QR Code Business Card
ರಸಪ್ರಶ್ನೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮಕ್ಕೆ  ಪ್ರಶಸ್ತಿ

ರಸಪ್ರಶ್ನೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮಕ್ಕೆ  ಪ್ರಶಸ್ತಿ

Saturday, December 27th, 2014

ಪುತ್ತೂರು ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಕೆ ಉಪನಿರ್ದೇಶಕರ ಕಛೇರಿ ಮಂಗಳೂರು ಇವರು ಅಯೋಜಿಸಿದ ಜಿಲ್ಲಾ ಮಟ್ಟದ ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಅನ್ವಿತ್.ರೈ ಮತ್ತು ಸಚಿನ್ ರೈ ತೃತೀಯ ಬಹುಮಾನ ಪಡೆದಿದ್ದಾರೆ. ಇವರು ದಿನಾಂಕ 26-12-2014 ರಂದು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾಗಿದ್ದರು ಎಂದು ಶಾಲಾ ಮುಖ್ಯಗುರುಗಳು ತಿಳಿಸಿದ್ದಾರೆ.

ಚದುರಂಗ : ರಾಷ್ಟ್ರಮಟ್ಟಕ್ಕೆ ಆಯ್ಕೆ

ಚದುರಂಗ : ರಾಷ್ಟ್ರಮಟ್ಟಕ್ಕೆ ಆಯ್ಕೆ

Tuesday, December 16th, 2014

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಇನ್‌ಫಂಟ್ ಜೀಸಸ್ ಪ್ರೌಢಶಾಲೆ ರಾಯಚೂರು ಇದರ ಸಹಯೋಗದಲ್ಲಿ ದಿನಾಂಕ 12-12-2014 ರಿಂದ 15-12-2014 ರವರೆಗೆ ರಾಯಚೂರಿನಲ್ಲಿ ನಡೆದ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಶಶಾಂಕ.ಎಸ್.ಎಲ್ -ಪ್ರಥಮ ಸ್ಥಾನ ಮತ್ತು ೭ನೇ ತರಗತಿಯ ಶ್ರೀದೇವಿ ಕೋಟೆ 5ನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯಗುರುಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನ್ಯಾಷನಲ್ ಚಿಲ್ಡ್ರನ್ಸ್ ಸೈನ್ಸ್ ಕಾಂಗ್ರೆಸ್-2014 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

ನ್ಯಾಷನಲ್ ಚಿಲ್ಡ್ರನ್ಸ್ ಸೈನ್ಸ್ ಕಾಂಗ್ರೆಸ್-2014 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

Sunday, December 14th, 2014

ಸಾರ್ವಜನಿಕ ಶಿಕ್ಷಣ ಇಲಾಖೆ, ಬೀದರ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದೊಂದಿಗೆ ದಿನಾಂಕ 10-12-2014 ರಿಂದ 12-12-2014 ರವರೆಗೆ ಅಕ್ಕಮಹಾದೇವಿ ಮಹಿಳಾ ಕಾಲೇಜು, ಬೀದರ್‌ನಲ್ಲಿ ನಡೆದ ರಾಜ್ಯಮಟ್ಟದ ನ್ಯಾಷನಲ್ ಚಿಲ್ಡ್ರನ್ಸ್ ಸೈನ್ಸ್ ಕಾಂಗ್ರೆಸ್-2014 ಯೋಜನಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸೀನಿಯರ್ ವಿಭಾಗದಲ್ಲಿ ಹರ್ಷ, ದೇವಿ ಮುರಳಿಕೃಷ್ಣ, ಅಕ್ಷತಾ ಶೆಟ್ಟಿ, ರಕ್ಷಾ ಮತ್ತು ಶ್ರೀಜಾ ಶೆಟ್ಟಿಯವರ ತಂಡ ಹಾಗೂ ಜೂನಿಯರ್ ವಿಭಾಗದಲ್ಲಿ ವರುಣ್ ಕೆ, ಪವನ್ […]

Annual Day Celebrations 2014-15 on December 13 & 14

Annual Day Celebrations 2014-15 on December 13 & 14

Tuesday, December 9th, 2014
ಶಾಲೆಯಲ್ಲಿ ಮಕ್ಕಳ ಸುರಕ್ಷಾ ಸಪ್ತಾಹ ಪ್ರತಿಜ್ಞೆ ಹಾಗೂ ವಿಚಾರಗೋಷ್ಠಿ

ಶಾಲೆಯಲ್ಲಿ ಮಕ್ಕಳ ಸುರಕ್ಷಾ ಸಪ್ತಾಹ ಪ್ರತಿಜ್ಞೆ ಹಾಗೂ ವಿಚಾರಗೋಷ್ಠಿ

Sunday, December 7th, 2014

ದಿನಾಂಕ 06-12-2014 ರ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಮಕ್ಕಳ ಸುರಕ್ಷಾ ಸಪ್ತಾಹ ಪ್ರತಿಜ್ಞೆ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮೇಡಂ ಮೋಹಿನಿಯವರು ಪ್ರತಿಜ್ಞೆಯನ್ನು ಹೇಳಿಸಿದರು. ಶಾಲಾ ಮುಖ್ಯಗುರುಗಳು, ಬೋಧಕ ವೃಂದ ಹಾಗೂ ಬೋಧಕೇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೈವೀಸ್ವರೂಪದ ಮಕ್ಕಳಿಗೆ ವಿದ್ಯೆ, ವಿನಯ, ವಿವೇಚನ, ವಿಜ್ಞಾನ, ಸುಜ್ಞಾನ ಕಲಿಸಿ ವಿಕಸಿತ ವ್ಯಕ್ತಿಗಳನ್ನಾಗಿ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದರು. ಶ್ರೀಮತಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.

ಶಿಕ್ಷಕರ ಕಾರ್ಯಾಗಾರ

ಶಿಕ್ಷಕರ ಕಾರ್ಯಾಗಾರ

Monday, November 24th, 2014

ತಾರೀಕು 22-11-2014 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಶೋಭಾ ಕೊಳತ್ತಾಯ ಸದಸ್ಯರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧ್ಯಯನ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆಸೆ ಚಿಗುರುವಂತೆ ಮಾಡಬೇಕಾಗುವುದು ಶಿಕ್ಷಕನ ಆಧ್ಯತೆ ಆಗಬೇಕು ಎಂದು ಶುಭಹಾರೈಸಿದರು. ಹರೀಶ್ ಶಾಸ್ತ್ರಿ ಭೌತಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು ಅತಿಥಿಗಳಾಗಿ ಆಗಮಿಸಿ ಅಧ್ಯಾಪಕರು, ಹೆತ್ತವರು ಮತ್ತು ಮಕ್ಕಳ ನಡುವೆ ಸಾಮರಸ್ಯತೆಯಿಂದ ಇದ್ದು ಶಿಕ್ಷಣ ಮುಂದುವರಿಸಲು ಸೂಕ್ತ ವೇದಿಕೆ ನಿರ್ಮಿಸುವಂತಾಗಬೇಕು, ವೃತ್ತಿ […]

ತಾಲೂಕು ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಉದ್ಘಾಟನೆ

ತಾಲೂಕು ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಉದ್ಘಾಟನೆ

Sunday, November 23rd, 2014

ತಾಲೂಕು ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯು ನವೆಂಬರ್ 22 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯಿತು. ಶಶಿಧರ್.ಬಿ.ಎಸ್, ಶಿಕ್ಷಣಾಧಿಕಾರಿಗಳು ಪುತ್ತೂರು ಪ್ರಯೋಗಾಲಯದಲ್ಲಿ ನಡೆಯುವ ಪ್ರಯತ್ನಗಳು ನಮ್ಮ ಭೂಮಿ ಮತ್ತು ಸಮಾಜದಲ್ಲಿ ನಡೆಯಬೇಕು. ನಮ್ಮ ಪ್ರಯೋಗ, ಪರಿಶ್ರಮ, ಪ್ರಯತ್ನಗಳು ಸಾಮಾಜಿಕವಾಗಿರಲಿ, ಮತ್ತು ಕಾರ್ಯರೂಪಕ್ಕೆ ಬರಲಿ ಎಂದು ನುಡಿದರು. ಹರೀಶ್ ಶಾಸ್ತ್ರಿ ಭೌತಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು ಅತಿಥಿಗಳಾಗಿ ಆಗಮಿಸಿ ಬಹಳ ಹಿಂದೆ ಭಾರತ ಉಪಗ್ರಹ ಅಂತರಿಕ್ಷಕ್ಕೆ ಕಳುಹಿಸಿದಾಗ ಬಡವಾದ ಭಾರತಕ್ಕೆ […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ

Wednesday, November 19th, 2014

ವಿದ್ಯಾಭಾರತಿ ವತಿಯಿಂದ ದಿನಾಂಕ 16-11-2014 ರಿಂದ 18-11-2014 ರವರೆಗೆ ರಾಜಸ್ಥಾನದ ಬಿಕನೆರ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಿಶೋರವರ್ಗ ವಿಭಾಗದಲ್ಲಿ ವಿಷ್ಣುಕೀರ್ತಿ ಹಾಗೂ ಪ್ರನ್ವಿತ್ ಆಳ್ವ -ಇನೋವೇಟಿವ್ ವಿಭಾಗದಲ್ಲಿ ಪ್ರದರ್ಶಿಸಿದ್ದ ಸ್ಪೈ ಮೇಷೀನ್ ಮಾದರಿಯು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಚ್ಛಭಾರತ ಅಭಿಯಾನ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಚ್ಛಭಾರತ ಅಭಿಯಾನ

Tuesday, October 21st, 2014

ದಿನಾಂಕ 02-10-2014 ರ ಗುರುವಾರದಂದು ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಛಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಯುವ ಉದ್ಯಮಿ ಕೆ.ಎಸ್.ಅರ್ಜುನ್, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಸಮಾಜಕ್ಕೆ ನಾವೇನಾದರೂ ಕೊಡಬೇಕು. ಮನಸ್ಸು ಎಷ್ಟು ನಿರ್ಮಲವಾಗಿದೆಯೋ, ನಮ್ಮ ಸುತ್ತಲ ಪರಿಸರವು ಸ್ವಚ್ಛತೆಯಿಂದ ಇರಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ.ಎಂ ಕೃಷ್ಣ ಭಟ್ ವಹಿಸಿ, ಮಾತನಾಡಿ, ಮುಂದಿನ ಭಾರತ ಯುವಕರ ಭಾರತ. ಸ್ವಯಂ ಪ್ರೇರಣೆಯಿಂದ ಸ್ವಚ್ಛಭಾರತವನ್ನಾಗಿ […]

ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

Tuesday, October 21st, 2014

ವಿದ್ಯಾಭಾರತಿ ಕರ್ನಾಟಕ, ಇದರ ಆಶ್ರಯದಲ್ಲಿ ಗುಲ್ಬರ್ಗದಲ್ಲಿ ನಡೆದ ರಾಜ್ಯ ಮಟ್ಟದ ಕೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳೊಂದಿಗೆ ತಮಿಳುನಾಡಿನ ತಿರುನೆಲ್‌ವೇಲಿಯಲ್ಲಿ ದಿನಾಂಕ 10-10-2014 ರಿಂದ 12-10-2014 ರವರೆಗೆ ನಡೆಯಲಿರುವ ದಕ್ಷಿಣ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಚಿತ್ರದಲ್ಲಿ: ಅನುಷಾ ಪ್ರಭು.ಎನ್, ಕೃತಿಕಾ ಪೆರ್ವೋಡಿ, ಲಹರಿ.ಕೆ, ಸ್ನೇಹಾ.ಎಸ್.ಶೆಟ್ಟಿ, ನಿಶ್ಮಿತಾ.ಪಿ.ಆರ್, ನೀಕ್ಷಿತಾ ಶೆಟ್ಟಿ, ನಮಿತ್.ಕೆ, ವರ್ಷಿತ್.ಬಿ.ಆರ್ ಅವರನ್ನು ಕಾಣಬಹುದು. ಇವರನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದೀಕ್ಷಿತ್ ರೈ ಹಾಗೂ ಕು.ಚಿತ್ರಾವತಿ ಇವರು ತರಬೇತುಗೊಳಿಸಿರುತ್ತಾರೆ.