
ಕನ್ನಡ ರಾಜ್ಯೋತ್ಸವ ಸಂಭ್ರಮ
Sunday, November 3rd, 2019ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 1-11-2019 ನೇ ಶುಕ್ರವಾರ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಮತ್ತು ಇನ್ನರ್ ವೀಲ್ ಕ್ಲಬ್, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಗೈಯುವುದರೊಂದಿಗೆ ವಿಜೃಂಭಣೆಯಿಂದ ನಡೆಯಿತು. ಕನ್ನಡ ರಾಜ್ಯೋತ್ಸವವು ಎಲ್ಲರಲ್ಲಿ ಒಗ್ಗಟ್ಟನ್ನು ತರಲಿ. ಕನ್ನಡ ಭಾಷಾಭಿಮಾನವು ವಿದ್ಯಾರ್ಥಿಗಳಲ್ಲಿ ಹಾಗೂ ನಮ್ಮೆಲ್ಲರಲ್ಲಿಯೂ ಇನ್ನೂ ಹೆಚ್ಚು ಬೆಳೆಯಲಿ. ಶಾಲೆಯು ಉನ್ನತೋನ್ನತ ಅಭಿವೃದ್ಧಿಯನ್ನು ಹೊಂದಲಿ ಎಂದು ಪುತ್ತೂರಿನ ಇನ್ನರ್ ವೀಲ್‌ಕ್ಲಬ್‌ನ ಅಧ್ಯಕ್ಷೆ […]