QR Code Business Card
ಮೈಸೂರು ವಿಭಾಗ ಮಟ್ಟದ ತ್ರೋಬಾಲ್ - ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಮೈಸೂರು ವಿಭಾಗ ಮಟ್ಟದ ತ್ರೋಬಾಲ್ – ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, October 21st, 2014

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು ಮತ್ತು ಸಯ್ಯಸ್ ಮಾದನಿ ವಿದ್ಯಾಸಂಸ್ಥೆಗಳು, ಉಳ್ಳಾಲ ಇದರ ಆಶ್ರಯದಲ್ಲಿ ದಿನಾಂಕ 7-10-2014 ಮತ್ತು 8-10-2014 ರಂದು ನಡೆದ ಮೈಸೂರು ವಿಭಾಗ ಮಟ್ಟದ ಪ್ರೌಢ ಶಾಲಾ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದು ನವೆಂಬರ್‌ನಲ್ಲಿ ಕೋಲಾರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದೆ. ತಂಡದಲ್ಲಿ ದಿಶಾನ್, ತನುಷ್.ಕೆ.ಎಚ್, ಮೌನೀಷ್.ಎಂ, ಸಂಜನ್.ಜಿ.ಎಸ್, ನಾರಾಯಣ ಕೆದಿಲಾಯ, […]

ತ್ರೋಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ತ್ರೋಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Tuesday, October 21st, 2014

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಮತ್ತು ಮೌಂಟನ್‌ವ್ಯೂ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 13-09-2014 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಬೆಳ್ತಂಗಡಿಯಲ್ಲಿ 19-09-2014 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದೆ. ತಂಡದಲ್ಲಿ ದಿಶಾನ್, ತನುಷ್.ಕೆ.ಎಚ್, ಮೌನೀಷ್.ಎಂ, ಸಂಜನ್.ಜಿ.ಎಸ್, ನಾರಾಯಣ ಕೆದಿಲಾಯ, ಶ್ರೇಯಸ್, ವೈಶಾಖ್‌ಕೃಷ್ಣ, ನಚಿಕೇತ.ಎಂ, ಚಿಂತನ್.ಎಂ, […]

ವನ್ಯಜೀವಿ ಸಪ್ತಾಹ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮಕ್ಕೆ ಪ್ರಶಸ್ತಿ

Friday, October 3rd, 2014

ಕರ್ನಾಟಕ ರಾಜ್ಯವಲಯ ಉಪಅರಣ್ಯಧಿಕಾರಿಗಳ ಸಂಘ ಮಂಗಳೂರು ವಿಭಾಗದ ವತಿಯಿಂದ 1-10-2014 ರಂದು ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಚಿತ್ರಕಲೆ, ರಸಪ್ರಶ್ನೆ ಹಾಗೂ ಜ್ಞಾಪನ ಪರೀಕ್ಷೆ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನ್ವಿತ್ ರೈ 10 ನೇ ತರಗತಿ (ರಸಪ್ರಶ್ನೆ- ದ್ವಿತೀಯ), ಸ್ವಸ್ತಿಕ್ ಪದ್ಮ 7 ನೇ ತರಗತಿ (ರಸಪ್ರಶ್ನೆ -ತೃತೀಯ), ವರುಣ್.ಕೆ 7 ನೇ ತರಗತಿ (ರಸಪ್ರಶ್ನೆ – ತೃತೀಯ), ಸ್ವರೂಪ್ 10 ನೇ ತರಗತಿ (ಜ್ಞಾಪಕ ಪರೀಕ್ಷೆ – ತೃತೀಯ), ವಸಿಷ್ಠ 10 ನೇ ತರಗತಿ (ಜ್ಞಾಪಕ ಪರೀಕ್ಷೆ […]

ವಿವಿಧ ಕ್ರೀಡಾಕೂಟಗಳಿಗೆ ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಆಯ್ಕೆ

Wednesday, September 10th, 2014

1. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳಾದ ಅಭಿಷೇಕ್ 8ನೇ ತರಗತಿ, ನಿತಿನ್ ಕುಮಾರ್ ೮ನೇ ತರಗತಿ 2014-15 ನೇ ಸಾಲಿನ 14 ವರ್ಷದೊಳಗಿನ ಬಾಲಕರ ಮೈಸೂರು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಆಯ್ಕೆಯಾಗಿದ್ದು 9-9-14 ರಂದು ಅರಸು ಒಳಕ್ರೀಡಾಂಗಣ, ಗುಂಡ್ಲುಪೇಟೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 2. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ವಿದ್ಯಾರ್ಥಿ ರತನ್ ಕುಮಾರ್ ೮ನೇ ತರಗತಿ, ವಿದ್ಯಾರ್ಥಿನಿಯರಾದ ಶಿಲ್ಪಾ ಪಿ.ಯು. 9 ನೇ ತರಗತಿ, ಶ್ರೀ ಲಕ್ಷ್ಮೀ […]

ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

Friday, September 5th, 2014

ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀಮತಿ ಪುಷ್ಪಲತಾ ಹಿರಿಯ ಶಿಕ್ಷಕಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರು ಸಭಾಧ್ಯಕ್ಷತೆ ವಹಿಸಿ ಮತನಾಡುತ್ತಾ ಶಿಕ್ಷಕರ ಜ್ಞಾನಕ್ಕೆ ಮಿತಿ ಇರದು. ಇಂದು ನೀವು ಮಾಡುವ ಚೊಕ್ಕಟವಾದ ಕೆಲಸ ಕೇವಲ ತರಗತಿ ಮತ್ತು ಪುಸ್ತಕಗಳಿಗೆ ಸೀಮಿತವಾಗಿರದೆ ವಿಶಾಲ ದೃಷ್ಟಿ ಕೋನದಲ್ಲಿ ಬೆಳೆಯಬೇಕು ಎಂದರು. ಶ್ರೀಮತಿ ಮೋಹಿನಿ ಹಿರಿಯ ಆಂಗ್ಲಭಾಷ ಶಿಕ್ಷಕಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರು ಮುಖ್ಯ ಅತಿಥಿಯಾಗಿ, ಅಧ್ಯಾಪಕರು ವಿದ್ಯಾರ್ಥಿಗಳಿಗೆ ತತ್ವ ಆದರ್ಶಗಳನ್ನು […]

ಪುತ್ತೂರು ವಿವೇಕಾನಂದದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ

ಪುತ್ತೂರು ವಿವೇಕಾನಂದದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ

Wednesday, September 3rd, 2014

ಪುತ್ತೂರು: ಪುತ್ತೂರು ಎಸೋಸಿಯೇಶನ್ ಸಿವಿಲ್ ಇಂಜಿನಿಯರ್‍ಸ್ ಮತ್ತು ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ ನಡೆಯಿತು. ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವ ದೇಶ ಭಾರತ, ಇಂತಹ ದೇಶದಲ್ಲಿ ನಾವು ಮುಂದಿನ ಪೀಳಿಗೆಗೆ ನೀರು ಉಳಿಸುವಂತದ್ದು ನಮ್ಮ ಕರ್ತವ್ಯವಾಗಬೇಕೆಂದರು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು ಇವರು ಮಾತನಾಡುತ್ತಾ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ

Tuesday, September 2nd, 2014

ದಿನಾಂಕ 2-9-14 ರ ಮಂಗಳವಾರ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ 2014-15 ರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭವು ವಿವೇಕಾನಂದ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ ನಡೆಯಿತು. ಶ್ರೀ ಕೆ.ವಿ.ಶೆಣೈ, ಅಧ್ಯಕ್ಷರು, ರೋಟರಿ ಕ್ಲಬ್ ಪೂರ್ವ, ಪುತ್ತೂರು.ದ.ಕ ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ೨೦೨೦ರ ವೇಳೆಗೆ ಭಾರತ ಸದೃಢವಾಗುತ್ತದೆ ಎಂಬುವುದಕ್ಕೆ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಸಾಧಿಸಿ ತೋರಿಸಿತ್ತು. ಹಾಗೆಯೇ ನಿಮ್ಮಂತಹ ಯುವ ಪ್ರತಿಭೆಗಳಿಂದ ಭಾರತದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಿ ರಾಷ್ಟ್ರ ಮುನ್ನಡೆಯುವಂತಾಗಲಿ ಎಂದು […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟ

Monday, September 1st, 2014

ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ ೨೦೧೪-೧೫ರ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ವಿವೇಕನಗರ ತೆಂಕಿಲ ಪುತ್ತೂರು ಇದರ ಕ್ರೀಡಾಂಗಣದಲ್ಲಿ ನಡೆಯಿತು. ತಾ. 1-9-2014 ನೇ ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಶಾಲಾ ಸಭಾಂಗಣದಲ್ಲಿ ಕೊಂಕೋಡಿ ಪದ್ಮನಾಭ, ಅಧ್ಯಕ್ಷರು ಕ್ಯಾಂಪ್ಕೊ. ಲಿ. ಮಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆ ದೈಹಿಕ ವ್ಯಾಯಾಮ ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಎಂದು ಶುಭ ನುಡಿದರು. ಎಂ. ಓ. ಕುಳ್ಳೆಗೌಡ ತಾಲೂಕು ದಂಡಾಧಿಕಾರಿಗಳು, ಹಾಗೂ ತಹಶೀಲ್ದಾರರು ಪುತ್ತೂರು […]

ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Sunday, August 31st, 2014

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕೀಡಾಕೂಟದಲ್ಲಿ ಭಾಗವಹಿಸಿದ ಬಾಲವರ್ಗದ ಬಾಲಕಿಯರ ತಂಡವು ಪ್ರಥಮ ತಂಡ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಕಿಶೋರ ವರ್ಗದ ಹುಡುಗರ ತಂಡ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದಿದೆ. ಕಿಶೋರ ವರ್ಗದ ಬಾಲಕಿಯರ ತಂಡ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದಿದೆ. ಅನುಷಾ ಪ್ರಭು ಎನ್. 400 ಮೀ ಪ್ರಥಮ, 1500 ಮೀ ಓಟ ಪ್ರಥಮ ಸ್ಥಾನ ಪಡೆದು […]

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪುಟ್‌ಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪುಟ್‌ಬಾಲ್ ಪಂದ್ಯಾಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Saturday, August 30th, 2014

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಮತ್ತು ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು, ಬಜಪೆ, ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಪುಟ್‌ಬಾಲ್ ಪಂದ್ಯಾಟದಲ್ಲಿ ನಮ್ಮ ಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದ ವಿದ್ಯಾರ್ಥಿಗಳ ಹೆಸರು: ನೆಲ್ಸನ್ ಮಾರ್ತಾಂಗ್, ಶಜ್‌ಜಿಂಗ್ ಶೈ, ಜೋಪ್‌ಮಿಕಿ ರಬೋನ್, ಬೊಯೆಮಿ ಸೂಚಿಯಾಂಗ್, ವಿಶಾಲ್‌ಧರ್, ವಿಶಾಲ್ ಸಿಂಪ್ಲಿ, ಡಿಫೆಂಡರ್ ಕ್ಯೂ, ಡಾವ್‌ಯೋ, ಶಮ್‌ಲಾಂಗ್ ರೇ, ಆಲ್‌ಫ್ರೆಡ್, ಪೆರ್‌ತಲಾಂಗ್, ರಾಮ್‌ಫಾವಾ.