QR Code Business Card
ಕಲೋತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ

ಕಲೋತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ

Friday, September 27th, 2019

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಕಲೋತ್ಸವದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.

ದೇಶಭಕ್ತಿ ಗೀತಗಾಯನ ಸ್ಪರ್ಧೆ : ಕಬ್‌ ಅದೈತ್‌ ಕಜೆಗೆ ದ್ವಿತೀಯ ಸ್ಥಾನ

ದೇಶಭಕ್ತಿ ಗೀತಗಾಯನ ಸ್ಪರ್ಧೆ : ಕಬ್‌ ಅದೈತ್‌ ಕಜೆಗೆ ದ್ವಿತೀಯ ಸ್ಥಾನ

Wednesday, September 18th, 2019

ತಾ. 18-9-2019 ರಂದು ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಭವನದಲ್ಲಿ ನಡೆದ ಜಿಲ್ಲಾಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ಕಬ್‌ ವಿದ್ಯಾರ್ಥಿ ಅದೈತ್‌ ಕಜೆ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ಶ್ರೀ ಕಿರಣ್‌ ಕಜೆ ಮತ್ತು ಶ್ರೀಮತಿ ವೀಣಾ ಕಜೆ ಇವರ ಸುಪುತ್ರ ಹಾಗೂ ಇವನು ಪುತ್ತೂರು ಸ್ಥಳೀಯ ಸಂಸ್ಥೆಯನ್ನು ಪ್ರತಿನಿಧಿಸಿರುತ್ತಾನೆ ಎಂದು ಶಾಲಾ ಮುಖ್ಯ ಗುರುಗಳಾದ ಶ್ರೀಯುತ ಸತೀಶ್‌ಕುಮಾರ್‌ ರೈ ತಿಳಿಸಿರುತ್ತಾರೆ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ - ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

Monday, September 16th, 2019

ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇವರ ಜಂಟಿ ಆಶ್ರಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿಯೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿಜೇತ ವಿದ್ಯಾರ್ಥಿಗಳ ವಿವರ :- ಜನದಗೀತೆಯಲ್ಲಿ ಅಂಜನಾ (ಪ್ರಥಮ), ಭಾವಗೀತೆಯಲ್ಲಿ ಮೇಧಾ ಅಡಿಗ (ಪ್ರಥಮ), ಮರಾಠಿ ಭಾಷಣದಲ್ಲಿ ಸಾಕ್ಷಿ (ಪ್ರಥಮ), ವೈಯಕ್ತಿಕ ಯಕ್ಷಗಾನದಲ್ಲಿ ಪ್ರದೀಪಕೃಷ್ಣ (ಪ್ರಥಮ), ಇಂಗ್ಲಿಷ್ ಭಾಷಣದಲ್ಲಿ ಕನ್ಯಾ ಶೆಟ್ಟಿ […]

ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Saturday, September 14th, 2019

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ ಮಣಿಕ್ಕರ ಇದರ ನೇತೃತ್ವದಲ್ಲಿ ಸೆಪ್ಟೆಂಬರ್ 12 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಬಾಲಕರ ತಂಡ ಭಾಗವಹಿಸಿ ಪ್ರಥಮಸ್ಥಾನ ಪಡೆದು ಮಂಗಳೂರಿನಲ್ಲಿ ಸೆಪ್ಟೆಂಬರ್ 20 ರಂದು ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಪ್ರಣವ್ ಎಸ್., ನಿತೀಶ್  ಎಸ್., ರಜನೀಶ್, ಆಕಾಶ್ ಕೆ. ಆರ್., ಸುಶಾಂತ್ ಬಿ.ಎಸ್., ಲಕ್ಷ್ಮೀಶ್ ಕೆ.ಜಿ., ಸಾತ್ವಿಕ್ ಪಿ. ಎಲ್., […]

INSEF -Regional Science Fair ನಲ್ಲಿ ಪ್ರಶಸ್ತಿ

INSEF -Regional Science Fair ನಲ್ಲಿ ಪ್ರಶಸ್ತಿ

Saturday, September 14th, 2019

Science Society of India ನಡೆಸುವ INSEF ವಿಜ್ಞಾನ ಮೇಳಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ಪ್ರಾಜೆಕ್ಟ್‌ಗಳು ಆಯ್ಕೆಗೊಂಡಿದ್ದು, ಮೂಡುಬಿದ್ರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ದಿನಾಂಕ 14-09-2019 ರಂದು ರಾಜ್ಯಮಟ್ಟದ ಸ್ಪರ್ಧೆ ನಡೆಯಿತು. ಇದರಲ್ಲಿ 3 ಪ್ರಾಜೆಕ್ಟ್‌ಗಳು ಪ್ರಶಸ್ತಿ ಪಡೆದಿದ್ದು, ಅನ್ವಿತ್‌ ಎನ್. 7 ನೇ ತರಗತಿ ತಯಾರಿಸಿದ A Novel Product By Saloon Waste (Hair) To Increase Soil Fertility -KeshaSatva ಸಂಶೋಧನಾತ್ಮಕ ಪ್ರಾಜೆಕ್ಟ್‌ಗೆ ದ್ವಿತೀಯ ಪ್ರಶಸ್ತಿ, ವರ್ಷಾ ಕೆ. 9ನೇ ತರಗತಿ […]

ಪ್ರತಿಭಾಕಾರಂಜಿ-ಕಿರಿಯ

ಪ್ರತಿಭಾಕಾರಂಜಿ-ಕಿರಿಯ

Friday, September 13th, 2019

ಸಾರ್ವಜನಿಕ ಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ವತಿಯಿಂದ ಮಾಯಿದೆ ದೇವುಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರು ಇಲ್ಲಿ 2019-20 ರ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯು ಸೆಪ್ಟಂಬರ್ 9 ರಂದು ಜರುಗಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಿಹಿರ್ ಭಟ್‌ – ಇಂಗ್ಲೀಷ್‌ ಕಂಠ ಪಾಠ, ಕೌಶಿಕ್ ಬಿ. – ಮರಾಠಿ ಕಂಠ ಪಾಠ, ಅಸ್ನಾ-ಉರ್ದುಕಂಠ […]

ಪ್ರತಿಭಾಕಾರಂಜಿ - ಹಿರಿಯ ಪ್ರಾಥಮಿಕ

ಪ್ರತಿಭಾಕಾರಂಜಿ – ಹಿರಿಯ ಪ್ರಾಥಮಿಕ

Friday, September 13th, 2019

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ವತಿಯಿಂದ ಮಾಯಿದೆ ದೇವುಸ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿ ದಿನಾಂಕ 2019-20 ರ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯು ಸೆಪ್ಟೆಂಬರ್ 9ರಂದು ಜರುಗಿತ್ತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತನ್ವಿ ಶೆಣೈ ಇಂಗ್ಲೀಷ್‌ ಕಂಠಪಾಠ, ಮಹಿಮಾ ಸಿ ಕರಂಡೆ ಮರಾಠಿ ಕಂಠಪಾಠ, ಧನ್ವಿತಾ ಕೆ.ಎಸ್‌. ತೆಲುಗು ಕಂಠಪಾಠ, […]

ದಂತ ವೈದ್ಯಕೀಯ ಶಿಬಿರ

ದಂತ ವೈದ್ಯಕೀಯ ಶಿಬಿರ

Saturday, September 7th, 2019

ದಿನಾಂಕ 3-9-2019 ನೇ ಮಂಗಳವಾರದಂದು ನಿಟ್ಟೆ ಎ.ಬಿ ಶೆಟ್ಟಿ ಮೊಮೊರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್, ರೋಟರಿ ಕ್ಲಬ್ ಪುತ್ತೂರು ಪೂರ್ವ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ದ.ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2 ದಿನಗಳ ದಂತ ವೈದ್ಯಕೀಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್, ಕಲ್ಲಡ್ಕರವರು ಹಲ್ಲುಗಳು […]

ವಿಜ್ಞಾನ ಮೇಳದಲ್ಲಿ ವಿವಿಧ ಪ್ರಶಸ್ತಿ - ರಾಜ್ಯ ಮಟ್ಟಕ್ಕೆ ಆಯ್ಕೆ

ವಿಜ್ಞಾನ ಮೇಳದಲ್ಲಿ ವಿವಿಧ ಪ್ರಶಸ್ತಿ – ರಾಜ್ಯ ಮಟ್ಟಕ್ಕೆ ಆಯ್ಕೆ

Saturday, September 7th, 2019

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನದ ಘಟಕ ನಡೆಸುವ ವಿದ್ಯಾಭಾರತಿ ಕರ್ನಾಟಕದ ಸಹಯೊಗದೊಂದಿಗೆ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸೆಪ್ಟಂಬರ್ 7 ರಂದು ನಡೆದ ಜಿಲ್ಲಾ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಶಿಶು ವರ್ಗ ವಿಭಾಗ- ವಿಜ್ಞಾನ ಪ್ರದರ್ಶನದಲ್ಲಿ ಮಿಹಿರ್ ಭಟ್ 4 ನೇ ತರಗತಿ ದ್ವಿತೀಯ, ಪ್ರಜ್ವಲ್ ವಿ.ಬಿ. ತೃತೀಯ, ವಿಜ್ಞಾನ ಸಂಶೋಧನಾತ್ಮಕ ವಿಷಯದಲ್ಲಿ ಸಾರ್ಥಕ್ ಕೆ. ಸಿ. ಪ್ರಥಮ, ವೈದಿಕ ಗಣಿತ […]

ಪುತ್ತೂರು ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ  ಪ್ರಥಮ ಸ್ಥಾನ

ಪುತ್ತೂರು ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ  ಪ್ರಥಮ ಸ್ಥಾನ

Saturday, August 31st, 2019

ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸ.ಹಿ.ಪ್ರಾ.ಶಾಲೆ, ನೆಲ್ಲಿಕಟ್ಟೆ, ಪುತ್ತೂರು ಇದರ ವತಿಯಿಂದ ಆಗಸ್ಟ್ 29 ರಂದು ನೆಲ್ಲಿಕಟ್ಟೆ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟದ ಬಾಲಕರ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇವರು ಸಪ್ಟೆಂಬರ್ 3 ರಂದು ಸರಿಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಡ್ಯದಲ್ಲಿ ನಡೆಯುವ ತಾಲೂಕು ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಆಶಿಶ್ […]