QR Code Business Card
ಕು. ಯಶಸ್ವಿ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕು. ಯಶಸ್ವಿ ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

Friday, August 30th, 2019

ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಡಯಟ್ ಮಂಗಳೂರು, ವತಿಯಿಂದ ಡಯಟ್, ಮಂಗಳೂರು ಇಲ್ಲಿ ದಿನಾಂಕ 30-08-2019 ರಂದು ನಡೆದ ಜಿಲ್ಲಾಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯಾದ ಕು.ಯಶಸ್ವಿ ಶೆಟ್ಟಿ, 9ನೇ ತರಗತಿ, [ನಿವೃತ್ತ ಯೋಧ ಶ್ರೀ ಯಶೋಧರ ಶೆಟ್ಟಿ ಮತ್ತು ಶ್ರೀಮತಿ ರಶ್ಮಿ ಶೆಟ್ಟಿಯವರ ಪುತ್ರಿ] ಇವರು Periodic Table of Chemical element – Impact on human Welfare (ಆವರ್ತಕ ಕೋಷ್ಟಕ ರಾಸಾಯನಿಕ ಧಾತುಗಳು-ಮನುಕುಲದ ಮೇಲಿನ ಪ್ರಭಾವ) […]

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಶಾಲೆಗೆ ಸಮಗ್ರ ಪ್ರಶಸ್ತಿ - ದ್ವಿತೀಯ ಸ್ಥಾನ

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಶಾಲೆಗೆ ಸಮಗ್ರ ಪ್ರಶಸ್ತಿ – ದ್ವಿತೀಯ ಸ್ಥಾನ

Tuesday, August 27th, 2019

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು ಹಾಗೂ ಸರಕಾರಿ ಮಾದರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಇಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯು ದಿನಾಂಕ 27-08-2019 ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದಿರುತ್ತಾರೆ. 17ರ ವಯೋಮಾನದ ಬಾಲಕರ ಗುಂಪು ಸ್ಪರ್ಧೆಯಲ್ಲಿ ನಿಶ್ಚಲ್ ಕೆ.ಜೆ, 9ನೇ […]

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

Tuesday, August 27th, 2019

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಪುತ್ತೂರು ಮತ್ತು ಸೈಂಟ್‌ ಆಂಟ್ಸ್‌ಆಂಗ್ಲ ಮಾಧ್ಯಮ ಶಾಲೆ, ಕಡಬ ಇಲ್ಲಿ ಅಗಸ್ಟ್ 16 ಮತ್ತು 17 ರಂದು ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ 17 ರ ವಯೋಮಾನದ ಬಾಲಕರ ವಿಭಾಗದಲ್ಲಿ ನೂತನ್ ಬಿ, 10ನೇ (ಶ್ರೀ ವಸಂತಗೌಡ ಮತ್ತು ಶ್ರೀಮತಿ ಕೆ ಚಂದ್ರಾವತಿ ಇವರ ಪುತ್ರ), ಪ್ರಣವ್‌ಎಸ್, 10 ನೇ […]

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ

Monday, August 26th, 2019

ತಾ. 26-08-2019  ರಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸುದಾನ ವಸತಿಯುತ ಶಾಲೆ ಇದರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳಿಸಿರುತ್ತಾರೆ. ಪ್ರಾಪ್ತಿ [8th]-ದ್ವಿತೀಯ ಸ್ಥಾನ [ಬೆಳಿಯೂರುಕಟ್ಟೆ ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸೀತಾರಾಮ ಗೌಡರ ಸುಪುತ್ರಿ], ಸಿಂಧೂರ [10th] – ದ್ವಿತೀಯ ಸ್ಥಾನ, [ಪುತ್ತೂರು ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ನವೀನ್ ಕುಮಾರ್ […]

ವಿಜ್ಞಾನ ನಾಟಕದಲ್ಲಿ ದ್ವಿತೀಯ ಪ್ರಶಸ್ತಿ

ವಿಜ್ಞಾನ ನಾಟಕದಲ್ಲಿ ದ್ವಿತೀಯ ಪ್ರಶಸ್ತಿ

Monday, August 26th, 2019

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ವಲಯ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯು ದಿನಾಂಕ 26-08-2019 ರಂದು ಪುತ್ತೂರಿನ ಫಿಲೋಮಿನಾ ಪ್ರೌಢಶಾಲೆಯಲ್ಲಿ ಪ್ರದರ್ಶನಗೊಂಡಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿಗಳಾದ ಶರ್ವಾಣಿ, ಸಾರಿಕ, ವಿಂದ್ಯಾ ಕಾರಂತ್ 8ನೇ ತರಗತಿ ಮತ್ತು ಆಶ್ರಯ, ವರ್ಷ, ಭೂಮಿಶ್ರೀ, ಋದ್ಧಿ, ಅದಿತಿಶಂಕರಿ 9ನೇ ತರಗತಿ ಇವರುಗಳು ಭಾಗವಹಿಸಿದ್ದು, ದ್ವಿತೀಯ ಸ್ಥಾನವನ್ನು ಪಡೆದಿದ್ದು ಇವರಿಗೆ ವಿಜ್ಞಾನ ಶಿಕ್ಷಕರಾದ ರಾಜಶೇಖರ್ ಮತ್ತು ಶಾರದ ಶೆಟ್ಟಿ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ವಿಜ್ಞಾನ ವಿಚಾರಗೋಷ್ಠಿ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿಜ್ಞಾನ ವಿಚಾರಗೋಷ್ಠಿ : ಜಿಲ್ಲಾ ಮಟ್ಟಕ್ಕೆ ಆಯ್ಕೆ

Saturday, August 24th, 2019

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಡಾ.ಶಿವರಾಮ ಕಾರಂತ ಪ್ರೌಢ ಶಾಲೆ – ನೆಲ್ಲಿಕಟ್ಟೆಯಲ್ಲಿ ದಿನಾಂಕ 24-08-2019 ರಂದು ನಡೆದ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯಾದ ಕು. ಯಶಸ್ವಿ ಶೆಟ್ಟಿ (9ನೇ ತರಗತಿ) ಇವರು Periodic Table of Chemical element – Impact on human Welfare (ಆವರ್ತಕ ಕೋಷ್ಟಕ ರಾಸಾಯನಿಕ ಧಾತುಗಳು-ಮನುಕುಲದ ಮೇಲಿನ ಪ್ರಭಾವ) ಎಂಬ ವಿಷಯದಲ್ಲಿ ವಿಚಾರ ಮಂಡಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ […]

ರಾಜ್ಯ ಮಟ್ಟದ ಯೋಗ ಸ್ಪರ್ಧೆ

ರಾಜ್ಯ ಮಟ್ಟದ ಯೋಗ ಸ್ಪರ್ಧೆ

Saturday, August 24th, 2019

ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಯೋಗ ಸ್ಪರ್ಧೆಯು ದಿನಾಂಕ ಅಗಸ್ಟ್ 9,10  ಮತ್ತು 11 ರಂದು ಜೈಗೋಪಾಲ್‌ ಗಾರೋಡಿ ಯಾರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರಿನಲ್ಲಿ ನಡೆಯಿತು. ನಮ್ಮ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಗಳಿಸಿರುತ್ತಾರೆ. ಮನ್ವಿತ್, 9ನೇ ತರಗತಿ [ಎನ್‌. ರಮೇಶ್‌ಗೌಡ, ಕ್ಯಾಂಪ್ಕೋ ಚೊಕ್ಲೇಟ್ ಫ್ಯಾಕ್ಟರಿ ಉದ್ಯಮಿ ಇವರ ಪುತ್ರ] – ಕಿಶೋರ ವರ್ಗದ ರಿಧಮಿಕ್ (Rhythmic) ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾನೆ. ನಿಶ್ಚಲ್ (ಜನಾರ್ಧನ ಕೆ. ಬಿ., ಜಿಲ್ಲಾ ಪಂಛಾಯತ್ ಸದಸ್ಯರು) ವಿದ್ಯಾಭಾರತಿ […]

ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

Saturday, August 24th, 2019

ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ದಿನಾಂಕ ಅಗಸ್ಟ್ 9,10 ಮತ್ತು 11 ರಂದು ಜೈಗೋಪಾಲ್‌ ಗಾರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರಿನಲ್ಲಿ ನಡೆಯಿತು. ನಮ್ಮ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳಿಸಿರುತ್ತಾರೆ. ಪುಣ್ಯ ಆರ್. ಯನ್. 8ನೇ ತರಗತಿ [ರಾಧಾಕೃಷ್ಣ ಬಿ. ನಂದಿಲ, ಅನುಭವ್‌ ಕನ್‌ಸ್ಟ್ರಕ್ಷನ್‌ ಇವರ ಪುತ್ರಿ] – ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಲ ವರ್ಗದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, (ವಿದ್ಯಾಭಾರತಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ). ಪ್ರತೀಕ್ಷಾ, 9ನೇ ತರಗತಿ [ಆನಂದ ಕೆ., […]

ಅಡ್ವಾನ್ಸ್ಡ್ ಚೆಸ್‌ ತರಬೇತಿ ಕಾರ್ಯಾಗಾರ

ಅಡ್ವಾನ್ಸ್ಡ್ ಚೆಸ್‌ ತರಬೇತಿ ಕಾರ್ಯಾಗಾರ

Thursday, August 22nd, 2019

ದಿನಾಂಕ 22-08-2019 ನೇ ಗುರುವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಡ್ವಾನ್ಸ್ಡ್ ಚೆಸ್‌ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಈ ತರಬೇತಿ ಕಾರ್ಯಾಗಾರವನ್ನು ಶಾಲಾ ಪೋಷಕರಾದ ಡಾ. ಮಹಾಲಿಂಗೇಶ್ವರ ಪ್ರಸಾದ್‌ರವರು ಉದ್ಘಾಟಿಸಿ, ಕ್ರೀಡೆಯು ಮಾನವನ ದೈಹಿಕ ಮಾನಸಿಕ ಅಭಿವೃದ್ಧಿಗೆ ಪೂರಕವಾಗಿರಬೇಕು. ಆ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ಹಲವಾರು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳ ಯೋಚನೆ ಮತ್ತು ಜ್ಞಾಪನ ಶಕ್ತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುನೈಟೆಡ್‌ ಕರ್ನಾಟಕ ಚೆಸ್ ಅಸೊಸಿಯೇಶನ್‌ನ ಚಿಫ್‌ […]

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ : ವಿಭಾಗೀಯ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ : ವಿಭಾಗೀಯ ಮಟ್ಟಕ್ಕೆ ಆಯ್ಕೆ

Thursday, August 22nd, 2019

ದಿನಾಂಕ 22-08-2019 ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಳ್ತಂಗಡಿ ಮತ್ತು ಸೆಕ್ರೆಡ್ ಹಾರ್ಟ್ ಹೈಸ್ಕೂಲ್ ಮಡಂತ್ಯಾರ್, ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ನಡೆದಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಪೂರ್ವ, 7ನೇ […]