ್ಕೆ

Saturday, November 21st, 2020

ಪುತ್ತೂರು : ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಂಗಳೂರು ವತಿಯಿಂದ ನೀಡಲಾಗುವ 2020-21 ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಜಿಲ್ಲಾಮಟ್ಟದ ಅಸಾಧಾರಣ ಪ್ರಶಸ್ತಿಗೆ ಪ್ರಸ್ತುತ ವರ್ಷದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ ಇವರು ಆಯ್ಕೆಯಾಗಿರುತ್ತಾರೆ. ಅಸಾಧಾರಣ ಪ್ರಶಸ್ತಿ ಯೋಜನೆಯಡಿ ನಾವೀನ್ಯತೆ ತಾರ್ಕಿಕ ಸಾಧನೆ, ಕ್ರೀಡೆ ಕಲೆ ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 5 ರಿಂದ 18 ವರ್ಷ ವಯೋಮಾನದ […]

ರೋಟರಿ ಕ್ಲಬ್ ಪುತ್ತೂರು ಪೂರ್ವದ ವತಿಯಿಂದ ಶಾಲೆಗೆ ಥರ್ಮಲ್ ಸ್ಕ್ರೀನಿಂಗ್ ಯೂನಿಟ್

ರೋಟರಿ ಕ್ಲಬ್ ಪುತ್ತೂರು ಪೂರ್ವದ ವತಿಯಿಂದ ಶಾಲೆಗೆ ಥರ್ಮಲ್ ಸ್ಕ್ರೀನಿಂಗ್ ಯೂನಿಟ್

Saturday, October 3rd, 2020

ರೋಟರಿ ಕ್ಲಬ್ ಪುತ್ತೂರು ಪೂರ್ವದ ವತಿಯಿಂದ ಇಂದು ದಿನಾಂಕ 18.09.20 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಥರ್ಮಲ್ ಸ್ಕ್ರೀನಿಂಗ್ ಯೂನಿಟ್­ನ್ನು ರೋಟರಿ ಜಿಲ್ಲೆ 3181ರ ಗವರ್ನರ್ ಎಲೆಕ್ಟ್ ರೋ. ರವೀಂದ್ರ ಭಟ್ ಮತ್ತು ಗವರ್ನರ್ ನೊಮಿನಿ ರೋ. ಪ್ರಕಾಶ್ ಕಾರಂತ್ ರವರ ಸಮ್ಮುಖದಲ್ಲಿ ಪಾಸ್ಟ್ AG. ರೋ. ಪಿ ಎಚ್ ಎಫ್ ಕೆ. ವಿಶ್ವಾಸ್ ಶೆಣೈರವರ ಮುಖಂತರ ಪ್ರಸಿಡೆಂಟ್ ರೋ. ಕೃಷ್ಣನಾರಾಯಣ ಮುಳಿಯರವರ ಉಪಸ್ಥಿತಿ ಯಲ್ಲಿ ಶಾಲೆಯ ಮುಖ್ಯ ಗುರು ಶ್ರೀ ಸತೀಶ್ ರೈ ರವರಿಗೆ […]

151 ನೇ ಗಾಂಧಿ ಜಯಂತಿ ಆಚರಣೆ

151 ನೇ ಗಾಂಧಿ ಜಯಂತಿ ಆಚರಣೆ

Friday, October 2nd, 2020

ದಿನಾಂಕ : 2-10-2020 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸಲಾಯಿತು. ಪತ್ರಕರ್ತರಾದ ಪ್ರವೀಣ್ ಬೊಳ್ವಾರ್ ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ಸತೀಶ್‌ ಕುಮಾರ್‌ ರೈಯವರು ರವರು ಉಪಸ್ಥಿತರಿದ್ದರು. ಶಿಕ್ಷಕಿಯರು “ರಘುಪತಿ ರಾಘವ ರಾಜಾರಾಮ್” ಹಾಡನ್ನು ಹಾಡಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಮಾರಿ ನೇಹಾ ಭಟ್ ಅವರಿಗೆ ಲೋಕಸಭಾ ಅಧ್ಯಕ್ಷರಿಂದ ಶ್ಲಾಘನೆ

ಕುಮಾರಿ ನೇಹಾ ಭಟ್ ಅವರಿಗೆ ಲೋಕಸಭಾ ಅಧ್ಯಕ್ಷರಿಂದ ಶ್ಲಾಘನೆ

Saturday, September 26th, 2020

79ನೇ CSIR ಫೌಂಡೇಶನ್‌ ಡೇ 2020 ರ ಅಂಗವಾಗಿ ನಡೆದ ರಾಷ್ಟ್ರಮಟ್ಟದ ನೂತನ ವಿಜ್ಞಾನಮಾದರಿಗಳ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ನೇಹಾ ಭಟ್ ಇವರು ತೃತೀಯಸ್ಥಾನ ಪಡೆದು ರೂ. 30,000/- ಗಳ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು 26.09.2020 ರಂದು webcast ಮೂಲಕ ನಡೆದಿರುತ್ತದೆ. ಇವರು ರಚಿಸಿರುವ Eco-friendly Agri Sprayer ಎಂಬ ಯಂತ್ರವು ರಾಷ್ಟ್ರಮಟ್ಟದಲ್ಲಿ ತೃತೀಯಸ್ಥಾನ ಪಡೆದಿರುತ್ತದೆ. ಕುಮಾರಿ ನೇಹಾ ಭಟ್-ಶ್ರೀಮತಿ ಮೀರಾ ಮುರಳಿ ಹಾಗೂ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನೇಹಾ ಭಟ್ ರಾಷ್ಟ್ರಮಟ್ಟದಲ್ಲಿ ತೃತೀಯ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನೇಹಾ ಭಟ್ ರಾಷ್ಟ್ರಮಟ್ಟದಲ್ಲಿ ತೃತೀಯ

Thursday, September 10th, 2020

ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ನೇಹಾಭಟ್ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪದೆದಿರುತ್ತಾರೆ. ಇವರು ರಚಿಸಿದ eco- friendly agri sprayer ಎಂಬ ಯಂತ್ರವು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದು ಅಂತಿಮ ಸುತ್ತಿನಲ್ಲಿ ತೃತೀಯ ಸ್ಥಾನ ಪದೆದಿರುತ್ತದೆ. ಪ್ರಶಸ್ತಿಯು ಮೂವತ್ತು ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹೊಂದಿರುತ್ತದೆ. ಇವರು 2019 ನವೆಂಬರ್‌ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ […]

CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Wednesday, August 26th, 2020

CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ದಿನಾಂಕ 26.08.2020 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಮಗುವಿನ ಪ್ರಾಥಮಿಕ ಬೆಳವಣಿಗೆ ಅತ್ಯಗತ್ಯ. ಅಂತಹ ಪ್ರಕ್ರಿಯೆಗಳು ಶಾಲಾ ಹಂತದಲ್ಲಿ ಸಿಕ್ಕಿದಾಗ ಆ ಮಗು ಭವಿಷ್ಯದ ಸತ್ಪ್ರಜೆಯಾಗಲು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಶ್ರೀ ರವೀಂದ್ರ ಪಿ. ಹೇಳಿದರು. ಅವರು CET ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ತೋರಿದ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ […]